ಬೀದಿ ಬದಿ ಪಾನಿ ಪೂರಿ ತಿಂದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ರಾಷ್ಟ್ರೀಯ

 ಕೋಲ್ಕತ್ತಾ: ಪಾನಿ ಪೂರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ನೋಡಿದ ಕೂಡಲೇ ಒಮ್ಮೆ ತಿಂದು ಬಿಡಬೇಕು ಅನಿಸುತ್ತೆ. ಇದೀಗ ಬೀದಿ ಬದಿ ಮಾರುವ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸುಗಂಧ ಗ್ರಾಮ ಪಂಚಾಯತ್‌ನ ಡೋಗಾಚಿಯಾ ಪ್ರದೇಶದಲ್ಲಿ ನಡೆದಿದೆ.

ಪಾನಿ ಪೂರಿ ತಿಂದ ಬಳಿಕ ಅಷ್ಟೂ ಮಂದಿಗೂ ವಾಂತಿ ಹಾಗೂ ಬೇದಿ ಕಾಣಿಸಿಕೊಂಡಿದೆ. ಪ್ರತಿಯೊಬ್ಬರಲ್ಲೂ ಅತಿಸಾರದ ಲಕ್ಷಣಗಳು ಕಂಡು ಬಂದಿದ್ದು ಮಾಹಿತಿ ಪಡೆದ ಆರೋಗ್ಯ ಇಲಾಖೆಯ ವಿಶೇಷ ತಂಡ ಸ್ಥಳಕ್ಕೆ ಆಗಮಿಸಿ ರೋಗಿಗಳಿಗೆ ಔಷಧ ವಿತರಣೆ ಮಾಡಿದ್ದಾರೆ. ಗಂಭೀರ ಅನಾರೋಗ್ಯ ಪರಿಣಾಮ ಕಂಡುಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ತಂಡವು ಸೂಚಿಸಿದೆ. ಅನಾರೋಗ್ಯಕ್ಕೆ ಒಳಗಾದವರಲ್ಲಿ ಡೊಗಾಚಿಯಾ, ಬಹಿರ್ ರಣಗಾಚಾ ಹಾಗೂ ಮಕಲ್ತಲಾ ನಿವಾಸಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published.