Home Cinema ಹೊಸ ಅವತಾರದಲ್ಲಿ ಸಿಂಪಲ್‌ಸ್ಟಾರ್ ; 777-ಚಾರ್ಲಿ’ ಸಿನಿಮಾದ ನಯಾ ಖಬರ್..!

ಹೊಸ ಅವತಾರದಲ್ಲಿ ಸಿಂಪಲ್‌ಸ್ಟಾರ್ ; 777-ಚಾರ್ಲಿ’ ಸಿನಿಮಾದ ನಯಾ ಖಬರ್..!

299
0
SHARE

ಬೆಂಗಳೂರು. ಒಂದು ಸಿನಿಮಾ ತನ್ನ ಮೇಕಿಂಗ್‌ನಿಂದಲೇ ಪ್ರೇಕ್ಷಕರಲ್ಲಿ ಕ್ಯುರ‍್ಯಸಿಟಿ ಹುಟ್ಟಿಸಬೇಕು ಅಂದ್ರೇ ಆ ಸಿನಿಮಾದಲ್ಲಿ ಗಟ್ಟಿ ಕಂಟೆಂಟ್ ಇರಬೇಕು, ಖಡಕ್ ಪ್ರೆಸೆಂಟೇಶನ್ ಇರಬೇಕು. ಜೊತೆಜೊತೆಗೆ ಒಂದು ಫ್ರೆಶ್ ಸ್ಟೋರಿಲೈನ್‌ನ ಮ್ಯಾಜಿಕ್ ಕೂಡ ಇರಲೇಬೇಕು. ಇಂತಹ ಹಲವು ಕುತೂಹಲಗಳ ಮೂಟೆಯನ್ನ ಹೊತ್ತುಕೊಂಡೇ ಸ್ಯಾಂಡಲ್‌ವುಡ್‌ನಲ್ಲಿ 777-ಚಾರ್ಲಿ ಸಿನಿಮಾ ಸಕತ್ತಾಗೆ ಗಮನ ಸೆಳಿತಿದೆ. ಸಿಂಪಲ್‌ಸ್ಟಾರ್‌ನ ಒಂದು ಸ್ಪೆಷಲ್ ಅವತಾರವನ್ನ ನೋಡಿ ಕಣ್ತುಂಬಿಕೊಳ್ಳೊಕೆ ಅಡಿಯನ್ಸ್ ಕೂಡ ತುದಿಗಾಲಲ್ಲಿ ನಿಂತು ವೈಟ್ ಮಾಡ್ತಿದಾರೆ. ಚಿತ್ರದ ಹೊಸ ಮೇಕಿಂಗ್ ನೋಡ್ತಿದ್ರೆ ಸಿನಿಮಾದಲ್ಲಿ ಪಕ್ಕಾ ಏನೋ ಹೊಸಬಗೆಯ ಎಂಟರ್‌ಟೈನ್‌ಮೆಂಟ್ ರುಚಿಯಿದೆ ಗುರು ಎನ್ನುವ ಪಾಸಿಟಿವ್ ಟಾಕ್ ಗಾಂಧಿನಗರದಿಂದ ಕೇಳಿಬಂದಿದೆ.

