Home KARNATAKA ಕೊರೊನಾ ತಾಂಡವ; ಬೆಂಗಳೂರನ್ನ ಗಂಭೀರವಾಗಿ ಪರಿಗಣಿಸಿದ ಕೊರೊನಾ ಟಾಸ್ಕ್ ಫೋರ್ಸ್

ಕೊರೊನಾ ತಾಂಡವ; ಬೆಂಗಳೂರನ್ನ ಗಂಭೀರವಾಗಿ ಪರಿಗಣಿಸಿದ ಕೊರೊನಾ ಟಾಸ್ಕ್ ಫೋರ್ಸ್

255
0
SHARE

ಬೆಂಗಳೂರು. ಕೊರೊನಾ ಟಾಸ್ಕ್ ಫೋರ್ಸ್ ಬೆಂಗಳೂರನ್ನು ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟಾಸ್ಕ್ ಫೋರ್ಸ್ ವರದಿ ಸಲ್ಲಿಸಿದೆ. ಬೆಂಗಳೂರಿನಲ್ಲಿ ಕೊರೋನಾಗೆ ಬ್ರೇಕ್ ಹಾಕಲು ಕೆಲವು ಸಲಹೆಗಳನ್ನು ಸಮಿತಿ ನೀಡಿದೆ.  ಬೆಂಗಳೂರಿಗೆ ಅಂತರ್ ಜಿಲ್ಲೆ ಓಡಾಟಕ್ಕೆ ಬ್ರೇಕ್ ಹಾಕಬೇಕು .

ಇನ್ಮುಂದೆ ಯಾರನ್ನು ಕೂಡಾ ಬೆಂಗಳೂರಿನಿಂದ ಬೇರೆ ಜಿಲ್ಲೆಗೆ ಹಾಗೂ ಬೇರೆ ಜಿಲ್ಲೆಯವರು ಬೆಂಗಳೂರಿಗೆ ಬರದಂತೆ ನೋಡಿಕೊಳ್ಳಬೇಕು.  ಎಲ್ಲಾ A ಸಿಂಪ್ಟಮ್ಯಾಟಿಕ್ ವಾರಿಯರ್ಸ್ ರೋಗಿಗಳನ್ನು ಮನೆಯಲ್ಲೇ ಐಸೋಲೇಷನ್ ಮಾಡಬೇಕು. ಬೆಂಗಳೂರಿನಲ್ಲಿನ ಖಾಸಗಿ ಮೆಡಿಕಲ್ ಕಾಲೇಜ್‌ನ್ನು ಸರ್ಕಾರ ಪಡೆದು ಅದರಲ್ಲಿ 200 ಬೆಡ್‌ಗಳನ್ನು ನಿರ್ಮಿಸುವಂತೆ ಸಲಹೆ ಮಾಡಿದೆ. ರ್‍ಯಾಪಿಡ್  ಆ್ಯಂಟಿಜನ್ ಟೆಸ್ಟ್‌ ಮಾಡಿಸಬೇಕು.

ಇದರಿಂದ 10 ನಿಮಿಷದಲ್ಲಿ ಕೋವಿಡ್ ವರದಿ ಸಿಗಲಿದೆ. ಹೈರಿಸ್ಕ್ ಪೇಷೆಂಟ್‌ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ 200 ಆ್ಯಂಬುಲೆನ್ಸ್ ನೀಡುವಂತೆ ಮನವಿ ಮಾಡಲಾಗಿದೆ.

LEAVE A REPLY

Please enter your comment!
Please enter your name here