ಬೆಂಗಳೂರು. ಅಭಿಮಾನಿಗಳಿಗೆ ಸ್ಟಾರ್ಗಳೇ ದೇವರಾಗಿರುತ್ತಾರೆ. ಆದರೆ ಸ್ಟಾರ್ಗಳು ಕೂಡ ಅಭಿಮಾನಿಗಳನ್ನ ತಮ್ಮ ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ ಎನ್ನುವ ಅಂಶವನ್ನ ಆಗಾಗ ಸ್ಯಾಂಡಲ್ವುಡ್ ಸ್ಟಾರ್ಗಳು ಪ್ರೂವ್ ಮಾಡ್ತಾನೆ ಇರ್ತಾರೆ. ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಅಭಿಮಾನಿಯೊಬ್ಬನ ಕರೆಗೆ ಮನಸೋತಿದ್ದಾರೆ. ಅಪರೂಪಕ್ಕೊಮ್ಮೆ ಇಂತಹ ಘಟನೆ ನಡೆದಿರೋದು ಕಿಚ್ಚನ ಅಭಿಮಾನಿ ಬಳಗದಲ್ಲೂ ಹೊಸ ಪುಳಕ ಹುಟ್ಟಿಸಿಬಿಟ್ಟಿದೆ. ಇದಕ್ಕೆ ಕಾರಣ ಕಿಚ್ಚನ ಆ ಒಂದು ಕರೆ
ಸುದೀಪ್ ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಕನೆಕ್ಟ್ ಆಗ್ತಾರೆ. ಇದಕ್ಕೆ ಸಾಕ್ಷಿ ಅವರ ಟ್ವಿಟರ್ ಪೇಜ್. ಟ್ವಿಟರ್ನಲ್ಲಿ ಎಲ್ಲರ ಮಾತುಗಳಿಗೆ ಸ್ಪಂದಿಸುತ್ತ ಖುಷಿಪಡಿಸ್ತಾರೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತ ತಮಗೆ ಅಭಿಮಾನಿಗಳು ಎಷ್ಟು ಮುಖ್ಯ ಎನ್ನುವುದನ್ನ ತೋರಿಸ್ತಾರೆ. ಹಾಗೇಯೇ ಅಭಿಮಾನಿಗಳ ಕಷ್ಟಗಳಿಗೆ ಮರುಗಿ ಆರ್ಥಿಕ ಸಹಾಯ ಮಾಡೋದಕ್ಕೂ ಈ ಸ್ಯಾಂಡಲ್ವುಡ್ ಮಾಣಿಕ್ಯ ಹಿಂದೆಮುಂದೆ ನೋಡಲ್ಲ. ಯಾರು ನನಗೆ ಇಲ್ಲಿ ಫ್ಯಾನ್ಗಳಲ್ಲ, ನನ್ನ ಫ್ರೆಂಡ್ಸ್ ಎನ್ನುವ ಸುದೀಪ್ ಈಗ ಮತ್ತೊಮ್ಮೆ ಟಾಕ್ ಆಗ್ತಿರೋದೆ ಈ ಅಭಿಮಾನದ ನಡೆಗಾಗಿ, ಪ್ರೀತಿಯ ಸಂಕೇತಕ್ಕಾಗಿ.
ಕಿಚ್ಚ ಸುದೀಪ್ ತಮ್ಮ ಅಭಿಮಾನಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಈ ವಿಡಿಯೋ ಕರೆಯ ಹಿಂದೆ ಒಂದು ದೊಡ್ಡಕಥೆಯೇ ಇದೆ. ಸ್ವಲ್ಪದಿನಗಳ ಹಿಂದೆಯಷ್ಟೇ ಕಿಚ್ಚನನ್ನ ತನ್ನ ಆರಾಧ್ಯದೈವ್ಯ ಅಂತ ಸ್ಮರಿಸೋ ಡೈಹಾರ್ಡ್ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ತನ್ನ ಮನಸ್ಸಿನ ನೋವನ್ನ ಬಿಚ್ಚಿಟ್ಟಿದ್ದಾನೆ.
ನಾನು ಅಪೆಂಡಿಕ್ಸ್ನಿಂದ ಬಳಲುತ್ತಿದ್ದೇನೆ. ನಾನು ನಿಮ್ಮ ದೊಡ್ಡ ಫ್ಯಾನ್. ಸಾಯೋದ್ರೊಳಗೆ ಒಮ್ಮೆಯಾದ್ರೂ ನಿಮ್ಮನ್ನ ನೋಡಬೇಕು ಅಂತ ಆಸೆ. ನಾನು ಬದುಕಿರೋ ಆ ಒಂದು ದಿನವಾದ್ರೂ ನಿಮ್ಮನ್ನ ನೋಡಬೇಕು ಎನ್ನುವ ಮನಸು ಹಿಂಡುವ ವಿಡಿಯೋ ಶೇರ್ ಮಾಡಿದ್ದಾನೆ.
