ನೆಲಮಂಗಲ. ಗಿರೀಶ್,ಮೂಲತಃ ತುಮಕೂರಿನವ ಆದ್ರು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಡಿ ಗ್ರೂಪ್ ಲೇಔಟ್ನಲ್ಲಿ ವಾಸವಾಗಿದ್ದ. ಕೆಲ ವರ್ಷಗಳ ಶಿರಾ ಮೂಲದ ಲಕ್ಷ್ಮಿ ಎಂಬಾಕೆಯನ್ನ ಮದುವೆಯಾಗಿದ್ದ. ಮದುವೆಯಾದ ಬಳಿಕ ಪತ್ನಿ ಲಕ್ಷ್ಮೀಯ ತಂಗಿಯಾದ ನಾದಿನಿ ದೀಪಾಳನ್ನು ಕೂಡ ಅವರ ಮನೆಯಲ್ಲೆ ಇರಿಸಿಕೊಂಡಿದ್ದ. ಅಕ್ಕ ಭಾವನ ಜೊತೆಯಿದ್ದ ದೀಪಾ ಬ್ಯಾಡರಹಳ್ಳಿಯ ಮೆಡಿಕಲ್ಸ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ಲು.
ಅದೇ ಮಾಡಿಕೊಂಡಿದ್ರೆ ಜೀವನ ಚೆನ್ನಾಗಿ ಇರ್ತಿತ್ತು. ಆದ್ರೆ ಅಕ್ಕನ ಕಾಮುಕ ಗಂಡನ ಕೈತೋಳಿಗೆ ಸಿಕ್ಕಿ ಮೂರು ವರ್ಷಗಳಿಂದ ನಲುಗಿ ಹೋಗಿದ್ಲು. ಅಕ್ಕನಿಗೆ ಹೇಳುವ ಹಾಗೆ ಇಲ್ಲ, ಬಿಡುವ ಹಾಗು ಇಲ್ಲ.. ಹೀಗಾಗಿ 3 ವರ್ಷದಿಂದ ನಡೆದ ಲವ್ವಿಡೌವ್ವಿಗೆ ಅಂತ್ಯದ ಟೈಮ್ ಹತ್ತಿರವಾಗಿತ್ತು. ಮದುವೆ ವಯಸ್ಸಿಗೆ ಬಂದಿದ್ದ ದೀಪಾಳಿಗೆ ಭದ್ರಾವತಿ ಮೂಲದ ಯುವಕನ ಜೊತೆ ಮದುವೆ ಫಿಕ್ಸ್ ಆಗಿತ್ತು. ಇದೇ 14, 15ರಂದು ದೀಪಾ ಮದುವೆ ಆಗಿದ್ರೆ, ಗಂಡನ ಮನೆಯಲ್ಲಿ 10 ದಿನ ಕಳೆದಿರುತ್ತಿದ್ಲು. ಆದ್ರೆ ಮದುವೆಗೆ ಮೂರು ದಿನ ಮೊದಲು ದೀಪಾಳನ್ನ ಕರೆದುಕೊಂಡು ಓಡಿಹೋಗಲು ಭಾವ ಗಿರೀಶ್ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಬೆಂಗಳೂರಿನಿಂದ ತುಮಕೂರಿಗೆ ಹೋಗುವ ಮಾರ್ಗ ಮಧ್ಯೆ ಹತ್ಯೆ ಮಾಡಿ ರಸ್ತೆಬದಿ ಎಸೆದು ಹೆಂಡತಿ ಮನೆಗೆ ಹೋಗಿದ್ದಾನೆ.
ಮಗಳ ಗಂಡ ಅಳಿಮಯ್ಯ ಬಂದಿದ್ದನ್ನ ನೋಡಿ ಎಲ್ಲಾಪ್ಪ ದೀಪಾ ಬರಲಿಲ್ವಾ ಎಂದು ಪೋಷಕರ ಮನೆಯವರು ಕೇಳಿದ್ರೆ, ಅವಳು ನನಗು ಮೊದಲೆ ಹೊರಟ್ಲು, ಇನ್ನು ಬಂದಿಲ್ವಾ ಅಂತ ನಾಟಕವಾಡಿದ್ದಾನೆ. ಇದಾದ ಬಳಿಕ ತನ್ನ ಗೆಳೆಯರು ಮತ್ತು ಕುಟುಂಬದವರ ಜೊತೆ ಸೇರಿಕೊಂಡು ಹೈಡ್ರಾಮ್ ಮಾಡಿ ಪೊಲೀಸರಿಗೆ ದೂರು ಕೊಡಿಸಿದ್ದಾನೆ.
ಪ್ರಕರಣ ದಾಖಲು ಮಾಡಿದ ಖಾಕಿ ಆರೋಪಿ ಗಿರೀಶ್ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ ಬಳಿಕ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ..
ಸದ್ಯ ಆರೋಪಿ ಗಿರೀಶನನ್ನು ಬಂಧಿಸಿರುವ ಡಾಬಸ್ಪೇಟೆ ಪೊಲೀಸರು ಆರೋಪಿಯ ಜೊತೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ನಾಗರಾಜ್, ವರದರಾಜ್ ಮತ್ತು ಶಿವಣ್ಣನನ್ನ ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಹಲವರು ಭಾಗಿಯಾಗಿರುವ ಶಂಕೆಯಿದ್ದು ತನಿಖೆ ಮುಂದುವರೆಸಿದ್ದಾರೆ. ಅದೇನೆ ಇರಲಿ ಹೆಂಡತಿಯ ಮಗ್ಗುಲಲ್ಲೆ ನಾದಿನಿಯನ್ನ ಇಟ್ಟುಕೊಂಡು ಅವಳ ಜೊತೆ ಸರಸ ಸಲ್ಲಾಪ ಮಾಡಿದ ಕಾಮುಕ ಈಗ ಕಂಬಿ ಎಣಿಸುತ್ತಿದ್ದಾನೆ.