ಸಿನಿಮಾದಿಂದ ಸಿನಿಮಾಗೆ ಚೇಂಜ್ ಓವರ್ ಬಯಸೋ ಸ್ಯಾಂಡಲ್‌ವುಡ್ ನಾರಾಯಣ ಇಲ್ಲೂ ಒಂದು ಹೊಸ ಪಾತ್ರಕ್ಕೆ ಕೈ ಹಾಕಿದ್ದಾರೆ. ಮನೆ,ಫ್ಯಾಕ್ಟರಿ,ಗಲಾಟೆ, ಇಡ್ಲಿ,ಸಿಗರೇಟ್,ಬಿಯರ್ ಎನ್ನುತ್ತ ತಲೆಗೆ ಹುಳಬಿಡೋ ಪ್ರಯತ್ನವನ್ನೂ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಾಣದ ಜೊತೆ ಯಾವಾಗ ನಟನೆಗೆ ಇಳಿದ್ರೋ ಆಗಲೇ ಚಾರ್ಲಿ ಸಮ್‌ಥಿಂಗ್ ಸ್ಪೆಷಲ್ ಆಗಿರುತ್ತೆ ಎನ್ನುವ ಟಾಕ್ ಸೃಷ್ಟಿಯಾಗಿತ್ತು. ಅದಕ್ಕೆ ಪೂರಕವಾಗಿ ಕಂಪ್ಲೀಟಾಗಿ ರಕ್ಷಿತ್ ಶೆಟ್ಟಿ ತಮ್ಮ ಮ್ಯಾನರಿಸಂ ಹಾಗೂ ಔಟ್‌ಲುಕ್ ಬದಲಾಯಿಸಿಕೊಂಡಿದ್ದಾರೆ. ತಾವು ಒಂದು ಕ್ಯಾರೆಕ್ಟರ್ ಒಪ್ಪಿಕೊಂಡೇ ಅದರ ಆಳಅಗಲಗಳನ್ನ ಸ್ಟಡಿ ಮಾಡೋ ರಕ್ಷಿತ್‌ಗೆ 777-ಚಾರ್ಲಿ ಒಂದು ಚಾಲೆಂಜಿಂಗ್ ಸಿನಿಮಾವಾಗಲಿದೆ. ಸೋ, ಒಂದು ಸಿಂಪಲ್ ಎಳೆಯನ್ನ ಹಿಡಿದಿಟ್ಟುಕೊಂಡೇ ಎಕ್ಸ್ಟ್ರಾಡಿನರಿ ಕಥೆಯೊಂದನ್ನ ಪ್ರೇಕ್ಷಕರಿಗೆ ಪ್ರೆಸೆಂಟ್ ಮಾಡೋ ಆಸೆ ಸಿಂಪಲ್‌ಸ್ಟಾರ್ ಮನಸ್ಸಿನಲ್ಲಿದೆ.

ಈಗಾಗಲೇ 777-ಚಾರ್ಲಿ ಬಹುತೇಕ ಶೂಟಿಂಗ್ ಮುಗಿದಿದೆ. ಗುಜರಾತ್ ಹಾಗೂ ರಾಜಸ್ಥಾನದ ಸುಂದರ ಲೊಕೆಷನ್‌ಗಳು ಚಾರ್ಲಿಯ ದೃಶ್ಯ ಶ್ರೀಮಂತಿಕೆಯನ್ನ ಹೆಚ್ಚಿಸಲಿದೆ. ಇನ್ನು ಕೆಲವು ಮುಖ್ಯವಾದ ಸೀನ್‌ಗಳನ್ನ ದೇಶದ ಬೇರೆಬೇರೆ ಪ್ರದೇಶಗಳಲ್ಲಿ ಶೂಟ್ ಮಾಡುವ ಪ್ಲಾನ್ ಯುವನಿರ್ದೇಶಕ ಕಿರಣ್‌ರಾಜ್‌ರದ್ದು. ಸಾಮಾನ್ಯವಾಗಿ ಚಾರ್ಲಿ ಒಂದು ಪ್ಯೂರ್ ರೋಡ್ ಟ್ರಪ್ ಸಿನಿಮಾನಾ ಎನ್ನುವ ಪ್ರಶ್ನೆ ಹುಟ್ಟಿಕೊಂಡ್ರೂ, ಸಿನಿಮಾದಲ್ಲಿ ಭಾವನೆಗಳ ಸಮ್ಮೀಲನವೇ ಸೆಂಟರ್ ಆಫ್ ಅಟ್ರಾಕ್ಷನ್ ಅಗಲಿದೆ ಎಂದು ಅರ್ಥೈಸಿಕೊಳ್ಳಬಹುದು. ರಕ್ಷಿತ್ ಶೆಟ್ಟಿ ಈ ಚಾರ್ಲಿಗೆ ಯಾಕೆ ಇಷ್ಟು ಹತ್ತಿರವಾಗ್ತಾರೆ..? ಕಥೆಯಲ್ಲಿ ಚಾರ್ಲಿಯ ಪಾತ್ರದ ಶೇಡ್ ಏನು ಅಂತ ಸದ್ಯದಲ್ಲೇ ರಿವೀಲ್ ಆಗಬೇಕಿದೆ.

