Home District ಕಟ್ಟಿದ್ದ ದೇವಾಲಯ ಜೆಸಿಬಿ ಮುಖಾಂತರ ದ್ವಂಸ ;ಪ್ರಶ್ನೆಮಾಡಲು ಹೋದವರಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ…

ಕಟ್ಟಿದ್ದ ದೇವಾಲಯ ಜೆಸಿಬಿ ಮುಖಾಂತರ ದ್ವಂಸ ;ಪ್ರಶ್ನೆಮಾಡಲು ಹೋದವರಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ…

1452
0
SHARE

ಬೆಂಗಳೂರು ಗ್ರಾಮಾಂತರ.  ಕಟ್ಟಿದ್ದ ದೇವಾಲಯವನ್ನ ದುಷ್ಕರ್ಮಿಗಳು ಜೆಸಿಬಿ ಮುಖಾಂತರ ದ್ವಂಸಗೊಳಿಸಿರುವ ಘಟನೆ ಯಲಹಂಕದ ಕೋಗಿಲು ಬಳಿಯ ಪ್ರಕೃತಿ ನಗರದಲ್ಲಿ ನಡೆದಿದೆ. ಅಂದಹಾಗೆ ಕಳೆದ ಮೂರು ತಿಂಗಳ ಹಿಂದೆ ೨೮ ಗುಂಟೆ ಜಾಗದಲ್ಲಿ ವಿದ್ಯಾ ಚೌಡೇಶ್ವರಿ ದೇವಾಲಯ ಹಾಗೂ ಮಠವನ್ನ ಹುಲಿಯೂರು ದುರ್ಗದ ವಿದ್ಯಾಸಂಸ್ಥಾಪನ ಮಠದಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ಕಟ್ಟಲಾಗಿದೆ.

ಇನ್ನೂ ಈ ಜಾಗವನ್ನ ಪ್ರಕೃತಿ ನಗರದ ಭಕ್ತಾಧಿಗಳ ಮುಕೇನಾ ಮಹಾಸಂಸ್ಥಾಪನ ಮಠಕ್ಕೆ ಜಾಗವನ್ನ ದಾನವಾಗಿ ಕೊಡಲಾಗಿತ್ತು. ಜತೆಗೆ ಕಳೆದ ಮೂರು ತಿಂಗಳ ಹಿಂದೆ ದೇವಾಲಯ ನಿರ್ಮಿಸಿ ಧಾರ್ಮಿಕ ಕಾರ್ಯದಲ್ಲಿ ಮಠ ಹಾಗೂ ಸ್ವಾಮೀಜಿಗಳು ತೊಡಗಿದ್ದರು. ಆದ್ರೆ ಕಳೆದ ರಾತ್ರಿ ೫೦ ಜನ ದುಷ್ಕರ್ಮಿಗಳ ಗುಂಪು ದೇವಾಲಯವನ್ನ ಸಂಪೂರ್ಣವಾಗಿ ದ್ವಂಸಗೊಳಿಸಿ ಹಾಳುಗೇಡವಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ತಿಪ್ಪಣ್ಣ ಎಂಬುವವರು ಗುಂಡಾಗಳನ್ನ ಬಿಟ್ಟು ದೇವಾಲಯ ದ್ವಂಸಗೊಳಿಸಿರುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ರಾತ್ರಿ ಬಂದಿದ್ದ ಗುಂಡಾಗಳ ವಿಡಿಯೋವನ್ನ ಕೆಲ ಭಕ್ತಾಧಿಗಳು ಚಿತ್ರಿಕರಿಸಿದ್ದಾರೆ. ಅಲ್ಲದೆ ದ್ವಂಸಗೊಳಿಸುತ್ತಿದ್ದನ್ನ ಪ್ರಶ್ನೆ ಮಾಡಲು ಹೋದವರ ಮೇಲೆ ಗುಂಡಾಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದ್ರಿಂದ ರೊಚ್ಚಿಗೆದ್ದ ಭಕ್ತಾಧಿಗಳು ದ್ವಂಸಗೊಳಿಸಿದ ದೇವಾಲಯದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಭಕ್ತಾಧಿಗಳು ಧರಣಿ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ್ರು.

ಇನ್ನೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಲಹಂಕ ಪೊಲೀಸರು ತಿಪ್ಪಣ್ಣ ಎನ್ನುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಸ್ವಾಮೀಜಿಗಳು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here