ನಾಲಗೆಗೆ ಕಹಿ ಆರೋಗ್ಯಕ್ಕೆ ಸಿಹಿ ಹಾಗಲಕಾಯಿ: ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ..!

ಲೈಫ್ ಸ್ಟೈಲ್

ಹಾಗಲ ಕಾಯಿ ಎಂದ ಕ್ಷಣ ದೂರ ಸರಿಯುವವರೆ ಹೆಚ್ಚು, ಹಾಗಲ ಕಾಯಿ ಬಾಯಿಗೆ ಕಹಿಯಾದರೂ ದೇಹಕ್ಕೆ ಸಿಹಿ. ಇದು ಔಷಧೀಯ ಗುಣ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿರುವ ತರಕಾರಿಯಾಗಿದೆ. ಹಾಗಲಕಾಯಿಯ ಹೊರಮೈ ಮುಳ್ಳಿನಂತಹ ರಚನೆಯಿಂದ ಕೂಡಿದ್ದು, ಕಡುಹಸಿರು ಹಾಗೂ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದೆ. ಪ್ರಪಂಚದ ಎಲ್ಲೆಡೆ ಇದರ ಬೇಸಾಯ, ಬಳಕೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ಆದ್ಯತೆ ಹೆಚ್ಚು. ಹಾಗಲ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂ ಬಕ್ಕೆ ಸೇರಿದ್ದಾಗಿದೆ. ಬಳ್ಳಿಯಾಗಿ ಹಬ್ಬುವ ವರ್ಗಕ್ಕೆ ಸೇರಿದ್ದು, ಈ ಗಿಡ ಬೆಳೆಯಲು ಆಸರೆಯ ಅಗತ್ಯವಿದೆ.

ಇದರ ಎಲೆ ಮತ್ತ ಕಾಯಿಯ ಬಣ್ಣ ಹಸಿರು. ಎಲೆಗಳು ಕೈಯ ಆಕಾರ ಹೊಂದಿದ್ದು ಸೀಳುಗಳನ್ನು ಒಳಗೊಂಡಿರುತ್ತದೆ. ಹಾಗಲ ಕಾಯಿ ರುಚಿ ಕಹಿಯಾದರೂ ಒಂದು ಪೌಷ್ಟಿಕಾಂಶಯುಕ್ತ ತರಕಾರಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೊಟೀನ್, ‘ಸಿ’ ಜೀವಸತ್ವ , ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಥಯಾಮಿನ್, ಕ್ಯಾಲ್ಸಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೋಟ್ಯಾಷ್, ರೈಬೊಫ್ಲೇಲಿನ ಇತ್ಯಾದಿಗಳನ್ನು ಹೊಂದಿದೆ.  ಆಯುರ್ವೇದದಲ್ಲಿ ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ಮೂಲವ್ಯಾಧಿ, ಚರ್ಮದ ಕಾಯಿಲೆಗಳಿರುವವರು ಇದನ್ನ ಸೇವಿಸಿದರೆ ಉತ್ತಮ. ಹಾಗಲ ಕಾಯಿಯ ರಸವನ್ನು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.

ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವುದು. ಜಂತುನಾಶಕ, ಜೀರ್ಣಕಾರಕ, ಜ್ವರ ಪೀಡಿತರಿಗೆ ಬಾಯಿ ರುಚಿ ಹೆಚ್ಚಲು, ಮಲಬದ್ಧತೆಗೂ ಒಳ್ಳೆಯದು. ಹಾಗಲ ಕಾಯಿ ರಸವನ್ನು ಮೊಡವೆ ನಿವಾರಕವಾಗಿಯೂ ಉಪಯೋಗಿಸಲಾಗುತ್ತದೆ. ಟೈಪ್-2 ನಂತಹ ಮಾರಕ ಮಧುಮೇಹವನ್ನು ಗುಣಪಡಿಸುವ ಸಾಮರ್ಥ್ಯವಿರುವ ಸಿದ್ಧ ಆಹಾರವೆಂದರೆ, ಅದು ಹಾಗಲಕಾಯಿ ಎಂದೇ ಹೇಳಬಹುದು. ತನ್ನಲ್ಲಿನ ಕಹಿರುಚಿಯಿಂದಾಗಿ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗದ ಮುಳ್ಳುಮುಳ್ಳಾದ ತರಕಾರಿ ನಿಜಕ್ಕೂ ಆರೋಗ್ಯವೃದ್ಧಿಸುವ ಪೋಷಕಾಂಶಗಳ ಆಗರವೆಂದೇ ಹೇಳಲಾಗುತ್ತದೆ.

