Home District ಸುಧಾಕರ – ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯ ; ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದು ಹೀಗೆ

ಸುಧಾಕರ – ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯ ; ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದು ಹೀಗೆ

250
0
SHARE

ಬಳ್ಳಾರಿ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲಾ, ನಾವು ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ ನಾನು ರಾಜ್ಯದ ಕೊರೊನಾ ವಿಚಾರ,  ನೋಡಿಕೊಳ್ಳುತ್ತಿದ್ದರೆ, ಸುಧಾಕರ್ ಅವರು ಬೆಂಗಳೂರು ನೋಡ್ಕೋಳ್ತಿದ್ರು,  ಅವರಿಗೆ ಸಮಸ್ಯೆ ಆಗಿದೆ ಹಾಗಾಗಿ ಈಗ ಆರ್. ಅಶೋಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಇದನ್ನು ಹೊರತು ಪಡಿಸಿದರೆ ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲಾ ಎಂದು ಬಳ್ಳಾರಿಯಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು ಈ ವಿಚಾರ ಸ್ಪಷ್ಟಪಡಿಸಿದ ಅವರು,  ಸುಧಾಕರ್ ಅವರು ಬಳ್ಳಾರಿ ಬಂದಾಗ ನಾನು ಗೈರಾಗಿದ್ದೇನೆ ನಿಜ, ಆದ್ರೆ ನಾನು ಮೊದಲೇ ಹೇಳಿ ಹೋಗಿದ್ದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಾವು ಕೊರೊನಾ ನಿಯಂತ್ರಣವಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ.  ಟೀಂ ಆಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇನ್ನೂ SSLC ಪರೀಕ್ಷೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಈಗಾಗ್ಲೇ ಕೈಗೊಳ್ಳಲಾಗಿದೆ.  ಬೇರೆ ರಾಜ್ಯಗಳಲ್ಲಿ ಪರೀಕ್ಷೆ ಮುಂದೂಡಿದ್ದಾರೆ. ಆದರೆ ನಾವು ಮಾಡುತ್ತಿದ್ದೇವೆ ರಾಜ್ಯದ ಎಲ್ಲ ಮಕ್ಕಳಿಗೆ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು.

ಬಳ್ಳಾರಿಯಲ್ಲಿ ಕೊರೊನಾ ಹೆಚ್ಚಳದ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲಾ ಕಡೆಯೂ ಹೆಚ್ತಿದೆ ಈ ಬಗ್ಗೆ ಸರ್ವಪಕ್ಷ ಸಭೆ ನಡೆಸಿ ಸಲಹೆಗಳನ್ನು ಸ್ವೀಕರಿಸಿದ್ದೇವೆ. ನಿಯಂತ್ರಣ ಬಗ್ಗೆ ಹೆಚ್ಚು ನಿಗಾ ವಹಿಸಿದ್ದೇವೆ ಎಂದ್ರು. ಜೊತೆಗೆ ಜಿಂದಾಲ್ ನಲ್ಲಿ ಹೆಚ್ಚಳವಾಗುತ್ತಿರುವ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ, ಜನರ ಪ್ರಾಣ ನಮಗೆ ಮುಖ್ಯ, ಜಿಂದಾಲ್ ಸಂಬಂಧ ನಮಗೂ ದೂರುಗಳು ಬರುತ್ತಿವೆ. ಈ ವಿಚಾರವನ್ನು ನಿನ್ನೆ ಮತ್ತು ಮೊನ್ನೆಯೂ ನಾನು ಸಿ.ಎಂ ಗಮನಕ್ಕೆ ತಂದಿರುವೆ. ಚರ್ಚೆ ಮಾಡಿ ತೀರ್ಮಾನಿಸ್ತೀವಿ, ಅಲ್ಲದೇ ಕೊರೊನಾ ಇನ್ನೂ ಮೂರನೇ ಹಂತಕ್ಕೆ ತಲುಪಿಲ್ಲ ಎರಡು ಮತ್ತು ಮೂರನೇ ಹಂತದ ನಡುವೆ ಇದೆ. ಮೂರನೇ ಹಂತಕ್ಕೆ ಕ್ರೂಷಿಯಲ್ ಆಗುತ್ತೆ. ನಾವು ತುಂಬಾ ಎಚ್ಚರಿಕೆಯಿಂದ ಇರ್ಬೇಕು ಅಂತ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ರು.

LEAVE A REPLY

Please enter your comment!
Please enter your name here