Home Cinema ಕೊರೊನಾ ಸಂಕಟಕ್ಕೆ ಸೀರಿಯಲ್ ಕನಸು ಕಮರಿತು..! ಸುಜಾತಾ ದಿವ್ಯ ಅರಮನೆ ಏಕಾಏಕಿ ಕುಸಿಯಿತು..!

ಕೊರೊನಾ ಸಂಕಟಕ್ಕೆ ಸೀರಿಯಲ್ ಕನಸು ಕಮರಿತು..! ಸುಜಾತಾ ದಿವ್ಯ ಅರಮನೆ ಏಕಾಏಕಿ ಕುಸಿಯಿತು..!

389
0
SHARE

ಬೆಂಗಳೂರು. ಸೀರಿಯಲ್ ಪ್ರಿಯರು ಅಪ್ಪಿತಪ್ಪಿನೂ ಮಿಸ್ ಮಾಡದೇ  ಓದಬೇಕಾದ ಸ್ಟೋರಿಯಿದು. ಕೊರೊನಾ ಎಫೆಕ್ಟ್  ಗೆ ಕಿರುತೆರೆ ನಲುಗಿಹೋಗಿರೋ ವಿಷಯ ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಓರಿಜಿನಲ್ ಸೀರಿಯಲ್‌ಗಳ ಮೇಲೆ ಡಬ್ಬಿಂಗ್ ಸೀರಿಯಲ್‌ಗಳು ಸವಾರಿ ಮಾಡ್ತಿವೆ ಎಂಬ ಕೂಗು ಜೋರಾಗಿರೋ ಹಿನ್ನಲೆಯಲ್ಲಿ ಧಾರವಾಹಿ ಲೋಕದಲ್ಲಿ ಹೊಸ ಹಲ್‌ಚಲ್ ಎದ್ದಿದೆ. ಈ ಹಠಾತ್ ಬೆಳವಣಿಗೆ ಎಲ್ಲಿ ಹೋಗಿ ಮುಟ್ಟುತ್ತೆ ಎಂಬ ಆತಂಕವೂ ಕನ್ನಡದ ಕಿರುತೆರೆಯಲ್ಲಿ ಕೆಲಸ ಮಾಡುವವರ ಪಾಲಾಗಿದೆ. ವೈಂಡ್‌ಅಪ್ ಆದ ಮತ್ತು ಆಗ್ತಿರೋ ಸೀರಿಯಲ್‌ಗಳನ್ನ ವೀಕ್ಷಕ ಮರೆತು ಡಬ್ಬಿಂಗ್ ಸೀರಿಯಲ್‌ಗಳನ್ನ ವೀಕ್ಷಕರು ಅಪ್ಪಿಕೊಳ್ಳುತ್ತಿದ್ದರಾ ಎಂಬ ಪ್ರಶ್ನೆ ಎದ್ದುಕಾಣ್ತಿದೆ.

ಈಗಾಗಲೇ ಕೊರೋನಾ ಹೊಡೆತಕ್ಕೆ ೨೦ ಸೀರಿಯಲ್‌ಗಳು ತನ್ನ ಬಾಗಿಲಿಗೆ ಬೀಗ ಜಡಿದು ಮನೆಗೆ ಹೋಗಿದೆ. ಇದರ ಬೆನ್ನಲ್ಲೇ ಡಬ್ಬಿಂಗ್ ಸೀರಿಯಲ್‌ಗಳು ನಿಧಾನವಾಗಿ ಕನ್ನಡ ಪ್ರೇಕ್ಷಕರನ್ನ ಸೆಳೆತಿದೆ. ಡಬ್ಬಿಂಗ್ ಧಾರವಾಹಿಗಳ ಕ್ವಾಲಿಟಿ ಹಾಗೂ ರೀಚ್ ಬಗ್ಗೆಯೂ ಕಿರುತೆರೆಯಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ ಡಬ್ಬಿಂಗ್ ಸೀರಿಯಲ್‌ಗಳು ನಮಗೆ ಬೇಕಾ ಬೇಡ್ವಾ ಎನ್ನುವ ನಿಖರವಾದ ಡಿಸಿಷನ್ ತೆಗೆದುಕೊಳ್ಳುವಲ್ಲಿ ಇಂಡಸ್ಟ್ರಿಯಲ್ಲೇ ಕೆಲವು ಪರ-ವಿರೋಧ ವಾದಗಳು ಕ್ರಿಯೆಟ್ ಆಗಿರೋ ಮಾತನಂತೂ ತೆಗೆದುಹಾಕುವಂತಿಲ್ಲ. ಯಾಕಂದ್ರೆ ಖಾಸಗಿ ಚಾನೆಲ್‌ಗಳ ನಿರ್ವಹಣೆ ಹಾಗೂ ನಿರ್ಧಾರ ಕೂಡ ಇಲ್ಲಿ ಪ್ರಮುಖವಾದ ಪಾತ್ರವಹಿಸ್ತಿದೆ.

