
ಬಸವನಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆಂಡ್ರಾಯ್ಡ್ ಟ್ಯಾಬ್ಲೆಟ್ ವಿತರಣೆ
ಬೆಂಗಳೂರು: ಅಕ್ಷಯ ಪಾತ್ರ ಫೌಂಡೇಶನ್ನ ಡಿಜಿಟಲ್ ಶಿಕ್ಷಣ ಉಪಕ್ರಮದ ಪ್ರಾರಂಭವನ್ನು ಗುರುತಿಸಲು, ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಎನ್ಟಿಟಿ ಲಿಮಿಟೆಡ್ ಸಹಯೋಗದಲ್ಲಿ ಬಸವನಗುಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಬಾಲಕಿಯರ ಪಿಯುಸಿಯ 235 ವಿದ್ಯಾರ್ಥಿನಿಯರಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್ಗಳನ್ನು ವಿತರಿಸಿತು. ಕಾರ್ಯಕ್ರಮದಲ್ಲಿ ನಟ ಶೈನ್ ಶೆಟ್ಟಿ. ಎನ್ಟಿಟಿ ಮ್ಯಾನೇಜ್ಡ್ ಸರ್ವೀಸಸ್ ಉಪಾಧ್ಯಕ್ಷ ಪ್ರಸಾದ್ ಮೊಕ್ಕರಾಳ, ಅಕ್ಷಯಪಾತ್ರೆ ಫೌಂಡೇಷನ್ ಪ್ರಮುಖ ಸಂವಹನ ವಿಭಾಗದ ನಿರ್ದೇಶಕ ನವೀನ ನರೇಂದ್ರ ದಾಸ ಹಾಜರಿದ್ದರು. ಅಕ್ಷಯ ಪಾತ್ರವು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.