Home Cinema Sudeep ಗೆ ಅರೆಸ್ಟ್ ವಾರೆಂಟ್.!? “ಬಾಡಿಗೆ ಹಣ ನೀಡದೆ, ತೋಟ ನಾಶ ಮಾಡಿದ್ದಾರೆಂದು ದೂರು ನೀಡಿದ್ರು”…

Sudeep ಗೆ ಅರೆಸ್ಟ್ ವಾರೆಂಟ್.!? “ಬಾಡಿಗೆ ಹಣ ನೀಡದೆ, ತೋಟ ನಾಶ ಮಾಡಿದ್ದಾರೆಂದು ದೂರು ನೀಡಿದ್ರು”…

3110
0
SHARE

ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್‌ಗೆ ಅರೆಸ್ಟ್ ವಾರೆಂಟ್ ಜಾರೀ ಮಾಡಲಾಗಿದೆ. ಚಿಕ್ಕಮಗಳೂರಿನ ಜೆ.ಎಮ್.ಏಫ್.ಸಿ ಕೋರ್ಟ್ ಸುದೀಪ್ ಅವರಿಗೆ ಅರೆಸ್ಟ್ ವಾರಂಟ್ ಹೊರಡಿಸಿದೆ.

ಚಿಕ್ಕಮಗಳೂರಿನಲ್ಲಿರುವ ಬೇಗುರಿನಲ್ಲಿ ವಾರಸ್ದಾರ ಧಾರಾವಾಹಿಯ ಚಿತ್ರೀರಕಣಕ್ಕಾಗಿ ಸುದೀಪ್ ತಂಡ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿತ್ತು. ಮನೆಯ ಮಾಲೀಕರಾದ ದೀಪಕ್ ಎಂಬುವರ ಬಳಿ ಅಗ್ರಿಮೆಂಟ್ ಕೂಡ ಮಾಡಿಕೊಂಡಿತ್ತು. ಶೂಟಿಂಗ್ ವೇಳೆ ತೋಟವನ್ನು ನಾಶ ಮಾಡಿದ್ದಾರೆ ಎಂಬ ಗಂಭೀರವಾಗಿ ಆರೋಪವನ್ನು ದೀಪಕ್ ಸುದೀಪ್ ಅವರ ವಿರುದ್ದ ದೂರಿದ್ರು.

ತೋಟದ ವಿಷಯವಾಗಿ ಕಳೆದ ಒಂದು ವರ್ಷದಿಂದ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿತ್ತು. ಆದ್ರೆ ಸುದೀಪ್ ಒಂದು ವರ್ಷದಿಂದ ಕೋರ್ಟ್ ಹಾಜರಾಗದ ಕಾರಣಕ್ಕೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸೀರಿಯಲ್ ನಿರ್ಮಾಣವಾಗಿತ್ತು. ಇಂದು ಚಿಕ್ಕಮಗಳೂರಿನ ಜೆ.ಎಮ್.ಏಫ್.ಸಿ ಕೋರ್ಟ್ ಅರೆಸ್ಟ್‌ವಾರೆಂಟ್ ಜಾರೀ ಮಾಡಿದೆ. ವಾರಸ್ದಾರಾ ಚಿತ್ರತಂಡ ಮೂರು ತಿಂಗಳುಗಳ ಕಾಲ ತೋಟವನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು.

ಈ ಕುರಿತು ಅಗ್ರೀಮೆಂಟ್ ಮಾಡಿಕೊಂಡಿದ್ದ ಕಿಚ್ಚ ಟೀಂ. ಅಗ್ರಿಮೆಂಟ್‌ಗೆ ತಕ್ಕಂತೆ ನಡೆದುಕೊಳ್ಳದೆ, ಹೇಳದೆ ಕೇಳದೆ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿರುವುದಕ್ಕೆ. ತೋಟದ ಮಾಲೀಕರಾದ ದೀಪಕ್ ಆರೋಪವನ್ನು ಮಾಡಿದ್ರು. ಈ ಸಂಬಂಧ ಸದ್ಯ ಕಿಚ್ಚಾ ಸುದೀಪ್ ಅವರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here