ತಾಲಿಬಾನ್ ಪ್ರಖ್ಯಾತ ಧರ್ಮಗುರು ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆ

ಅಂತರಾಷ್ಟ್ರೀಯ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ತಾಲಿಬಾನ್‌ ಪ್ರಖ್ಯಾತ ಧರ್ಮಗುರು ಶೇಖ್‌ ರಹೀಮುಲ್ಲಾ ಹಕ್ಕಾನಿ ಹತ್ಯೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಸ್ಫೋಟದಲ್ಲಿ ಕಾಬೂಲ್ ನ ಗುಪ್ತಚರ ಮುಖ್ಯಸ್ಥ ಅಬ್ದುಲ್ ರಹಮಾನ್ ಸಾವನ್ನಪ್ಪಿರುವುದನ್ನು ಅಫ್ಘಾನಿಸ್ತಾನದ ಟೋಲೋ ನ್ಯೂಸ್‌ ವರದಿ ಮಾಡಿದೆ.

ಕಾಬೂಲ್‌ನಲ್ಲಿ ಧಾರ್ಮಿಕ ಸೆಮಿನಾರ್‌ನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಕಾಲು ಕಳೆದುಕೊಂಡಿದ್ದ ವ್ಯಕ್ತಿ ನಂತರ ಪ್ಲಾಸ್ಟಿಕ್‌ ಕಾಲು ಅಳವಡಿಸಿಕೊಂಡಿದ್ದು, ಅದರಲ್ಲಿ ಸ್ಫೋಟಕಗಳನ್ನು ಇಟ್ಟುಕೊಂಡಿದ್ದ. ಸೆಮಿನಾರ್‌ನಲ್ಲಿ ಈ ಸ್ಫೋಟಕಗಳನ್ನು ಸ್ಫೋಟಿಸಿದ್ದಾನೆ ಎಂದು ತಾಲಿಬಾನ್‌ ತಿಳಿಸಿದ್ದು, ಸ್ಪೋಟದ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಸಾಭಿತಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published.