ಸಕ್ಕರೆ ನಾಡಲ್ಲಿ ಮತ್ತೆ ಹರಿದ ನೆತ್ತರು: ಆಶ್ರಯ ನೀಡಿದ ಸ್ನೇಹಿತನ ಕತ್ತು ಕೂಯ್ದ ಕಿರಾತಕ

ಜಿಲ್ಲೆ

ಮಂಡ್ಯ: ಕತ್ತು ಕೊಯ್ದು ಯುವಕನ ಬರ್ಬರ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ. ಬೆಳಗೊಳದ ಸೀಬಯ್ಯನ ಮಂಟಿ ನಿವಾಸಿ ರವಿ (22) ಕೊಲೆಯಾದ ಯುವಕ. ಶರತ್​ ಕೊಲೆ ಆರೋಪಿ. ರವಿ ಬೆಳಗೊಳ ಗ್ರಾಮದ ವೈನ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ವೈನ್ ಶಾಪ್ ಮುಂದೆಯೇ ಶರತ್ ಎಂಬಾತ ಮಚ್ಚಿನಿಂದ ರವಿ ಕತ್ತು ಕೊಯ್ದು, ತಲೆ ಭಾಗವನ್ನು ಕೊಚ್ಚಿದ್ದಾನೆ. ಶರತ್ ಅತ್ತೆ ಜೊತೆ ರವಿ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ. ಕೆ.ಆರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಅಷ್ಟಕ್ಕೂ ಕೊಲೆಗೈದ ಶರತ್, ರವಿಯ ಆತ್ಮೀಯ ಸ್ನೇಹಿತ. ಶರತ್ ಕುಟುಂಬ ಕಷ್ಟದಲ್ಲಿದ್ದ ಕಾರಣಕ್ಕೆ ತನ್ನ ಮನೆಯನ್ನೆ ಕಡಿಮೆ ಬಾಡಿಗೆಗೆ ನೀಡಿ ನೆರವಾಗಿದ್ದನು. ರವಿ ಸವಿತಾ ವೈನ್ ಸ್ಟೋರ್‌ ನಲ್ಲಿ ಕೆಲಸ ಮಾಡಿಕೊಂಡಿದ್ರೆ, ಶರತ್ ಬಾರ್ ಎದುರು ಕಬಾಬ್ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಪ್ರತಿದಿನ ಕೆಲಸ ಮುಗಿಸಿ ಒಟ್ಟಿಗೆ ಸೇರ್ತಿದ್ದ ಇಬ್ಬರು ಒಂದೇ ಮನೆಯಲ್ಲಿ ಉಂಡು ತಿಂದು ಮಲಗುತ್ತಿದ್ದರು.

ಹೀಗೀರುವಾಗಲೇ ಶರತ್ ರವಿಯನ್ನು ಕೊಲೆಗೈದಿರುವುದು ಇಡೀ ಗ್ರಾಮಕ್ಕೆ ಆಘಾತ ತರಿಸಿದೆ. ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ‌ ಮುಳುಗಿದೆ.‌ ಸದ್ಯ ಕೆಆರ್‌ಎಸ್‌ ಠಾಣೆ ಪೊಲೀಸರುಸ್ಥಳ ಪರಿಶೀಲನೆ ನಡೆಸಿ, ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರ ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ಹಂತಕನಿಗೆ ಬಲೆ ಬೀಸಿದ್ದಾರೆ. ಆರೋಪಿ ಶರತ್ ಬಂಧಿಸಿ ವಿಚಾರಣೆ ನಡೆಸಿದ ಬಳಿಕವೇ ಕೊಲೆಗೆ ಕಾರಣ ತಿಳಿದು ಬರಲಿದೆ.

Leave a Reply

Your email address will not be published.