ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ HIV ಸೋಂಕು: ಟ್ಯಾಟೂ ಪರ್ಲರ್ ನವರು ಹೇಳಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ರಾಷ್ಟ್ರೀಯ

ಲಕ್ನೋ: ಇತ್ತೀಚೆಗೆ ಟ್ಯಾಟೂ ಹಾಕಿಸಿಕೊಳ್ಳುವುದು ಕಾಮನ್ ಅನ್ನೋ ಹಾಗಾಗಿದೆ. ಅದ್ರಲ್ಲೂ ಸಾಕಷ್ಟು ಮಂದಿ ಕಡಿಮೆ ಬೆಲೆಯಲ್ಲಿ ಎಲ್ಲಿ ಟ್ಯಾಟೂ ಹಾಕ್ತಾರೆ ಅಂತ ನೋಡೋರೆ ಹೆಚ್ಚು. ಇದೀಗ ಕಡಿಮೆ ಬೆಲೆಯೆಂದು ಟ್ಯಾಟೂ ಹಾಕಿಸಿಕೊಂಡಿದ್ದ ಇಬ್ಬರಿಗೆ ಹೆಚ್ ಐ ವಿ ಸೋಂಕು ಕಾಣಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ವಾರಣಾಸಿಯ ಓರ್ವ ಯುವಕ ಹಾಗೂ ಓರ್ವ ಮಹಿಳೆ ಅಗ್ಗದ ಬೆಲೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಟ್ಯಾಟೂ ಹಾಕಿಸಿಕೊಂಡಿದ್ದ ಯುವಕ ಹಾಗೂ ಮಹಿಳೆಯ ಆರೋಗ್ಯ ಹದಗೆಡಲು ಪ್ರಾರಂಭಿಸಿದೆ. ಅಸ್ವಸ್ವಸ್ಥರಾದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಪದೇ ಪದೇ ಜ್ವರ ಬರುತ್ತಿದ್ದುದನ್ನು ಗಮನಿಸಿದ್ದ ಯುವಕ ಹಾಗೂ ಮಹಿಳೆಗೆ ವೈರಲ್ ಟೈಫಾಯಿಡ್, ಮಲೇರಿಯಾ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಜ್ವರ ಕಡಿಮೆಯಾಗದಿದ್ದಾಗ, ಹೆಚ್‍ಐವಿ ಪರೀಕ್ಷೆ ಮಾಡಲಾಗಿದ್ದು, ಅದು ಪಾಸಿಟಿವ್ ಬಂದಿದೆ.

ಈ ಸಂದರ್ಭದಲ್ಲಿ ಅವರು ಯಾವುದೇ ಹೆಚ್‍ಐವಿ ವ್ಯಕ್ತಿಯನ್ನು ಸಂಪರ್ಕಿಸದೇ ಇರುವುದು ಬಯಲಾಗಿದ್ದು, ಎಲ್ಲರೂ ಕಡಿಮೆ ಬೆಲೆಯಲ್ಲಿ ಸಿಗುವ ಟ್ಯಾಟೂಗಳನ್ನು ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

Make sure that tattoo is one you want to keep.

ಈ ಬಗ್ಗೆ ತನಿಖೆ ನಡೆಸಿದಾಗ ಅದಕ್ಕೆ ಟ್ಯಾಟೂ ಪಾರ್ಲರ್‌ನವರು ಹಚ್ಚೆ ಸೂಜಿಗಳು ದುಬಾರಿಯಾಗಿದ್ದು, ಹಣವನ್ನು ಉಳಿಸಲು ಅದೇ ಸೂಜಿಗಳನ್ನು ಬಳಸುತ್ತಿದ್ದಾರೆ. ಇದೇ ರೀತಿ ಹೆಚ್‍ಐವಿ ಸೋಂಕಿತನಿಗೆ ಬಳಸಿದ್ದ ಸೂಜಿಯನ್ನೇ ಎಲ್ಲರಿಗೂ ಬಳಸಿ ಹಚ್ಚೆ ಹಾಕಿದ್ದಾರೆ ಎನ್ನುವ ವಿಷಯವು ಬಯಲಾಗಿದೆ. ಘಟನೆ ಸಂಬಂಧಿಸಿ ಅಗ್ಗದ ಟ್ಯಾಟೂ ಪಾರ್ಲರ್‌ಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.