9 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ಮೊದಲ ವಿಕೆಟ್ ಪಡೆದ ಶ್ರೀಶಾಂತ್..!

ಕ್ರೀಡೆ

ಚೆನ್ನೈ: ಟೀಂ ಇಂಡಿಯಾ ಆಟಗಾರ ಎಸ್ ಶ್ರೀಶಾಂತ್ ಕ್ರಿಕೆಟ್​ಗೆ ದೂರವಾಗಿ ತುಂಬಾ ವರ್ಷಗಳೇ ಕಳೆದಿವೆ. ಐಪಿಎಲ್​ನಲ್ಲಿ ಮ್ಯಾಚ್​ ಫಿಕ್ಸಿಂಗ್​ ಪ್ರಕರಣದ ನಂತರ ಅವರು ಕ್ರಿಕೆಟ್​ನಿಂದ ದೂರವಾಗಿದ್ರು. ಅವರ ಮೇಲಿನ ನಿಷೇಧ ತೆರವುಗೊಂಡರೂ ಸಹ ಅವರಿಗೆ ಆಡುವ ಸಿಕ್ಕಿರಲಿಲ್ಲ. ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ ಹರಾಜಿನಲ್ಲೂ ಅವರು ಆಯ್ಕೆ ಆಗಿರಲಿಲ್ಲ. ಆದರೆ ಈಗ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡುತ್ತಿರುವ ಎಸ್ ಶ್ರೀಶಾಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೇಘಾಲಯ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಎಸ್ ಶ್ರೀಶಾಂತ್ 2 ವಿಕೆಟ್ ಪಡೆದು ಮಿಂಚಿದ್ದಾರೆ. ಶ್ರೀಶಾಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ವಿಕೆಟ್ ಪಡೆದಿದ್ದಾರೆ, ಆದರೆ ಈ ಬೇಟೆ ಅವರ ಅಭಿಮಾನಿಗಳಿಗೆ ಮತ್ತು ಸ್ವತಃ ಈ ವೇಗದ ಬೌಲರ್‌ಗೆ ತುಂಬಾ ವಿಶೇಷವಾಗಿದೆ.

ವಾಸ್ತವವಾಗಿ ಶ್ರೀಶಾಂತ್ 9 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದಿದ್ದಾರೆ. ಶ್ರೀಶಾಂತ್ 2013 ರಲ್ಲಿ ಇರಾನಿ ಕಪ್‌ನಲ್ಲಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ರೆಸ್ಟ್ ಆಫ್ ಇಂಡಿಯಾ ಪರ ಆಡಿದ ಶ್ರೀಶಾಂತ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ವಾಸಿಂ ಜಾಫರ್ ವಿಕೆಟ್ ಪಡೆದಿದ್ದರು. ಇತ್ತೀಚೆಗೆ, ಐಪಿಎಲ್ 2022 ಹರಾಜಿನಲ್ಲಿ ಶ್ರೀಶಾಂತ್ ತಮ್ಮ ಹೆಸರನ್ನು ಸಹ ನೋಂದಾಯಿಸಿಕೊಂಡಿದ್ದರು. ಆದರೆ ಹರಾಜಿನಲ್ಲಿ ಅವರ ಹೆಸರಾಗಲೀ, ಅವರ ಯಾವುದೇ ಸುದ್ದಿಯಾಗಲೀ ಹೊರಬಿದ್ದಿಲ್ಲ. ಇದು ಈಗಾಗಲೇ ನಿರೀಕ್ಷಿಸಲಾಗಿದ್ದರೂ ಸಹ. ಶ್ರೀಶಾಂತ್ ಈಗ ರಣಜಿ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.​​

Leave a Reply

Your email address will not be published.