ಜ್ಯೂಸ್ ಮಾಡುವ ವಿಧಾನ  

ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆದು, ಮಧ್ಯಭಾಗದಲ್ಲಿ ಕತ್ತರಿಸಬೇಕು, ಅದರಲ್ಲಿರುವ ಬೀಜಗಳನ್ನು ಚಮಚದ ಮೂಲಕ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಸಿಪ್ಪೆಯ ಕಹಿಯನ್ನು ಸಹಿಸಿಕೊಳ್ಳುವ ಮನಸ್ಸಿದ್ದಲ್ಲಿ, ಸಿಪ್ಪೆ ತೆಗೆಯುವ ಅಗತ್ಯವಿಲ್ಲ. ನಂತರ ಒಂದು ಪಾತ್ರೆಗೆ ಹಾಕಿ, ಅದಕ್ಕೆ ನೀರು ತುಂಬಿಸಿ, ಸುಮಾರು ಅರ್ಧಗಂಟೆ ಕಾಲ ನೆನೆಸಿಡಬೇಕು. ಅಗತ್ಯವೆನಿಸಿದರೆ ಸ್ವಲ್ಪ ಉಪ್ಪು ಅಥವಾ ನಿಂಬೆ ರಸವನ್ನು ಸೇರಿಸಿದರೆ ಕಹಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಬಳಿಕ ಮಿಕ್ಸರ್‌ಗೆ ಹಾಕಿ ಜ್ಯೂಸ್ ಮಾಡಿಕೊಳ್ಳಬೇಕು.

ಕ್ಯಾನ್ಸರ್ನಿಂದ ಕಾಪಾಡುತ್ತದೆ

ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಲು ಕ್ಯಾನ್ಸರ್ ಗೆ ತುತ್ತಾಗಿ ಬಾಡಲಿಯ ಕಾರ್ಯಕ್ಷಮತೆ ಕುಸಿಯುವುದು ಪ್ರಮುಖ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಕ್ಯಾನ್ಸರ್ ಗೆ ಕಾರಣವಾದ ಅಪಾಯಕಾರಿ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಪರಿಣಾಮವಾಗಿ ಬಾಡಲಿ ಸುಕ್ಷಮವಾಗಿ ಕಾರ್ಯನಿರ್ವಹಿಸಿ ರಕ್ತಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಿಕೊಡಲು ಸಾಧ್ಯವಾಗುತ್ತದೆ.

ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು

ಹಾಗಲಕಾಯಿಯಲ್ಲಿರುವ antioxidant ಗಳು, ನಿಮ್ಮ ಶರೀರದ ಎಲ್ಲಾ ಕಾರ್ಯಾಂಗ ವ್ಯೂಹಗಳನ್ನು ಶುದ್ಧಗೊಳಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಹಾಗೂ ಜೀರ್ಣಾಂಗವ್ಯೂಹಗಳು ಉತ್ತಮಗೊಳ್ಳುತ್ತವೆ ಹಾಗೂ ತನ್ಮೂಲಕ ನೀವು ಹೆಚ್ಚಾದ ನಿಮ್ಮ ಶರೀರದ ತೂಕವನ್ನು ಬೇಗನೆ ನಿವಾರಿಸಿಕೊಳ್ಳುವುದರಲ್ಲಿ ಸಹಕಾರಿಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸೋಂಕುಗಳ ವಿರುದ್ಧ ಹೋರಾಡಲು, ಹಾಗಲಕಾಯಿ ಗಿಡದ ಎಲೆಗಳನ್ನು ಅಥವಾ ಹಣ್ಣುಗಳನ್ನು ನೀರಿನಲ್ಲಿ ಕುಡಿಸಿ ಪ್ರತಿದಿನ ಸೇವಿಸಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯ ವರ್ಧನೆಗೆ ಸಹಕಾರಿ.

ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ

ಕೆಲವೊಮ್ಮೆ ಆಹಾರ ಜೀರ್ಣಗೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿಯೇ ಉಳಿದು ಹಲವು ವಾಯುಗಳು ಉತ್ಪತ್ತಿಯಾಗಿ ಉರಿ ತರಿಸುತ್ತವೆ. ಅಜೀರ್ಣವ್ಯಾಧಿ (dyspepsia) ಎಂದು ಕರೆಯಲಾಗುವ ಈ ತೊಂದರೆಗೆ ಹಾಗಲಕಾಯಿಯ ರಸ ಅತ್ಯಂತ ಪರಿಣಾಮಕಾರಿಯಾಗಿದೆ. ಈ ರಸ ಹೊಟ್ಟೆಯಲ್ಲಿಳಿದ ಬಳಿಕ ಜೀರ್ಣರಸಗಳನ್ನು ಅಗತ್ಯಪ್ರಮಾಣದಲ್ಲಿ ಸ್ರವಿಸಲು ಜಠರಕ್ಕೆ ಪ್ರಚೋದನೆ ನೀಡುತ್ತದೆ. ಪರಿಣಾಮವಾಗಿ ಹುಳಿತೇಗು, ಗ್ಯಾಸ್ಟ್ರಿಕ್, ಹೊಟ್ಟೆಯ ಹುಣ್ಣು ಮೊದಲಾದ ತೊಂದರೆಗಳಿಂದ ಕಾಪಾಡಿದಂತಾಗುತ್ತದೆ.

ಹೃದಯ ಸಂಬಂಧೀ ರೋಗಗಳ ನಿವಾರಣೆ

ಹಾಗಲಕಾಯಿಯು ಹೃದಯದ ಆರೋಗ್ಯಕ್ಕೆ ಹಲವು ವಿಧದಲ್ಲಿ ಅತ್ಯುತ್ತಮವಾಗಿದೆ. ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡುವ ಕೆಟ್ಟ ಕೊಲೆಸ್ಟ್ರಾಲ್ (bad cholesterol) ನ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಹೃದಯಾಘಾತದ ಸಾಧ್ಯತೆಯನ್ನು ಕ್ಷೀಣಗೊಳಿಸುತ್ತದೆ. ಮಾತ್ರವಲ್ಲದೇ, ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನೂ ಸಹ ತಗ್ಗಿಸುವುದರ ಮೂಲಕ ಹೃದಯವನ್ನು ಸ್ವಸ್ಥವಾಗಿರಿಸುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಹಾಗಲಕಾಯಿಯ ರಸದಲ್ಲಿ ಬೀಟಾ-ಕ್ಯಾರೋಟೀನ್ ಮತ್ತು ವಿಟಮಿನ್ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡಿದಂತಾಗುತ್ತದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಮಧುಮೇಹದ ಕಾರಣದಿಂದಾಗಿ ಉತ್ಪತ್ತಿಯಾಗುವ ದೃಷ್ಟಿದೋಷದಿಂದ (oxidative stress) ಕಣ್ಣುಗಳನ್ನು ಕಾಪಾಡುತ್ತವೆ. ಹಾಗಲಕಾಯಿಯ ನಿಯಮಿತ ಸೇವನೆಯಿಂದ ಕಣ್ಣುಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ನಮ್ಮ ದೇಹದ ಅಷ್ಟೂ ರಕ್ತ (ಸುಮಾರು ಐದೂವರೆ ಲೀಟರ್) ಸತತವಾಗಿ ದೇಹದ ಧಮನಿಗಳಲ್ಲಿ ಹರಿಯುತ್ತಾ ಆಮ್ಲಜನಕವನ್ನು ಪೂರೈಸುತ್ತಾ, ವಿಷಕಾರಿ ವಸ್ತುಗಳನ್ನು ವಿಸರ್ಜಿಸುತ್ತಾ ಇರಬೇಕಾಗುತ್ತದೆ. ಆದರೆ ದೇಹವನ್ನು ಪ್ರವೇಶಿಸುವ ಫ್ರೀ ರಾಡಿಕಲ್ (free radicals) ಎಂಬ ವಿಷಕಾರಿ ವಸ್ತುಗಳು ರಕ್ತದೊಡನೆ ಮಿಳಿತಗೊಂಡು ರಕ್ತದ ಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ಇದರ ನೇರ ಪರಿಣಾಮವನ್ನು ಚರ್ಮದ (ವಿಶೇಷವಾಗಿ ಮುಖದ) ಮೇಲಿನ ಮೊಡವೆ, ಚರ್ಮದುರಿತದ ಮೂಲಕ ನೋಡಬಹುದು.

 

Leave a Reply

Your email address will not be published.