
ಶ್ರೀಲಂಕಾ ಅಧ್ಯಕ್ಷರ ಸ್ಥಿತಿ ಮೋದಿಗೂ ಬರಲಿದೆ: TMC ಶಾಸಕ ಇದ್ರಿಸ್ ಅಲಿ ಎಚ್ಚರಿಕೆ
ಕೋಲ್ಕತ್ತಾ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಅವರೂ ಎದುರಿಸಬೇಕಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಶಾಸಕ ಇದ್ರಿಸ್ ಅಲಿ ಎಚ್ಚರಿಕೆ ನೀಡಿದ್ದಾರೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿನ ಜನರು ತಮ್ಮ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ರಾಜಪಕ್ಸೆ ನಿವಾಸ ತೊರೆದಿದ್ದರು. ಇದೇ ವೇಳೆ ಸಾವಿರಾರು ಪ್ರತಿಭಟನಾಕಾರರು ರಾಜಪಕ್ಸೆಯವರ ನಿವಾಸಕ್ಕೆ ಮುತ್ತಿಗೆ ಹಾಕಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಿದ್ದಾರೆ. ಇಂದು ಸಹ ಪ್ರಧಾನಿ ನಿವಾಸದಲ್ಲಿ ಪ್ರಜೆಗಳದ್ದೇ ದರ್ಬಾರ್ ಮುಂದುವರಿದಿದೆ.
ಜುಲೈ 11ರಂದು ನಡೆಯಲಿರುವ ಕೋಲ್ಕತ್ತಾದ ಸೀಲ್ದಾಹ್ ಮೆಟ್ರೋ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಹ್ವಾನಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.