ಲಾಕ್‌ಡೌನ್‌ನಿಂದಾಗಿ ಸಿನಿಮಾ ಹಾಗೂ ಕಿರುತೆರೆಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಕಲಾವಿದರು ಹಾಗೂ ಟೆಕ್ನಿಶಿಯನ್‌ಗಳು ಮನೆಯಲ್ಲಿ ಕೆಲಸವಿಲ್ಲದೇ ಖಾಲಿ ಕೂರುವಂತಹ ಅನಿವಾರ್ಯವೂ ಎದುರಾಗಿತ್ತು. ಹಾಗಾಗಿಯೇ ಲಾಕ್‌ಡೌನ್ ಸಡಿಲಿಕೆಯಾದ ಮೇಲೆ ಬೇರೆಬೇರೆ ಕಾರಣಗಳಿಂದ 28 ಕನ್ನಡ ಧಾರವಾಹಿಗಳು ನಿಂತುಹೋಗಿತ್ತು. ಒಂದು ಸೀರಿಯಲ್ ಸೆಟ್‌ನಲ್ಲಿ ಏನಿಲ್ಲ ಅಂದ್ರೂ 30-40 ಮಂದಿ ಕೆಲಸ ಮಾಡುತ್ತಿದ್ದರಿಂದ ಇದೊಂದು ಗಂಭೀರ ಸಮಸ್ಯೆಯಾಗಿ ಕಿರುತೆರೆಗೆ ಪರಿಣಾಮ ಬೀರಿತ್ತು.

ಕಿರುತೆರೆಯ ಮುಖ್ಯಂಗವೆನಿಸಿಕೊಂಡಿರೋ ಕರ್ನಾಟಕ ಟೆಲಿವಿಶನ್ ಅಸೊಸಿಯೆಶನ್ ಈಗ ತನ್ನ ಅಭಿಪ್ರಾಯವನ್ನ ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿ ಬಿಚ್ಚಿಟ್ಟಿದೆ. ಅಧ್ಯಕ್ಷರಾದ ಶಿವಕುಮಾರ್ ಡಬ್ಬಿಂಗ್ ಹಾವಳಿಯ ಕುರಿತಾಗಿ ತಮ್ಮ ನಿಲುವನ್ನ ತಿಳಿಸಿದ್ದಾರೆ. ಡಬ್ಬಿಂಗ್ ಸೀರಿಯಲ್‌ಗಳ ಎಫೆಕ್ಟ್‌ನಿಂದ ಕನ್ನಡ ಧಾರವಾಹಿಗಳ ಮೇಲೆ ನೇರಹೊಡೆತ ಬಿದ್ದಿದೆ. ಲಾಕ್‌ಡೌನ್‌ಗಿಂತಲೂ ಡಬ್ಬಿಂಗ್ ಸೀರಿಯಲ್‌ಗಳ ಹೊಡೆತವನ್ನ ಕನ್ನಡ ಕಿರುತೆರೆ ಅನುಭವಿಸುತ್ತಿದೆ. ಮೊದಲು ಪೌರಣಿಕ ಧಾರವಾಹಿಗಳ ಡಬ್ಬಿಂಗ್ ಮಾತ್ರ ಆಗುತ್ತೆ ಅಂತ ಮಾತಾಗಿತ್ತು. ಆದರೆ ಈಗ ಸಾಮಾಜಿಕ ಧಾರವಾಹಿಗಳು ಕೂಡ ಡಬ್ ಆಗಿ ಕನ್ನಡಕ್ಕೆ ಬರ‍್ತಿರೋದು ನಿಜಕ್ಕೂ ವಿಷಾದನೀಯ ಎನ್ನುತ್ತ ತಮ್ಮ ಓಪಿನಿಯನ್‌ನ್ನ ತೆರೆದಿಟ್ಟಿದ್ದಾರೆ.

