Success Story.. ಲೋಕಸೇವಾ ಆಯೋಗದ ಪರೀಕ್ಷೆ: ಒಟ್ಟಿಗೆ ಬರೆದು ಒಮ್ಮೆಲೆ ಪಾಸಾದ ತಾಯಿ-ಮಗ

ರಾಷ್ಟ್ರೀಯ

ಯುಪಿಎಸ್‌ಸಿ, ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳು ಸಾಮಾನ್ಯವಾಗಿ ಕಠಿಣವಾಗಿರುತ್ತವೆ. ಲಕ್ಷಾಂತರ ಮಂದಿ ಪ್ರತಿ ವರ್ಷ ಪರೀಕ್ಷೆಗಳನ್ನು ಬರೆದರೂ ತೇರ್ಗಡೆ ಹೊಂದುವವರ ಸಂಖ್ಯೆ ತುಂಬಾ ಕಮ್ಮಿ. ಅಂತದ್ದರಲ್ಲಿ ಒಂದೇ ಮನೆಯಿಂದ ಇಬ್ಬರು ಅದರಲ್ಲೂ ಒಟ್ಟಿಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ ಅಂದರೆ ನಂಬ್ತೀರಾ.. ಹೌದು,  ಕೇರಳದ ಅಮ್ಮ ಮತ್ತು ಮಗ ಇಬ್ಬರೂ ಸಹ ಸ್ಥಳೀಯ ಲೋಕಸೇವಾ ಆಯೋಗದ  (ಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.

ನಮ್ಮ ನೆರೆಯ ರಾಜ್ಯ ಕೇರಳದ ಮಲಪ್ಪುರಂನ 42 ವರ್ಷದ ಮಹಿಳೆ (ತಾಯಿ) ಹಾಗೂ 24 ವರ್ಷದ ಮಗ ಇಬ್ಬರೂ ಒಟ್ಟಿಗೆ ಕೇರಳದ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆ ಹೊಂದಿದ್ದಾರೆ ಎಂದು ಸ್ಥಳೀಯ ಸಂಸ್ಥೆ ಎಎನ್‌ಐ ವರದಿ ಮಾಡಿದೆ.  ಈ ಸಂಬಂಧ ಮಾಹಿತಿ ನೀಡಿದ ಪುತ್ರ ವಿವೇಕ್‌, “ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದೆವು. ನನ್ನ ತಾಯಿ ನನ್ನನ್ನು ಈ ಕ್ಷೇತ್ರಕ್ಕೆ ಕರೆತಂದರು ಮತ್ತು ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು.

ನಮಗೆ ನಮ್ಮ ಶಿಕ್ಷಕರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ. ಆದರೆ ನಾವು ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನಾವಿಬ್ಬರೂ ತುಂಬಾ ಸಂತೋಷದಿಂದಿದ್ದೇವೆ” ಎಂದು ಮಗ ವಿವೇಕ್ ಹೇಳಿಕೊಂಡಿದ್ದಾರೆ. ತನ್ನ ಮಗ 10 ನೇ ತರಗತಿಯಲ್ಲಿದ್ದಾಗ, ಬಿಂದು ಅವನನ್ನು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು, ಆದರೆ ಪುಸ್ತಕ ಓದುತ್ತಾ, ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ತಾಯಿಯನ್ನು ಪ್ರೇರೇಪಿಸಿತು. ಆ ಘಟನೆಯ ನಂತರ 9 ವರ್ಷಗಳು ಕಳೆದಿದ್ದು, ಈಗ ತಾಯಿ ಮತ್ತು ಮಗ ಒಟ್ಟಿಗೆ ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ.

Leave a Reply

Your email address will not be published.