ನೆಲದ ಮೇಲೆ ಕುಳಿತು ಬಾಳೆ ಎಲೆ ಊಟ ಸವಿದ ವಿದೇಶಾಂಗ ಸಚಿವ ಎಸ್ ಜೈಶಂಕರ್

ಬೆಂಗಳೂರು

ಆನೇಕಲ್: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ್  ಮನೆಗೆ ಕೇಂದ್ರ ವಿದೇಶಾಂಗ ಸಚಿವ ಖುದ್ದಾಗಿ ಭೇಟಿ ನೀಡಿ   ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಸವಿದರು ಮೂಲಕ ಸರಳತೆಯನ್ನು ಮೆರೆದಿದ್ದಾರೆ.. ಇನ್ನು ಊಟ ಮುಗಿಸಿ ಮಾತನಾಡಿದ ಕೇಂದ್ರ ಸಚಿವ ಎಸ್ ಜಯಶಂಕರ್, ಇಡೀ ಪ್ರಪಂಚ‌ ಸೇರಿದಂತೆ ಭಾರತದಲ್ಲಿ ನಾನು ಸುತ್ತಾಡುತ್ತಿದ್ದೇನೆ ವಿಚಾರಗಳನ್ನು ತಿಳಿದುಕೊಂಡು, ವಿಚಾರ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಮೋದಿ ಸರ್ಕಾರದ್ದು ಎರಡು ಧ್ಯೇಯ

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನೋ ಕಾಂಪ್ರಮೈಸ್ ಸಾಮಾಜಿಕ‌ ನ್ಯಾಯ, ಹಾಗೂ ಆರ್ಥಿಕ‌ ಭದ್ರತೆ ಕುರಿತು ನಾವು ಜಾಗೃತಿ ಮೂಡಿಸುತ್ತಿದ್ದೇವೆ ಅದೇ ವಿಚಾರ ಇಡೀ ದೇಶದಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ಕಾರ್ಯಕರ್ತನ ಮನೆಯಲ್ಲಿ ಕರೆಯ ಮೇರೆಗೆ ಬಂದು ಖುಷಿಯಾಗಿದೆ. ಇನ್ನು ಕಾರ್ಯಕರ್ತನ ಮನೆಯಲ್ಲಿ ಬೇಳೆ ಒಬ್ಬಟ್ಟು, ತುಪ್ಪ ಹಾಲು, ಬೆಲ್ಲದ ಪಾಯಸ, ಮುದ್ದೆ ಕಾಳು ಹುಳಿ,  ಪುಲ್ಕಾ ಬೇಳೆ ಖುರ್ಮಾ ಚಿತ್ರನ್ನಾ ಚಟ್ನಿ, ಪುಳಿಯೊಗರೆ, ಮಸಾಲ ಒಡೆ, ಅಪ್ಪಳ ಉಪ್ಪಿನಕಾಯಿ, ಚಪ್ಪರ ಅವರೆಕಾಯಿ ಪಲ್ಯ, ‌ಸವತೇಕಾಯಿ ಕೋಸಂಬರಿ, ಅನ್ನ ತಿಳಿ ಸಾರು, ಮೊಸರು, ಬಾಳೆ ಹಣ್ಣು ಮಧ್ಯಹ್ನ ಉಪಹಾರ ಮುಗಿಸಿ ವಾಪಸ್ಸಾದರು

Leave a Reply

Your email address will not be published.