ಇನ್ನು ಈ ವಾದವನ್ನ ಖಾಸಗಿ ಚಾನೆಲ್‌ಗಳ ಬಿಜಿನೆಸ್ ಹೆಡ್‌ಗಳು ಒಪ್ಪೊಕೆ ತಯಾರಾಗಿಲ್ಲ. ಯಾಕಂದ್ರೆ ಡಬ್ಬಿಂಗ್ ಸೀರಿಯಲ್‌ಗಳಿಂದ ಕನ್ನಡ ಸೀರಿಯಲ್‌ಗಳು ಸ್ಟಾಪ್ ಆಗುತ್ತೆ ಎನ್ನುವ ಮಾತು ಸತ್ಯಕ್ಕೆ ದೂರವಾಗಿದ್ದು, ಎರಡಕ್ಕೂ ಅದರದೇ ಆದ ವ್ಯೂವರ್‌ಶಿಪ್ ಇದೆ. ಹಾಗಾಗೀ, ನಮ್ಮ ಕನ್ನಡದ ಓರಿಜಿನಲ್ ಕಂಟೆಂಟ್ ಕೂಡ ಉಳಿಯುತ್ತೆ ಅಂತ ಭರವಸೆ ನೀಡಿದ್ದಾರೆ.

ಇದರ ಮಧ್ಯೆ ಕನ್ನಡ ಸೀರಿಯಲ್‌ಗಳಲ್ಲಿ ಕೆಲಸ ಮಾಡ್ತಿರೋ ಹಲವು ಕಲಾವಿದರು ತಮ್ಮದೇ ಅಭಿಪ್ರಾಯವನ್ನ ಹೊಂದಿದ್ದಾರೆ. ಡಬ್ಬಿಂಗ್ ಸೀರಿಯಲ್‌ಗಳಿಗೆ ನಿಜಕ್ಕೂ ರೇಟಿಂಗ್ ಬರುತ್ತಾ ಎನ್ನುವ ಪ್ರಶ್ನೆಗೆ ಉತ್ತರ ಈ ಮೂಲಕ ಸಿಕ್ಕಿದೆ. ಹೂಡಿಕೆ ಹಾಗೂ ಪ್ರೇಕ್ಷಕರನ್ನ ಮನಸ್ಸಿನಲ್ಲಿಟ್ಟುಕೊಂಡೇ ಕೆಲವು ನಿರ್ಧಾರಗಳನ್ನ ಖಾಸಗಿ ಚಾನೆಲ್‌ಗಳು ತೆಗೆದುಕೊಳ್ತಿವೆ. ಸೀರಿಯಲ್‌ಗಳು ನಿಂತುಹೋಗಲು ಈ ಡಬ್ಬಿಂಗ್ ಕಂಟೆಂಟ್ ಕಾರಣವಾಗುತ್ತಾ ಎನ್ನುವ ಗೊಂದಲಕ್ಕೆ ಸೂಕ್ತ ಉತ್ತರ ಸಿಗಬೇಕಾದ ಪರಿಸ್ಥಿತಿ ಎದುರಾಗಿದೆ.

