ಶ್ರೀಲಂಕಾ ಬಳಿಕ ಬಾಂಗ್ಲಾದೇಶದಲ್ಲಿ ಬೆಲೆ ಏರಿಕೆ ಬಿಸಿ: ಹಲವೆಡೆ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಅಂತರಾಷ್ಟ್ರೀಯ

ಢಾಕಾ: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ, ಬಾಂಗ್ಲಾದೇಶ ಮತ್ತು ಚೀನಾ ನಡುವೆ ವಿಪತ್ತು ನಿರ್ವಹಣೆ ಮತ್ತು ಸಾಂಸ್ಕೃತಿಕ ಸಹಕಾರ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಸಹಿ ಮಾಡಿದೆ.

ಚೀನಾದ ವಿದೇಶಾಂಗ ಸಚಿವರು ಬಾಂಗ್ಲಾದೇಶಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಲಿದ್ದಾರೆ. ಇತ್ತ ಇಂಧನ ಬೆಲೆ ಏರಿಕೆ ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದು ಹಲವಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಬಾಂಗ್ಲಾದೇಶ ಶನಿವಾರದಿಂದ ಜಾರಿಗೆ ಬರುವಂತೆ ಇಂಧನ ಬೆಲೆಯನ್ನು ಶೇ 51.7 ಹೆಚ್ಚಿಸಿದ್ದು, ಈಗಾಗಲೇ ಅಧಿಕ ಹಣದುಬ್ಬರ ಎದುರಿಸುತ್ತಿರುವ ದೇಶದ ಜನರಿಗೆ ಇದರಿಂದ ಮತ್ತಷ್ಟು ಹೊರೆಯಾಗಿದೆ. ದಕ್ಷಿಣ ಏಷ್ಯಾದ ದೇಶವಾದ ಬಾಂಗ್ಲಾದೇಶ 416 ಬಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ್ದು,ಜಗತ್ತಿನಲ್ಲಿ ಅಭಿವೃದ್ಧಿ ಶೀಲ ದೇಶಗಳಲ್ಲೊಂದು ಎಂಬ ಖ್ಯಾತಿ ಘಳಿಸಿದೆ.

ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವಾಲಯ ಹೇಳಿದೆ. ಸರ್ಕಾರಿ ಸ್ವಾಮ್ಯದ ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ ಜುಲೈವರೆಗಿನ ಆರು ತಿಂಗಳಲ್ಲಿ ತೈಲ ಮಾರಾಟದಲ್ಲಿ 8 ಬಿಲಿಯನ್ ಟಾಕಾ ನಷ್ಟವನ್ನು ಅನುಭವಿಸಿದೆ.

ಬಾಂಗ್ಲಾದೇಶದ ಹಣದುಬ್ಬರ ದರವು ಸತತ ಒಂಬತ್ತು ತಿಂಗಳುಗಳವರೆಗೆ ಶೇ 6 ಆಗಿತ್ತು. ಜುಲೈನಲ್ಲಿ ವಾರ್ಷಿಕ ಹಣದುಬ್ಬರವು ಶೇ 7.48ಕ್ಕೆ ತಲುಪಿದೆ. ಇದು ಮಧ್ಯಮ-ಆದಾಯದ ಕುಟುಂಬಗಳು ತಮ್ಮ ದೈನಂದಿನ ವೆಚ್ಚಗಳನ್ನು ಪೂರೈಸಲು ಒತ್ತಡವನ್ನು ಹೇರುತ್ತದೆ.

Leave a Reply

Your email address will not be published.