ಬೆಂಗಳೂರಿನಲ್ಲಿ ಕದ್ದ ಮೊಬೈಲ್ ಗಳನ್ನು ಹೈದರಾಬಾದ್ ನಲ್ಲಿ ಮಾರಾಟ..! ಆರೋಪಿಗಳು ಅರೆಸ್ಟ್

ಅಪರಾಧ ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಮೊಬೈಲ್ ಕಳೆದೋದ್ರೆ ಸಿಗಲ್ಲ ಅನ್ನೋದು ಬಹಳಷ್ಟು ಜನರ ನಂಬಿಕೆ. ಆ ನಂಬಿಕೆಯಿಂದಲೇ ದೂರು ಸಹ‌ ಕೊಡದೇ ಇನ್ನೊಂದು ಮೊಬೈಲ್ ಕೊಳ್ಳೋರೆ ಜಾಸ್ತಿ.. ಆದ್ರೆ ದೊಡ್ಡ ಕಳ್ಳ ಜಾಲವೊಂದನ್ನ ಬಯಲಿಗೆಳೆಯುವ ಮೂಲಕ ವರ್ಷಗಳ ಹಿಂದೆ ಮೊಬೈಲ್ ಕಳೆದುಕೊಂಡ ಅನೇಕರಿಗೆ ಮರಳಿಸಿದ್ದಾರೆ. ನಿಮಗೆ ಇಲ್ಲಿ ಯಾವ ಬ್ರ್ಯಾಂಡ್, ಯಾವ ರೇಟಿನ ಮೊಬೈಲ್ ಬೇಕಿದ್ರು ಸಿಗುತ್ತೆ. ಹಾಗಂತ ಇದ್ಯಾವುದೋ ಮೊಬೈಲ್ ಶೋರೂಮ್ ಅನ್ಕೊಂಡ್ರೆ ಖಂಡಿತಾ ಅಲ್ಲ..

ನಗರದಾದ್ಯಂತ ಕಳ್ಳರ ಪಾಲಾಗಿದ್ದ  ಮೊಬೈಲ್ ಫೋನ್‌ಗಳಿವು. ನಗರದಾದ್ಯಂತ ಮೊಬೈಲ್ ಕಳ್ಳತನ ಮಾಡಿ ಅಕ್ಕಪಕ್ಕದ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದರ ಕಿಂಗ್ ಪಿನ್ ಗಳಿಬ್ಬರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಫ್ಜಲ್ ಹಾಗೂ ಇಜಾರ್ ಬಂಧಿತ ಆರೋಪಿಗಳು. ಈ ಖತರ್ನಾಕ್ಗಳು 7-8 ಜನರ ತಂಡ ರಚಿಸಿಕೊಂಡು ನಗರದಾದ್ಯಂತ ಮೊಬೈಲ್ಗಳನ್ನು ಕದ್ದು ಮಾರಾಟ ಮಾಡಿದ್ರು.  ಈ ಕಳ್ಳರ ಗ್ಯಾಂಗ ನಿಂದ  ಸಿಸಿಬಿ ಪೊಲೀಸರು  ಬರೋಬ್ಬರಿ 512 ಮೊಬೈಲ್ಗಳನ್ನ ವಶಪಡಿಸಿಕೊಂಡಿದ್ದಾರೆ..

ಮೊಬೈಲ್ ಕದ್ದು ಜೈಲು ಸೇರಿದ್ದ ಅಫ್ಜಲ್ ಹಾಗೂ ಇಜಾಜ್ ಹೊರಬಂದ ಬಳಿಕ ತಮ್ಮದೇ ಸಿಂಡಿಕೇಟ್ ರಚಿಸಿಕೊಂಡು 7-8 ವೃತ್ತಿಪರ ಕಳ್ಳರ ಜಾಲ ರೂಪಿಸಿಕೊಂಡಿದ್ದರು. ನಗರದಾದ್ಯಂತ ಓಡಾಡಿ ಸಾರ್ವಜನಿಕರ ಮೊಬೈಲ್ ರಾಬರಿ ಮಾಡುತ್ತಿದ್ದ ಆರೋಪಿಗಳು ಪೊಲೀಸರ ಭೀತಿಯಿಂದ ಕದ್ದ ಫೋನ್ ಗಳನ್ನ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ ಹೈದರಾಬಾದ್, ಮುಂಬೈ, ದೆಹಲಿಗೆ ಕೊಂಡೊಯ್ದು ವಿವಿಧ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ರು. ಇದೇ ರೀತಿ ಚಾಮರಾಜಪೇಟೆ, ಉಪ್ಪಾರಪೇಟೆ, ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ವರ್ತೂರು, ಅಶೋಕನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳಿದ್ದವು.

ನಗರದಾದ್ಯಂತ ಹೆಚ್ಚುತ್ತಿದ್ದ ಮೊಬೈಲ್ ರಾಬರಿ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿ ಬೆನ್ನಟ್ಟಿ ಹೊರಟ ಸಿಸಿಬಿ ಪೊಲೀಸರು ಸದ್ಯ ಆರೋಪಿಗಳನ್ನ ಬಂಧಿಸಿ ಬರೋಬ್ಬರಿ 78.84 ಲಕ್ಷ ಮೌಲ್ಯದ 512 ಮೊಬೈಲ್ ಗಳ ಜಪ್ತಿ ಮಾಡಿದ್ದಾರೆ. ಆ ಪೈಕಿ ದೂರು ನೀಡಿದ್ದ 110 ಮೊಬೈಲ್ ಗಳ ವಾರಸುದಾರರ ಪತ್ತೆಯಾಗಿವೆ‌. ಉಳಿದ ಮೊಬೈಲ್ ಗಳ ವಾರಸುದಾರರಿಗಾಗಿ ಬೆಂಗಳೂರು ಪೊಲೀಸ್ ವೆಬ್‌ಸೈಟ್‌ನಲ್ಲಿ ಮೊಬೈಲ್ ಗಳ ಮಾಹಿತಿಯನ್ನ  ಪ್ರಕಟಿಸಲಿದ್ದು ಐಎಂಇಐ ನಂಬರ್ ಸಹಿತ ಸೂಕ್ತ ದಾಖಲೆಗಳನ್ನ ನೀಡಿ ಮಾಲೀಕರು ವಾಪಾಸ್ ಪಡೆಯಬಹುದಾಗಿದೆ. ಒಟ್ನಲ್ಲಿ ಕಳೆದ್ರೆ ಮತ್ತೆ ಸಿಗಲ್ಲ ಅಂತಾ ನಂಬಿಕೆ ಬಿಟ್ಟು  ಸುಮ್ಮನಾದವರಿಗೆ ಪೊಲೀಸರು ಗುಡ್ ನ್ಯೂಸ್ ನೀಡಿದ್ದು ಇಮ್ಮೇಲೆ ಮೊಬೈಲ್ ಕಳೆದ್ರೆ ನಂಬರ್ ಡ್ಯೂಪ್ಲಿಕೇಟ್ ಪಡೆದು ಸುಮ್ಮನಾಗದೇ ದೂರು ಕೊಡಿ ನಾವಿದ್ದೇವೆ ಅನ್ನೋ ಭರವಸೆ ಮೂಡಿಸಿದ್ದಾರೆ.

Leave a Reply

Your email address will not be published.