
ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶಾರೂಖ್ ಖಾನ್ ಪುತ್ರ; ಅವರು ಏನ್ಮಾಡ್ತಿದ್ದಾರೆ ಗೊತ್ತಾ?
ಮುಂಬೈ: ಬಾಲಿವುಡ್ ಕಿಂಗ್ ಖಾನ್ ಇತ್ತೀಚೆಗೆ ಸಿನಿಮಾಗಳನ್ನ ಡಿಲೇ ಮಾಡುತ್ತಿದ್ದಾರೆ. 2 ವರ್ಷಕ್ಕೊಂದು ಸಿನಿಮಾ ಸಹ ಅವರಿಂದ ಬರುತ್ತಿಲ್ಲ, ಆದರೆ ಇತ್ತೀಚಗೆ ಡ್ರಗ್ಸ್ ಕೇಸ್ನಲ್ಲಿ ಜೈಲು ಪಾಲಾಗಿದ್ದ ಶಾರೂಖ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದ್ದಾರಂತೆ. ವರದಿಗಳ ಪ್ರಕಾರ ಆರ್ಯನ್ ಖಾನ್ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಬರಹಗಾರನಾಗಿರುವ ಅವರು, ತಮ್ಮ ಕಲ್ಪನೆ, ಯೋಚನೆಗಳನ್ನು ಬರಹ ರೂಪಕ್ಕಿಳಿಸುವ ತಯಾರಿ ನಡೆಸಿದ್ದಾರಂತೆ. ವೆಬ್ ಸೀರೀಸ್ ಹಾಗೂ ಸಿನಿಮಾ ಆಗುವ ಸಾಮರ್ಥ್ಯವಿರುವ ಕತೆಯ ತಯಾರಿಯಲ್ಲಿ ಅವರು ನಿರತರಾಗಿದ್ದಾರೆ ಎಂದು ವರದಿಯಾಗಿದೆ. ಆರ್ಯನ್ ಖಾನ್ ಯೋಚನೆಗಳೆಲ್ಲವೂ ಇನ್ನೂ ಬರವಣಿಗೆಯ ಹಂತದಲ್ಲಿದ್ದಾಗಲೇ ದೊಡ್ಡ ವೇದಿಕೆಯಲ್ಲಿ ತೆರೆ ಕಾಣುವ ನಿರೀಕ್ಷೆಯನ್ನೂ ಹುಟ್ಟುಹಾಕಿವೆ. ಒಟಿಟಿ ದೈತ್ಯ ಅಮೆಜಾನ್ ಪ್ರೈಮ್ನಲ್ಲಿ ವೆಬ್ ಸೀರೀಸ್ ಹಾಗೂ ಶಾರುಖ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್’ ಬ್ಯಾನರ್ನಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಪ್ರೈಮ್ನಲ್ಲಿ ಸೆಟ್ಟೇರಲಿರುವ ಸೀರೀಸ್ನಲ್ಲಿ ಒಬ್ಬ ಅಭಿಮಾನಿಯ ಜೀವನದ ಕುರಿತು ಕತೆ ಇರಲಿದೆ ಎನ್ನಲಾಗಿದೆ. ಸಿನಿಮಾದ ಕತೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.