
ಫ್ಯಾನ್ಸ್ ಜೊತೆ ಕುಳಿತು ‘ವಿಕ್ರಾಂತ್ ರೋಣ’ ಸಿನಿಮಾ ನೋಡಿದ ಸುದೀಪ್ ಪತ್ನಿ..!
ನಟ ಕಿಚ್ಚ ಸುದೀಪ್ ಅವರ ವೃತ್ತಿಜೀವನಕ್ಕೆ ಪತ್ನಿ ಪ್ರಿಯಾ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ಇಂದು (ಜುಲೈ 28) ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರ ಎಲ್ಲೆಡೆ ಬಿಡುಗಡೆ ಆಗಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ಮುಂಜಾನೆಯೇ ಬಂದು ಸಿನಿಮಾ ನೋಡಿದ್ದಾರೆ ಪ್ರಿಯಾ ಸುದೀಪ್ .
ಅಭಿಮಾನಿಗಳ ಜೊತೆ ಕುಳಿತು ಅವರು ಸಿನಿಮಾ ವೀಕ್ಷಿಸಿದ್ದಾರೆ. ಅವರ ಜೊತೆ ನಿರೂಪ್ ಭಂಡಾರಿ ಮತ್ತು ಚಿತ್ರತಂಡದ ಇತರ ಸದಸ್ಯರು ಕೂಡ ಫಸ್ಟ್ ಶೋ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಅನೂಪ್ ಭಂಡಾರಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ.