Home Latest ಭಯೋತ್ಪಾದಕರು- ಸೇನೆಯ ನಡುವೆ ಗುಂಡಿನ ಚಕಮಕಿ: ಯೋಧ ಸೇರಿದಂತೆ ಇಬ್ಬರು ಮೃತ

ಭಯೋತ್ಪಾದಕರು- ಸೇನೆಯ ನಡುವೆ ಗುಂಡಿನ ಚಕಮಕಿ: ಯೋಧ ಸೇರಿದಂತೆ ಇಬ್ಬರು ಮೃತ

111
0
SHARE

ಶ್ರೀನಗರ:  ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಮತ್ತೆ  ತೀವ್ರವಾಗಿದೆ. ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರದ ಸೋಪೋರ್​ ನಗರದಲ್ಲಿ ಭಯೋತ್ಪಾದಕರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ  ಸಿಆರ್​ಪಿಎಫ್​ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರಿಗೆ ಗಾಯವಾಗಿದ್ದು,ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಆರ್​ಪಿಎಫ್​ ಯೋಧರು ಗಸ್ತು ತಿರುಗುವ ವೇಳೆ ಭಯೋತ್ಪಾದಕರು ಹಠಾತ್​ ದಾಳಿ ನಡೆಸಿದ್ದು, ಈ ವೇಳೆ, ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಯೋಧ ಹಾಗೂ ಸ್ಥಳೀಯ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಸದ್ಯ ಆ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ

LEAVE A REPLY

Please enter your comment!
Please enter your name here