
ಕದ್ದು ತಂದ ಹಸುಗಳನ್ನು ಬೇರೆಕಡೆ ಸಾಗಾಟ ಮಾಡಲು ಯತ್ನ: ಸ್ಥಳೀಯರಿಗೆ ಕೈಗೆ ಸಿಕ್ಕಿಬಿದ್ದ ಆರೋಪಿಗಳು
ಬೆಂಗಳೂರು : ಕದ್ದು ತಂದ ಹಸುಗಳನ್ನು ಬೇರೆಕಡೆ ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರನ್ನು ಕಂಡು ಸ್ಥಳದಲ್ಲೇ ಹಸುಗಳನ್ನು ಬಿಟ್ಟು ಎಸ್ಕೇಪ್ ಆಗಿರುವ ಘಟನೆ ಅನೇಕಲ್ ಪಟ್ಟಣದಲ್ಲಿ ನಡೆದಿದೆ. ಹಸುಗಳನ್ನ ಕದ್ದುತಂದು ಬೇರೆಕಡೆ ಸಾಗಾಟ ಮಾಡುವ ವೇಳೆ ಊರಿನ ಗ್ರಾಮಸ್ಥರಿಗೆ ಸಿಕ್ಕಿಬಿದ್ದು, ಹಸುಗಳನ್ನ ಲೇಔಟ್ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಮಹೇಂದ್ರ ಪಿಕಪ್ ವಾಹನದಲ್ಲಿ ಐದಕ್ಕೂ ಹೆಚ್ಚು ಹಸುಗಳನ್ನು ಕಳವು ಮಾಡಲಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದ ಶೇವಾಗನಪಲ್ಲಿ ಎಕ್ಸಿಡ್ ಕಂಪನಿಯ ಸ್ಟಾರ್ ವುಡ್ ಎಂಬ ಖಾಸಗಿ ಲೇಔಟ್ ನಲ್ಲಿ ಬಿಡಲಾಗಿದೆ. ಇನ್ನೂ ಆ ಹಸುಗಳು ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಹಸು ಕದ್ದಿದ್ದ ಪಿಕಪ್ ವಾಹನ ಬಾಗಲೂರು ಪೊಲೀಸರ ವಶದಲ್ಲಿದೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.