ಅಭಿಮಾನಿಯ ಇದೇ ಮನವಿ ಹಾಗೂ ಕಣ್ಣೀರಿನ ಕರುಣಾಜನಕ ಕಥೆಯನ್ನ ಗಮನಿಸಿದ ಸುದೀಪ್ ಮನೆಯಲ್ಲಿ ಕೂತು ವಿಡಿಯೋ ಕಾಲಿಂಗ್ ಮೂಲಕ ಈ ಅಭಿಮಾನಿಯ ಆಸೆ ಪೂರೈಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ, ಆರೋಗ್ಯದ ಬಗ್ಗೆ ಕಾಳಜಿಯಿರಲಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ.ಸುದೀಪ್ ವಿಡಿಯೋ ಕಾಲಿಂಗ್ ಮಾಡುತ್ತಿದ್ದಂತೆ ಆ ಅಭಿಮಾನಿ ಹಾಗೂ ಆತನ ಗೆಳೆಯರು ಫುಲ್ ಎಕ್ಸ್ಯಟ್ ಆಗಿಹೋದ್ರು. ಗುಂಪಾಗಿ ವಿಡಿಯೋದಲ್ಲಿ ಮಾತನಾಡಲು ನಿಂತುಕೊಂಡ್ರು ಇದನ್ನ ಗಮನಿಸಿದ ಸುದೀಪ್ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಿ ಹಾಗೂ ಮಾಸ್ಕ್ ಧರಿಸೋದನ್ನ ಮರೆಯಬೇಡಿ ಎಂದಿದ್ದಾರೆ.
ಅಭಿಮಾನಿಯ ಜೊತೆಗೆ ಮಾತನಾಡಿದ ಸುದೀಪ್ ಈಗ ನೇರವಾಗಿ ಭೇಟಿಯಾಗಲು ಸದ್ಯದಲ್ಲೇ ವ್ಯವಸ್ಥೆ ಮಾಡಿಕೊಡುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಅಭಿಮಾನಿ ಸುದೀಪ್ ವಿಷಯವಾಗಿ ಹಾಡೊಂದನ್ನ ಬರೆದಿದ್ದಾನೆ. ಅದನ್ನ ಸುದೀಪ್ ಕೇಳಿಸಬೇಕು ಎಂಬ ಆಸೆಯನ್ನಿಟ್ಟುಕೊಂಡೇ ಅಭಿಮಾನಿ ಸುದೀಪ್ಗೆ ಬೇಡಿಕೆಯಟ್ಟಿದ್ದಾನೆ. ಆದರೆ ಈಗಲೇ ನಾವಿಬ್ಬರು ಭೇಟಿಯಾಗಲು ಸಾಧ್ಯವಿಲ್ಲ. ಕೊರೋನಾ ಎಫೆಕ್ಟ್ನಿಂದ ಎಲ್ಲರೂ ಮನೆಯಲ್ಲಿ ಲಾಕ್ ಆಗಿದ್ದೇವೆ. ಆದರೆ ಆದಷ್ಟುಬೇಗ ನಾವಿಬ್ಬರೂ ಭೇಟಿಯಾಗಲು ವ್ಯವಸ್ಥೆ ಮಾಡ್ತೀನಿ ಅಂತ ಅಭಿಮಾನಿಯನ್ನ ಸಂತೈಸಿದ್ದಾರೆ ಕಿಚ್ಚ ಸುದೀಪ್.
ಸಾಮಾಜಿಕ ಜಾಲತಾಣಗಳಲ್ಲಿ ಈಗ ಈ ವಿಡಿಯೋ ಸಕತ್ ವೈರಲ್ ಆಗ್ತಿದೆ. ಕಿಚ್ಚನ ಬಳಗ ಅಭಿಮಾನದ ಮೂರ್ತಿಯಾದ ಸುದೀಪ್ಗೆ ಅಭಿನಂದನೆಗಳನ್ನ ತಿಳಿಸುತ್ತಿದ್ದಾರೆ. ಒಬ್ಬ ಸ್ಟಾರ್ ಅಂದ್ರೇ ಹೀಗಿರಬೇಕು ಎನ್ನುವ ಮಾತುಗಳನ್ನಾಡಿದ್ದಾರೆ. ಇದೇ ಖುಷಿಯಲ್ಲಿ ಈ ವಿಡಿಯೋಗೆ ಅಭಿಮಾನಿ ಹೃದಯಗಳ ಮಾಣಿಕ್ಯದೀಪ, ನೊಂದವರ ಕಣ್ಣೀರು ಒರೆಸುವ ಸುದೀಪ ಎಂಬ ಸಾಲುಗಳನ್ನಿಟ್ಟು ವಿಡಿಯೋವನ್ನ ಶೇರ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಮಾತನಾಡೋದರ ಜೊತೆಗೆ ಈಗೀನ ಪರಿಸ್ಥಿತಿಯನ್ನ ಅರಿತು ಆರೋಗ್ಯದ ಬಗ್ಗೆ ನಿಗಾ ಇರಲಿ ಎಂಬ ಸಂದೇಶ ಕೊಟ್ಟಿರುವ ನಟ ಸುದೀಪ್ ನಿಜಕ್ಕೂ ಮಾದರಿಯಾಗಿದ್ದಾರೆ. ಮಾಸ್ಕ್ ಮಹತ್ವ ಎಂತದ್ದು ಅಂತ ತಿಳಿಸಿಕೊಟ್ಟಿದ್ದಾರೆ. ಅಭಿಮಾನಿಗಳ ಜೊತೆ ಬೆರೆತು ಅವರ ಆಸೆಗಳನ್ನ ಈಡೇರಿಸುವ ಸುದೀಪ್ ಮತ್ತೊಮ್ಮೆ ಅಭಿಮಾನಿಗಳ ಪ್ರೀತಿ ಪಾತ್ರರಾಗಿದ್ದಾರೆ. ಇದುವೇ ಅಭಿಮಾನಕ್ಕಿರೋ ಮತ್ತೊಂದು ಹೆಸರು ಅಲ್ವಾ..?