ತುಮಕೂರು: ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಿದ್ದ ತುಮಕೂರಿನ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಡಪಟ್ಟಿದೆ..ಶಿರಾ ತಾಲೂಕಿನ ಕಾಮಗಾನಹಳ್ಳಿಯ ಬಾಲಕನ ಗಂಟಲು ದ್ರವ ಮಾದರಿಯನ್ನ ನಿನ್ನೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತನಿಗೆ ಕೊರೊನಾ ಸೋಂಕು ತಗಲಿರುವುದು ದೃಡಪಟ್ಟಿದೆ..ಈ ಹಿಂದೆ ಬಾಲಕನ ತಾಯಿಗೆ ಸೋಂಕು ದೃಢಪಟ್ಟಿದ್ದರಿಂದು ಬಾಲಕನಿಗೆ ಕ್ವಾರಂಟೈನಲ್ಲಿ ಇಡಲಾಗಿತ್ತು..ಈತನಿಗೂ ಕೊರೊನಾ ಶಂಕೆ ಇದ್ದುದರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಿಂದಲೂ ಬಾಲಕ ದೂರ ಉಳಿದಿದ್ದ.
ಸೋಂಕಿತ ವಿದ್ಯಾರ್ಥಿ, ತಾಯಿಯೊಂದಿಗೆ ಆಂಧ್ರದ ರಾಯದುರ್ಗಕ್ಕೆ ತನ್ನ ಅಜ್ಜಿ ಮನೆಗೆ ಹೋಗಿದ್ದ,ರಾಯದುರ್ಗಕ್ಕೆ ಹೋದಾಗ ತಾಯಿಗೆ ಕೊರೊನಾ ಸೋಂಕು ಹರಡಿದ್ದು,ತಾಯಿಯಿಂದ ಮಗನಿಗೂ ಸೋಂಕು ತಗುಲಿದೆ.ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು 22ರಂದು ಬಾಲಕನ ತಂದೆ ರಾಯದುರ್ಗದಿಂದ ಮಗನನ್ನು ವಾಪಸ್ ಕರೆತಂದಿದ್ದ.ನಿನ್ನೆಯಿಂದ ವಿದ್ಯಾರ್ಥಿಯಲ್ಲಿ ಜ್ವರ ಕಾಣಿಸಿಕೊಂಡಿದ್ದು,,ಇಂದು ಆತನಿಗೆ ಕೊರೊನಾ ದೃಡಪಟ್ಟಿದೆ.ಬಳಿಕ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಯನ್ನ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.