ಶಂಕಿತ ಉಗ್ರರ ಬಂಧನ ಕೇಸ್: ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗ

ಬೆಂಗಳೂರು

ಬೆಂಗಳೂರು :ಬೆಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿರುವ ಇಬ್ಬರು ಶಂಕಿತ ಉಗ್ರರ ವಿಚಾರಣೆ ಚುರುಕುಗೊಂಡಿದೆ. ಸಿಸಿಬಿ ಪೊಲೀಸರಿಂದ ಬಂಧಿತರಾಗಿರುವ ಅಸ್ಸಾಂ ಮೂಲದ ಇಬ್ಬರು ಶಂಕಿತ ಉಗ್ರರ ವಿಚಾರಣೆ ತೀವ್ರಗೊಂಡಷ್ಟು ಹಲವು ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಉಗ್ರವಾದದತ್ತ ಮುಖ‌ ಮಾಡಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂ ಹಾಗೂ ಫೇಸ್​ಬುಕ್​ನಲ್ಲಿ ಉಗ್ರ ನಾಯಕರ ಭಾಷಣದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವಿಡಿಯೋ ಪೋಸ್ಟ್ ಮಾಡುತ್ತಿರುವ ಬಗ್ಗೆ ಈ ಹಿಂದೆ ಫೇಸ್‌ಬುಕ್ ಸಂಸ್ಥೆ ಇಬ್ಬರಿಗೆ ಎಚ್ಚರಿಸಿತ್ತು. ನಂತರ ಖಾತೆಗಳನ್ನು ರದ್ದು ಮಾಡಿದ್ದರೂ ಅಖ್ತರ್ ಹುಸೇನ್ ನಕಲಿ ಅಕೌಂಟ್ ತೆರೆದು ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿದ್ದ. ಬೆಂಗಾಲಿ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಬರಹಗಳು ಹಾಗೂ ವಿಡಿಯೋ ಕುರಿತಾಗಿ ಮಾಹಿತಿ ನೀಡುವಂತೆ ಫೇಸ್ ಬುಕ್, ಟೆಲಿಗ್ರಾಂ, ವಾಟ್ಸ್​ಆಯಪ್ ಕಂಪನಿಗಳಿಗೆ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.

Leave a Reply

Your email address will not be published.