ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಸೋನು ಗೌಡ ಮತ್ತೊಂದು ವಿಡಿಯೋ! AIN AdminBy AIN Admin

ಚಲನಚಿತ್ರ

ಕನ್ನಡ ಬಿಗ್ ಬಾಸ್ ಒಟಿಟಿ ಆರಂಭವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಸೋನು ಗೌಡ ಎಂಟ್ರಿ ಕೊಟ್ಟಿದ್ದಾರೆ. ಸೋನು ಗೌಡ ಎಂಟ್ರಿಯ ಬಗ್ಗೆ ಸಾಕಷ್ಟು ವಿರೋದಗಳು ಕೇಳಿ ಬರುತ್ತಿದೆ. ಈ ಮಧ್ಯೆ ಸೋನು ಗೌಡ ಮತ್ತೊಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ಬಿಗ್ ಬಾಸ್ ನಾನು ಯಾರು ಎಂಬ ಕಾನ್ಸೆಪ್ಟ್ ನೀಡಿದೆ. ಇದರಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಸೋನು ಗೌಡ ತಮ್ಮ ಇನ್ನೊಂದು ಖಾಸಗಿ ವಿಡಿಯೋ ಲೀಕ್ ಬಗ್ಗೆ ಮಾತನಾಡಿದ್ದಾರೆ.

ಈಗಾಗ್ಲೆ ಸೋನು ಗೌಡರ ವಿಡಿಯೋವೊಂದು ಲೀಕ್ ಆಗಿದೆ. ಇದರ ಬಗ್ಗೆ ಮಾತನಾಡಿದ್ದ ಸೋನು ಗೌಡ ನಾನು ಮಾಡಿದ ತಪ್ಪಿನಿಂದ ನನ್ನ ಕುಟುಂಬದ ಮರ್ಯಾದೆ ತೆಗೆದೆ. ವಿಡಿಯೋ ಲೀಕ್ ಆದ ಬಳಿಕ ನಾನು ಇದುವರೆಗೂ ನನ್ನ ತಾಯಿಯ ಮುಖ ನೋಡಿಲ್ಲ ಎಂದಿದ್ದಾರೆ. ಇದೀಗ ವಿಡಿಯೋ ಲೀಕ್ ಮಾಡಿದ್ದ ವ್ಯಕ್ತಿಯ ಬಳಿ ನನ್ನ ಇನ್ನೊಂದು ವಿಡಿಯೋ ಇದ್ದು ಅದು ಯಾವಾಗ ಲೀಕ್ ಮಾಡುತ್ತಾನೋ ಗೊತ್ತಿಲ್ಲ ಎಂದಿದ್ದಾರೆ.

ನನ್ನ ಪರಿಚಯದ ವ್ಯಕ್ತಿಯೊಬ್ಬ ನನ್ನ ಜೊತೆ ಮೂರು ವರ್ಷ ಇದ್ದ. ಅವನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ.ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಸೋನು ಗೌಡ ಹೇಳಿದ್ದಾರೆ. ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ.

ಒಂದು ವಿಡಿಯೋ ಲೀಕ್ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾವ ಹುಡುಗಿಯರಿಗೂ ಆಗಬಾರದು ಎಂದು ಸೋನು ಗೌಡ ಹೇಳಿದ್ದಾರೆ.

ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದ ಇಂಥವರಿಗೆಲ್ಲ ‘ಬಿಗ್​​ ಬಾಸ್​ ಕನ್ನಡ ಒಟಿಟಿ’ ವೇದಿಕೆಯಲ್ಲಿ ಅವಕಾಶ ನೀಡಿದ್ದು ಸರಿಯಲ್ಲ ಎಂದು ಕಮೆಂಟ್​ಗಳ ಮೂಲಕ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈಗ ಅದೇ ವಿಚಾರದ ಬಗ್ಗೆ ಸೋನು ಶ್ರೀನಿವಾಸ್​ ಗೌಡ ಮಾತನಾಡಿದ್ದಾರೆ. ತಮ್ಮ ಖಾಸಗಿ ವಿಡಿಯೋ  ಲೀಕ್​ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಎಲ್ಲವನ್ನೂ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ಒಬ್ಬ ಹುಡುಗನನ್ನು ಸೋನು ಶ್ರೀನಿವಾಸ್​ ಗೌಡ ಲವ್​ ಮಾಡುತ್ತಿದ್ದರು. ಇಬ್ಬರ ನಡುವಿನ ವಿಡಿಯೋ ಕಾಲ್​ ರೆಕಾರ್ಡ್​ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ರೀತಿ ಆಗಿದ್ದಕ್ಕೆ ಬಾಯ್​ ಫ್ರೆಂಡ್​ ಕಾರಣ ಎಂದು ಹೇಳಿದ್ದಾರೆ ಸೋನು. ಹಳೇ ಘಟನೆಯನ್ನು ನೆನಪಿಸಿಕೊಂಡು ದುಃಖ ಹೊರಹಾಕಿದ ಅವರನ್ನು ದೊಡ್ಮೆನೆಯೊಳಗೆ ಎಲ್ಲರೂ ಸಂತೈಸಿದ್ದಾರೆ. ಅವರನ್ನು ತಬ್ಬಿಕೊಂಡು ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ ನಟ ರಾಕೇಶ್​ ಅಡಿಗ.

