ವೈದ್ಯಕೀಯ ಸಚಿವ ಡಾ.ಸುಧಾಕರ್ ತಂದೆಗೆ ಕೊರೊನಾ ವೈರಸ್ ಅಟ್ಯಾಕ್ ಆಗಿದೆ.ಸುಧಾಕರ್ ನಿವಾಸದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ ಸೊಂಕು ದೃಢಪಟ್ಟಿತ್ತು.
ಹೀಗಾಗಿ, ಡಾ.ಸುಧಾಕರ್ ಇಡೀ ಕುಟುಂಬ ಇಂದು ಕೊರೊನಾ ಪರೀಕ್ಷೆ ಮಾಡಿಸಿದ್ರು. ಸದ್ಯ ಸುಧಾಕರ್ ತಂದೆಯ ವರದಿ ಪಾಸಿಟಿವ್ ಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಸಚಿವ ಸುಧಾಕರ್, ನನ್ನ ತಂದೆಯವರ ಕೊವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ, ಆತಂಕದಿಂದ ಕಾಯುತ್ತಿದ್ದೇನೆ ನಿಮ್ಮಲ್ಲರ ಹಾರೈಕೆ ಇರಲಿ ಎಂದಿದ್ದಾರೆ.