Home District ದೇವದುರ್ಗ ಶಾಸಕರ ವಿರುದ್ಧ ಕೆಂಡಾಮಂಡಲವಾದ ಕಾಂಗ್ರೇಸ್ ನಾಯಕಿ ಶ್ರೀದೇವಿ ನಾಯಕ್!

ದೇವದುರ್ಗ ಶಾಸಕರ ವಿರುದ್ಧ ಕೆಂಡಾಮಂಡಲವಾದ ಕಾಂಗ್ರೇಸ್ ನಾಯಕಿ ಶ್ರೀದೇವಿ ನಾಯಕ್!

ದೇವದುರ್ಗ ಶಾಸಕರ ವಿರುದ್ಧ ಕೆಂಡಾಮಂಡಲವಾದ ಕಾಂಗ್ರೇಸ್ ನಾಯಕಿ ಶ್ರೀದೇವಿ ನಾಯಕ್!

731
0

ದೇವದುರ್ಗದ ಶಾಸಕ ಶಿವನಗೌಡ ನಾಯಕ ಅವರು ಜಿಲ್ಲೆಯಲ್ಲಿ ಪ್ರತಿದಿನಕ್ಕೊಂದು ಬ್ರಾಂಡಿ ಶಾಪ್‌ಗಳನ್ನ ಖರೀದಿ ಮಾಡುತ್ತಿದ್ದಾರೆ. ರಾಯಚೂರುನಲ್ಲಿ ಅವರ ಅಧೀನದಲ್ಲಿ 32 ಬ್ರಾಂಡಿ ಶಾಪ್‌ಗಳಿವೆ. ಯಾದಗಿರಿ, ಗುಲ್ಬರ್ಗಾ ಕಡೆಗಳೆಲ್ಲಾ ಬ್ರಾಂಡಿ ಶಾಪ್‌ಗಳನ್ನು ಮಾಡುತ್ತಿದ್ದಾರೆ. ತಮ್ಮದೇ ಸರ್ಕಾರ ಇದೆ ಎಂದು ಸಾಕಷ್ಟು ಅನುದಾನವನ್ನ ತೆಗೆದುಕೊಂಡು ಮನೆಯಲ್ಲಿ ಕೂಡುತ್ತಿದ್ದಾರೆ. ಪರ್ಸಂಟೇಜ್ ಆಧಾರದ ಮೇಲೆ ಅನುದಾನ ಖರ್ಚಾಗುತ್ತಿದೆ. ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲ. ಕಳಪೆ ಕಾಮಗಾರಿಗಳಿಗೆ ಇದು ರಹದಾರಿಯಾಗಿದೆ. ಇದಕ್ಕೆ ಯಾರು ಪ್ರತಿಭಟಿಸಿದರು ಕೂಡ ಅವರ ಮೇಲೆ ಸುಳ್ಳು ಕೇಸ್‌ಗಳನ್ನ ದಾಖಲಿಸಲಾಗುತ್ತಿದೆ. ನಮ್ಮ ತಾಲೂಕಿನಲ್ಲಿ ಮಟಕಾ, ಸರಾಯಿ ಹಾವಳಿ ಜಾಸ್ತಿ ಇದೆ. ಮರಳು ಮಾಫಿಯಾದಲ್ಲಿ ಶಾಸಕರು ಸೇರಿ ಎಲ್ಲಾ ಇಲಾಖೆಯವರು ಲೂಟಿ ಮಾಡುತ್ತಿದ್ದಾರೆ. ತಾಲೂಕಿನ ಶಾಸಕರು ಪ್ರತಿ ಗ್ರಾಮದಲ್ಲಿ ಬ್ರಾಂಡಿ ಶಾಪ್ ಮಾಡುತ್ತಿದ್ದಾರೆ. ಅದಕ್ಕಾಗಿ ನಾವು ಕಾಂಗ್ರೇಸ್ ಪಕ್ಷದಿಂದ ಹೋರಾಟವನ್ನ ರೂಪಿಸುತ್ತಿದ್ದು, ಮಹಿಳೆಯರನ್ನ ಸಂಘಟಿತರನ್ನಾಗಿ ಮಾಡುತ್ತಿದ್ದೇವೆ ಎಂದು ಜಿಲ್ಲಾ ಕಾಂಗ್ರೇಸ್ ನಾಯಕಿ ಶ್ರೀದೇವಿ ನಾಯಕ್ ಹೇಳಿದರು.

VIAದೇವದುರ್ಗ ಶಾಸಕರ ವಿರುದ್ಧ ಕೆಂಡಾಮಂಡಲವಾದ ಕಾಂಗ್ರೇಸ್ ನಾಯಕಿ ಶ್ರೀದೇವಿ ನಾಯಕ್!
SOURCEದೇವದುರ್ಗ ಶಾಸಕರ ವಿರುದ್ಧ ಕೆಂಡಾಮಂಡಲವಾದ ಕಾಂಗ್ರೇಸ್ ನಾಯಕಿ ಶ್ರೀದೇವಿ ನಾಯಕ್!
Previous articleಮದ್ಯಪ್ರಿಯರಿಗೆ ಬಿಗ್ ಶಾಕ್!
Next articleಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ವಿರುದ್ಧ ಕೆಂಡಾಮಂಡಲವಾದ ದೇವದುರ್ಗ ಶಾಸಕ ಶಿವನಗೌಡ ನಾಯಕ್!

LEAVE A REPLY

Please enter your comment!
Please enter your name here