ಎಸ್.ಐ.ಟಿ ವಿಚಾರಣಗೆ ಗೈರಾದ ಜಾರಕಿಹೊಳಿ; ಪ್ರಕರಣಕ್ಕೆ ಸಿಕ್ಕಿತು ಮತ್ತೊಂದು ಟ್ವಿಸ್ಟ್!

ಎಸ್.ಐ.ಟಿ ವಿಚಾರಣಗೆ ಗೈರಾದ ಜಾರಕಿಹೊಳಿ; ಪ್ರಕರಣಕ್ಕೆ ಸಿಕ್ಕಿತು ಮತ್ತೊಂದು ಟ್ವಿಸ್ಟ್!

1009
0

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ. ಯುವತಿಯನ್ನು ಸಾಕಷ್ಟು ಬಾರಿ ವಿಚಾರಣೆಗೆ ಒಳಪಡಿಸಿ ದಾಖಲೆ ಸಮೇತ ಹೇಳಿಕೆ ಪಡೆದುಕೊಂಡಿದೆ. ಆರೋಪಿ ರಮೇಶ್ ಜಾರಕಿಹೊಳಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ 5 ಬಾರಿ ನೋಟಿಸ್ ನೀಡಿದೆ. 3 ಬಾರಿ ಎಸ್ ಎಸ್ ಐಟಿ ಜಾರಕಿಹೊಳಿ ವಿಚಾರಣೆ ನಡೆಸಿದೆ. ಆದ್ರೆ ಆರೋಪಿ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ನೀಡದಾಗಿದ್ದಾರೆ. ಹೀಗಾಗಿ ಎಸ್ಐಟಿ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ಸಾಹುಕಾರನಿಗೆ ನೋಟಿಸ್ ನೀಡಿತ್ತು.

ಈ ನಡುವೆ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಹೀಗಾಗಿ ಹೋಂ ಕ್ವಾರಂಟೈನ್ ನಲ್ಲಿರುವ ರಮೇಶ್ ಜಾರಕಿಹೊಳಿಗೆ ಮಂಗಳವಾರ ಎಸ್ ಐ ಟಿ ವಿಚಾರಣಗೆ ಗೈರಾಗಿದ್ದಾರೆ. ಅಲ್ಲದೇ 7 ದಿನ ಸಾಹುಕಾರ ಕಾಲಾವಕಾಶ ನೀಡುವಂತೆ ಕೋರಿದ್ದಾರೆ.

ಜಾರಕಿಹೊಳಿ ಪರ ವಕೀಲರಾದ ಶ್ಯಾಮ್ ಸುಂದರ್ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರನ್ನು ಭೇಟಿ ಮಾಡಿ ರಮೇಶ್ ಅವರಿಗೆ ವೈದ್ಯರು ಇನ್ನು 7 ದಿನಗಳ ಕಾಲ ಮನೆಯಲ್ಲಿಯೇ ಇರಲು ಹೇಳಿದ್ದಾರೆ. ಹೀಗಾಗಿ ಅವರು ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ. ಮತ್ತೆ ಸಮಯ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಎಸ್ಐಟಿ ಅಧಿಕಾರಿಗಳು ಇದೆ ತಿಂಗಳು 28 ಕ್ಕೆ ಹಾಜರಾಗುವುಂತೆ ವಕೀಲರ ಮೂಲಕವೇ ನೋಟಿಸ್ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಎಸ್ಐಟಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪಿಐಎಲ್ ಕೂಡಾ ದಾಖಲಿಸಲಾಗಿತ್ತು. ಘನ ನ್ಯಾಯಾಲಯ ಎಸ್ಐಟಿಗೆ ತನಿಖಾ ಪ್ರಗತಿಯ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ನೀಡಬೇಕು ಎಂದು ಆದೇಶ ನೀಡಿದೆ.

ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆ ಬಳಿಕವೇ ಪ್ರಕರಣ ಮತ್ತಷ್ಟು ಸಂಗತಿ ಬಯಲಾಗಬೇಕಾಗಿದೆ. ಇದೇ ತಿಂಗಳ 28ಕ್ಕೆ ಆರೋಪಿ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

VIAಎಸ್.ಐ.ಟಿ ವಿಚಾರಣಗೆ ಗೈರಾದ ಜಾರಕಿಹೊಳಿ; ಪ್ರಕರಣಕ್ಕೆ ಸಿಕ್ಕಿತು ಮತ್ತೊಂದು ಟ್ವಿಸ್ಟ್!
SOURCEಎಸ್.ಐ.ಟಿ ವಿಚಾರಣಗೆ ಗೈರಾದ ಜಾರಕಿಹೊಳಿ; ಪ್ರಕರಣಕ್ಕೆ ಸಿಕ್ಕಿತು ಮತ್ತೊಂದು ಟ್ವಿಸ್ಟ್!
Previous articleಕೊರೊನಾ ನಡುವೆ ಹೆಚ್ಚುವರಿಯಾಗಿ ಉದ್ಭವವಾದ “ಆಕ್ಸಿಜನ್ ಎಮರ್ಜೆನ್ಸಿ”; ಏನಿದು ಗೊತ್ತೇ? ವಿಶೇಷ ವರದಿ
Next articleಕನ್ನಡ ಸಾಹಿತ್ಯ ಲೋಕದ ನಿಘಂಟು ತಜ್ಞ ಜಿ. ವೆಂಕಟಸುಬ್ಬಯ್ಯ ವಿಧಿವಶ

LEAVE A REPLY

Please enter your comment!
Please enter your name here