Home Crime SP ಮನೆ ಮುಂದೆಯೇ ಗುಂಡು ಹಾರಿಸಿಕೊಂಡ ಪೊಲೀಸ್ ಪೇದೆ..? ಪೇದೆ ಸಾವು ಆತ್ಮಹತ್ಯೆಯೋ,ಕೊಲೆಯೋ ಎಂಬ ಅನುಮಾನಗಳ...

SP ಮನೆ ಮುಂದೆಯೇ ಗುಂಡು ಹಾರಿಸಿಕೊಂಡ ಪೊಲೀಸ್ ಪೇದೆ..? ಪೇದೆ ಸಾವು ಆತ್ಮಹತ್ಯೆಯೋ,ಕೊಲೆಯೋ ಎಂಬ ಅನುಮಾನಗಳ ಹುತ್ತ..?

353
0
SHARE

ಸರ್ಕಾರಿ ನೌಕರಿಯಲ್ಲಿದ್ದ ಆ ಯುವ ಪೇದೆಯ ಸಾವಿನ ಸುತ್ತ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಎಸ್ಪಿ ಮನೆ ಡ್ಯೂಟಿಯಲ್ಲಿದ್ದವ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನಾ..? ಅಥವಾ ಕೊಲೆ ಮಾಡಲಾಯ್ತಾ..? ಗೊತ್ತಿಲ್ಲ..ಪೇದೆಯ ಸಾವಿನ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗ್ತಿದೆ..

ಅನಾಥವಾಗಿ ಬಿದ್ದಿರುವ ಮೃತದೇಹ, ಮಗನ ಶವದ ಮುಂದೆ ಗೋಳಾಡ್ತಿರೋ ತಾಯಿ, ಘಟನೆ ಬಗ್ಗೆ ತೀವ್ರ ಪರಿಶೀಲನೆ ನಡೆಸುತ್ತಿರೋ ಅಧಿಕಾರಿಗಳು ಈ ದೃಶ್ಯಗಳೆಲ್ಲಾ ಕಂಡುಬಂದಿದ್ದು ಬಾಗಲಕೋಟೆ ನವನಗರದ ಎಸ್ಪಿ ನಿವಾಸದ ಮುಂದೆ..ಬೆಳ್ಳಂಬೆಳಿಗ್ಗೆ ಬಾಗಲಕೋಟೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದುಹೋಗಿದೆ.

ಏನಾಯ್ತಪ್ಪಾ ಅಂತ ನೋಡೋಸ್ಟ್ರಲ್ಲಿ ಕರ್ತವ್ಯ ನಿರತ ಪೇದೆಯೊಬ್ಬ ಹೆಣವಾಗಿದ್ದಾನೆ. ರಾತ್ರಿ ಎಸ್ಪಿ ನಿವಾಸದ ಡ್ಯೂಟಿಯಲ್ಲಿದ್ದ ಪೇದೆ ಮಂಜುನಾಥ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಂಜುನಾಥನ ಕತ್ತಿನ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಗಾಯಗಳಾಗಿವೆ.. ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ.

ಅದ್ರಲ್ಲಿ ಒಂದು ಮಿಸ್ ಫೈರ್, ಎರಡು ಬೇರೆಡೆ ಹಾರಿಸಲಾಗಿದೆ. ಇನ್ನೊಂದು ಮಾತ್ರ ಪೇದೆ ತಲೆ ಹೊಕ್ಕಿದ್ದು, ಪೇದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ. ರಿಷ್ಯಂತ್ ಸಾವಿನ ಹಿಂದೆ ಹಲವು ಅನುಮಾನಗಳು ಇವೆ ಸಮಗ್ರವಾಗಿ ಎಲ್ಲಾ ಆಯಾಮಗಳ ಮೂಲಕ ತನಿಖೆ ನಡೆಸುತ್ತೇವೆ ಎಂದ್ರು.

ಇನ್ನೂ ಪೇದೆ ಕುಟುಂಬ ಸ್ಥಳಕ್ಕೆ ಆಗಮಿಸಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಮೃತ ಪೇದೆ ಮಂಜು ನಿನ್ನೆಯಷ್ಟೇ ಊರಿಂದ ಬಂದಿದ್ದ. ಮನೆಯಲ್ಲಿ ಏನು ತೊಂದರೆ ಇರಲಿಲ್ಲ ಒಂದು ವೇಳೆ ಮನೆಯಲ್ಲೇ ಸಮಸ್ಯೆ ಇದ್ದಿದ್ದರೆ ಅಲ್ಲೇ ಸಾಯುತ್ತಿದ್ದ. ಗುಂಡು ಬಿದ್ದಿರುವ ಜಾಗ ನೋಡಿದ್ರೆ ಯಾರೋ ಹೊಡೆದಿದ್ದಾರೆ ಅನ್ನೋದು ನಮಗೆ ಅನುಮಾನ.

ನಮ್ಮ ಹುಡುಗ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವನನ್ನು ಗುಂಡು ಹೊಡೆದು ಸಾಯಿಸಿದ್ದಾರೆ ಎಂದು ಪೇದೆ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ..ಘಟನೆ ನಡೆದ ಸ್ಥಳದಲ್ಲಿ ಬೆಳಗ್ಗೆಯಿಂದ ಬೆರಳಚ್ಚು ತಜ್ಞರು, ಡಾಗ್ ಸ್ಕ್ವಾಡ್,ಬಾಂಬ್ ಡಿಟೆಕ್ಟರ್, ಬೆಳಗಾವಿಯಿಂದ ವಿಧಿ ವಿಜ್ಞಾನ ತಜ್ಞರ ಕರೆಸಿ ಸಾವಿನ ಕುರಿತು ಪರಿಶೀಲನೆ ನಡೆಸಲಾಯ್ತು. ಒಟ್ನಲ್ಲಿ ಪೇದೆ ಮಂಜುನಾಥ್ ಸಾವು ಸದ್ಯ ಹಲವು ಅನುಮಾನಗಳನ್ನ ಹುಟ್ಟುಹಾಕ್ತಿದೆ.

 

LEAVE A REPLY

Please enter your comment!
Please enter your name here