ಒಟ್ಟಿನಲ್ಲಿ ಹೊಸನೀರು ಬಂದಮೇಲೆ ಹಳೇನೀರು ಕೊಚ್ಚಿಹೋಗಲೇಬೇಕು ಎನ್ನುವ ಮಾತಿನಂತೆ ಬದಲಾದ ಕಿರುತೆರೆಯ ದೃಷ್ಟಿಕೋನವನ್ನ ಸ್ವೀಕರಿಸಲೇಬೇಕಾಗಿದೆ. ಇಲ್ಲಿ ಕಲಾವಿದರ ಸಮಸ್ಯೆಗಳಿಗಿಂತ ಸೀರಿಯಲ್‌ಗಳ ಪ್ರೊಡಕ್ಟಿವಿಟಿ ಮತ್ತು ಲಾಭಂಶವೂ ತನ್ನ ಪಾತ್ರ ವಹಿಸಿಲಿದೆ. ಕೆಲವರು ಡಬ್ಬಿಂಗ್ ಬೇಕು ಎಂದರೇ, ಇನ್ನು ಹಲವರು ಡಬ್ಬಿಂಗ್‌ನಿಂದ ಯಾವ ಹೊಡೆತವೂ ಬೀಳಲ್ಲ ಎನ್ನುವ ಸಮರ್ಥನೆ ನೀಡಿದ್ದಾರೆ. ಅಂತೂ ರೇಟಿಂಗ್ ಇರೋ ಕನ್ನಡ ಸೀರಿಯಲ್‌ಗಳು ವೈಂಡ್‌ಅಪ್ ಆಗಿದ್ದು ಇಲ್ಲಿ ಗಂಭೀರವಾಗಿ ಯೋಚಿಸಲೇಬೇಕಾದ ವಿಚಾರ. ಚಿತ್ರೀಕರಣದ ರಿಸ್ಕ್ ಮಧ್ಯೆಯೇ ಡಬ್ಬಿಂಗ್ ಸೀರಿಯಲ್‌ಗಳು ತನ್ನ ಕ್ವಾಲಿಟಿ ಹಾಗೂ ಮೇಕಿಂಗ್ ಮೂಲಕ ವೀಕ್ಷಕರನ್ನ ಸೆಳೆತಿವೆ. ದೊಡ್ಡದೊಡ್ಡ ಡಬ್ಬಿಂಗ್ ಸೀರಿಯಲ್‌ಗಳನ್ನ ಈಗಾಗಲೇ ಕನ್ನಡ ವೀಕ್ಷಕನೂ ಎಂಜಾಯ್ ಮಾಡ್ತಿರೋ ಅಂಶವನ್ನ ಈಗಲೇ ನೆನಪಿಸಿಕೊಳ್ಳಬೇಕಾಗಿದೆ.

ಅದೇನೇ ಇರ‍್ಲಿ, ಸೀರಿಯಲ್ ಕ್ಷೇತ್ರವೂ ಒಂದು ಬೃಹತ್ ಉದ್ಯಮ. ಅದಕ್ಕೆ ಅದರದೇ ಕೆಲವು ರೂಪುರೇಷೆಗಳಿವೆ. ಚಾನೆಲ್ ಹೆಡ್ ಹಾಗೂ ಧಾರವಾಹಿ ನಿರ್ಮಾಪಕರ ಹೊಂದಾಣಿಕೆಯ ಮೇಲೆ ಸೀರಿಯಲ್ ಸೃಷ್ಟಿಯಾಗುತ್ತೆ. ಇದರ ಮೇಲೆ ಕನ್ನಡ ಕಿರುತೆರೆಗೆ ಡಬ್ಬಿಂಗ್ ಸೀರಿಯಲ್‌ಗಳು ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವ ಸೂಕ್ಷ್ಮತೆಗೆ ವೀಕ್ಷಕನ ಚಾಯ್ಸ್ ಸ್ಟೈಟ್ ಅನ್ಸರ್ ನೀಡಲಿದೆ.

 

LEAVE A REPLY

Please enter your comment!
Please enter your name here