‘ಅವನು ಮೊದಲಿನಿಂದ ನನಗೆ ಗೊತ್ತಿದ್ದ ಹುಡುಗ. ನಮ್ಮ ಜಾತಿಯವನು. ಅವರನ್ನು ಮದುವೆ ಆಗ್ತೀನಿ ಅಂತ ಮನೆಯಲ್ಲಿ ಹೇಳಿದ್ದೆ. ಒಂದು ದಿನ ವಿಡಿಯೋ ಕಾಲ್​ ಮಾಡು ಅಂದ. ಹೇಗೂ ಮದುವೆ ಆಗುತ್ತೇವಲ್ಲ ಅಂತ ನಾನು ವಿಡಿಯೋ ಕಾಲ್​ನಲ್ಲಿ ಹಾಗೆ ಮಾಡಿದೆ. ಅದನ್ನು ಅವನು ರೆಕಾರ್ಡ್​ ಮಾಡಿಕೊಂಡ. ಒಂದು ವಾರದ ನಂತರ ಅವನು ರೂಡ್​ ಆಗಿ ನಡೆದುಕೊಳ್ಳಲು ಶುರು ಮಾಡಿದ’ ಎಂದು ಆತನ ಬಗ್ಗೆ ಸೂನು ಗೌಡ ವಿವರಿಸಿದ್ದಾರೆ.

‘ಆ ವಿಡಿಯೋ ಇಟ್ಟುಕೊಂಡು ಬ್ಲಾಕ್​ ಮೇಲ್​ ಮಾಡುತ್ತಿದ್ದ. ಆಗಲೇ ನಾನು ಅಮ್ಮನ ಬಳಿಕ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದೆ. ಒಂದೂವರೆ ವರ್ಷದ ಬಳಿಕ ಮೆಸೇಜ್​ ಮಾಡಿ ಹೆದರಿಸಿದ. ವಿಡಿಯೋ ಲೀಕ್​ ಮಾಡ್ತೀನಿ ಅಂತ ಬೆದರಿಸಿದ. ಅಳುತ್ತಾ ನಾನು ಡಿಪ್ರೆಷನ್​ಗೆ ಹೋದೆ. ಆ ವಿಡಿಯೋ ಲೀಕ್​ ಆದ ಬಳಿಕ ನಾನು ನಮ್ಮ ಊರಿಗೆ ಹೋಗಿಲ್ಲ’ ಎಂದು ಸೋನು ಗೌಡ ಕಣ್ಣೀರು ಹಾಕಿದ್ದಾರೆ.

‘ನನ್ನ ನಂಬಿಕೆಗೆ ಮೋಸ ಆಯ್ತು. ನಾನು ಇದುವರೆಗೆ ಯಾವ ಹುಡುಗನನ್ನೂ ಕೈ ಹಿಡಿದುಕೊಂಡು ಮಾತನಾಡಿಸಿಲ್ಲ. ಇಲ್ಲಿ ಯಾರೂ ಸಾಚಾ ಅಲ್ಲ. ಎಲ್ಲರೂ ಇದನ್ನು ಮಾಡಿಕೊಂಡಿರುತ್ತಾರೆ. ಆದರೆ ನಂದು ಹೊರಗೆ ಬಂತು. ನಾನು ಪಬ್​ಗೆ ಹೋಗುತ್ತೇನೆ. ಎಲ್ಲ ಕಡೆ ಎಂಜಾಯ್​ ಮಾಡ್ತೀನಿ. ಆದರೆ ನಮ್ಮ ಅಮ್ಮ ಹಳ್ಳಿ ಕಡೆಯಿಂದ ಬಂದೋರು. ಅವರು ಅಷ್ಟು ದುಡ್ಡು ಮಾಡಿಟ್ಟಿರುವುದು ನಮಗೋಸ್ಕರ. ನಾನು ಅವರ ಮಾನ ಮರ್ಯಾದೆ ತೆಗೆದೆ ಎಂಬ ಫೀಲ್​ ನನ್ನನ್ನು ತುಂಬ ಕಾಡುತ್ತಿದೆ’ ಎಂದಿದ್ದಾರೆ ಸೋನು ಶ್ರೀನಿವಾಸ್​ ಗೌಡ.

Leave a Reply

Your email address will not be published.