ಒಬ್ಬ ಮನುಷ್ಯ ಹಾಗೂ ಪ್ರಾಣಿಯ ನಡುವಿನ ಸಂಬಂಧ ಹೇಗೆಲ್ಲ ಬೇರೆರೀತಿಯ ತಿರುವು ಪಡೆದುಕೊಳ್ಳತ್ತೆ ಎನ್ನುವ ಸೂಕ್ಷ್ಮತೆಯನ್ನ ಚಾರ್ಲಿ ಎತ್ತಿಹಿಡಿಯಲಿದ್ದಾನೆ. ಕನ್ನಡದಲ್ಲಿ ಇಂತಹ ಪ್ರಯತ್ನಗಳಿಗೆ ಹೊಸನಾಂದಿ ಹಾಡಲು ಚಾರ್ಲಿ ಸಜ್ಜಾಗಿದ್ದಾನೆ. ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್.ಬಿ.ಶೆಟ್ಟಿ ಡಾಕ್ಟರ್ ಪಾತ್ರದಲ್ಲಿ ಯಾವ ಮೋಡಿ ಮಾಡ್ತಾರೋ ಎನ್ನುವ ಕುತೂಹಲವೂ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗೇ ಇದೆ. ಚಾರ್ಲಿ ಸಿನಿಮಾದ ಮೂಲಕ ರಕ್ಷಿತ್ ಹಾಗೂ ರಾಜ್.ಬಿ.ಶೆಟ್ಟಿ ಮೊದಲಬಾರಿಗೆ ಪರದೆಯ ಮೇಲೆ ಮನರಂಜನೆಯ ಥಡ್ಕಾ ಕೊಡಲಿದ್ದಾರೆ.

ಲಾಕ್‌ಡೌನ್ ಹಿನ್ನಲೆಯಲ್ಲಿ 777-ಚಾರ್ಲಿ ಸ್ಥಗಿತಗೊಂಡಿತ್ತು. ಹೊರಪ್ರದೇಶಗಳಲ್ಲೇ ಸಿನಿಮಾದ ಶೂಟಿಂಗ್ ಬಾಕಿಯಿರೋ ಕಾರಣದಿಂದ ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಚಿತ್ರವನ್ನ ಶೂಟ್ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ. ಕೊರೋನಾ ಎಫೆಕ್ಟ್‌ ನಿಂದ ಚಿತ್ರರಂಗದ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಕಾರಣವೇ 777-ಚಾರ್ಲಿ ಕೂಡ ಪರಿಸ್ಥಿತಿ ಒಂದು ಹದಕ್ಕೆ ಬಂದಮೇಲೆ ತನ್ನ ಕಾಮಾಲ್ ತೋರಿಸಲಿದೆ. ರಕ್ಷಿತ್ ಶೆಟ್ಟಿಯ ಲೈಟ್ ಗಡ್ಡದ ಲುಕ್ ಕೂಡ ಹೊಸತನದ ದಾರಿ ಹಿಡಿದಿದೆ. ಚಿತ್ರದ ಸ್ಟೋರಿಲೈನ್ ವಿಷಯದಲ್ಲಿ ಯಾವ ಗುಟ್ಟುಗಳು ರಿವೀಲ್ ಆಗಿಲ್ಲ. ಎಲ್ಲವನ್ನೂ ತೆರೆಯಮೇಲೆ ನೋಡಿ ಆನಂದಿಸಿ ಎನ್ನುವ ಮೇಸೆಜನ್ನ ಇನ್‌ಡೈರೆಕ್ಟ್ ಆಗಿ ಈ ಮೇಕಿಂಗ್‌ಗಳು ನೀಡ್ತಿವೆ. ಈಗ ಲಾಕ್‌ಡೌನ್ ಸಡಿಲಿಕೆಯಾಗಿ ಯಾವಾಗ ಚಿತ್ರಪ್ರದರ್ಶಗಳು ಶುರುವಾಗುತ್ತೆ ಗೊತ್ತಿಲ್ಲ. ಆದರೆ 777-ಚಾರ್ಲಿ ಖಂಡಿತ ಒಂದು ಜರ್ಬದಸ್ತ್ ಪ್ರಾಡೆಕ್ಟ್ ಆಗಿ ಹೊರಹೊಮ್ಮುತ್ತೆ ಎನ್ನುವ ನಂಬಿಕೆ ರಕ್ಷಿತ್ ಅಭಿಮಾನಿ ಬಳಗದ್ದು.

LEAVE A REPLY

Please enter your comment!
Please enter your name here