ಶಿಕ್ಷಕರಿಂದ ಮಕ್ಕಳಿಗೆ ಟಾರ್ಚರ್ ಶುರು: ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ವಿಧ್ಯಾರ್ಥಿ ಮೇಲೆ ಹಲ್ಲೆ

ಬೆಂಗಳೂರು

ಬೆಂಗಳೂರು: ಶಾಲೆ ಆರಂಭವಾದ ಬೆನ್ನಲ್ಲೇ ಶಿಕ್ಷಕರಿಂದ ಮಕ್ಕಳಿಗೆ ಟಾರ್ಚರ್ ಕೂಡ ಆರಂಭವಾಗಿದೆ. ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಮೇಲೆ ಶಿಕ್ಷಕರೊಬ್ಬರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ಬೆಂಗಳೂರಿನ ಬ್ಲೂಬೆಲ್ ಶಾಲೆಯಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಹಲ್ಲೆ ನಡೆಸಿದ್ದಾಗಿ ಪೋಷಕರು ಆರೋಪಿಸಿದ್ದು, ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಬಲವಾದ ಏಟು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಘಟನೆ ಬಗ್ಗೆ ಪ್ರಶ್ನೆ ಮಾಡಿದರೆ ಪ್ರಾಂಶುಪಾಲರು ಉಡಾಫೆಯ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಲೆಗಳು ಆರಂಭವಾದ ಬೆನ್ನಲ್ಲೇ ವಿಜಯನಗರದ ಮಾಗಡಿ ರಸ್ತೆಯಲ್ಲಿ ಬರುವ ಅನುಭವನಗರದಲ್ಲಿ ಇರುವ ಬ್ಲೂಬೆಲ್ ಶಾಲೆಯಲ್ಲಿ ವಿದ್ಯಾರ್ಥಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಗಣಿತ ನೋಟ್ಸ್ ತಂದಿಲ್ಲ ಎಂದಿದ್ದಕ್ಕೆ ಶಿಕ್ಷಕ ಮಾದೇಶ್ ವಿದ್ಯಾರ್ಥಿ ತನ್ಮಯ್ ಕಪಾಲಕ್ಕೆ ಬಾರಿಸಿದ್ದಾರೆ. ಪರಿಣಾಮವಾಗಿ ಆತನಿಗೆ ಕಿವಿ ನೋವು ಉದ್ಭವಿಸಿದ್ದು, ಕಣ್ಣಿ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ತನ್ಮಯ್ ಕಣ್ಣಿಗೆ ವೈದ್ಯರು ಸ್ಪೆಟ್ಸ್ ಹಾಕಿದ್ದು, ಐಸಿಯುಗೆ ದಾಖಲಿಸಲಾಗಿದೆ

ನಗರದ ವಿಕ್ಟೋರಿಯಾ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಬ್ಲೂಬೆಲ್ ಶಾಲಾ ಆಡಳಿತ ಮಂಡಳಿ ಕ್ಯಾರೇ ಎನ್ನುತ್ತಿಲ್ಲ. ಮಗನ ಮೇಲೆ ಹಲ್ಲೆಯನ್ನು ಪ್ರಶ್ನಿಸಿದ ತಂದೆಗೆ ಪ್ರಾಂಶುಲಾಪರು, ಉಡಾಫೆಯ ಮಾತುಗಳನ್ನಾಡಿದ್ದಾರೆ. ಹೊಡೆದಿರುವ ಶಿಕ್ಷಕನಿಗೆ ಕೊರೋನಾ ತಗುಲಿದೆ. ಹೀಗಾಗಿ ನಾನು ಏನು ಮಾಡಲಿ ಎಂದು ಪ್ರಾಂಶುಪಾಲ ಹೇಳಿದ್ದಾಗಿ ವಿದ್ಯಾರ್ಥಿಯ ತಂದೆ ಅಳಲನ್ನು ತೋಡಿಕೊಂಡಿದ್ದಾರೆ.

Leave a Reply

Your email address will not be published.