Home Cinema “THE BOSS” ಅಂದಿದ್ದಕ್ಕೆ ದರ್ಶನ್ ಗರಂ ಆಗಿದ್ದೇಕೆ..?! “ನಾವು ಮದಕರಿ ನಾಯಕ ಸಿನಿಮಾ ಮಾಡುತ್ತೇವೆ, ಅದಕ್ಕೆ...

“THE BOSS” ಅಂದಿದ್ದಕ್ಕೆ ದರ್ಶನ್ ಗರಂ ಆಗಿದ್ದೇಕೆ..?! “ನಾವು ಮದಕರಿ ನಾಯಕ ಸಿನಿಮಾ ಮಾಡುತ್ತೇವೆ, ಅದಕ್ಕೆ ದರ್ಶನ್ ನಾಯಕ”

2473
0
SHARE

ಸ್ಯಾಂಡಲ್ವುಡ್‌ನಲ್ಲಿ ಈಗ ವೀರ ಮದಕರಿ ನಾಯಕ ಚಿತ್ರದ ವಿವಾದ ಹೆಚ್ಚಾಗಿದೆ, ಚಿತ್ರದುರ್ಗದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಸೌಹಾರ್ಧ ನಡಿಗೆ ಶರಣ ಸಂಸ್ಕೃತಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ ಮದಕರಿ ನಾಯಕ ಚಿತ್ರತಂಡ ಪರೋಕ್ಷವಾಗಿ ಚಿತ್ರ ಮಾಡುವ ಸೂಚನೆ ನೀಡಿದ್ದಾರೆ, ಇನ್ನೂ ಕೆಲವೇ ದಿನಗಳಲ್ಲಿ ಚಿತ್ರ ಸೆಟ್ಟೇರುವ ಲಕ್ಷಣಗಳೂ ಕಂಡು ಬರುತ್ತಿದೆ.

ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಸಂದರ್ಭದಲ್ಲಿ ದಸರಾಗಿಂತ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಸ್ಟಾರ್‌ಗಳಾದ ದರ್ಶನ್ ಮತ್ತು ಸುದೀಪ್ ನಡುವಿನ ವಾರ್ ಅತಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ಕೋಟೆನಾಡಿನ ವೀರಮದಕರಿ ನಾಯಕನ ಚಿತ್ರದಲ್ಲಿ ಯಾರು ನಾಯಕ ನಟನಾಗಿ ನಟಿಸಬೇಕು ಎಂಬುದೇ ಎಲ್ಲರ ಬಾಯಲ್ಲಿ ಬಹು ಚರ್ಚಿತ ವಿಷಯವಾಗಿದೆ.

ಈ ನಡುವೆ ಮಧ್ಯಕರ್ನಾಟಕದ ದಸರಾ ಎಂದೇ ಖ್ಯಾತಿ ಹೊಂದಿರುವ ಮುರುಘಾ ಮಠದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದ ಸೌಹಾರ್ಧ ನಡಿಗೆ ಶರಣ ಸಂಸ್ಕೃತಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ ನಟ ದರ್ಶನ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಾವು ಯಾವುದೇ ಕಾರಣಕ್ಕೂ ಮದಕರಿ ನಾಯಕ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಖಡಾ ಖಂಡಿತವಾದ ಹೇಳಿಕೆ ನೀಡಿದ್ರು.

ಚಿತ್ರದುರ್ಗದ ಗಾಂಧೀ ವೃತ್ತದಲ್ಲಿ ಆರಂಭವಾದ ಸೌಹಾರ್ಧ ನಡಿಗೆ ಶರಣ ಸಂಸ್ಕೃತಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮದಕರಿ ನಾಯಕ ಚಿತ್ರತಂಡ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು, ಈ ವೇಳೆ ವೇದಿಕೆಯಲ್ಲಿ ಕಾಣಿಸಿಕೊಂಡ ಮದಕರಿ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಾಯಕ ನಟ ದರ್ಶನ್, ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರತಂಡದ ಇತರರು ಭಾಗಿಯಾಗಿದ್ರು,

ಈ ವೇಳೆ ಮಾತನಾಡಿ ಇಲ್ಲಿ ಮದಕರಿ ಚಿತ್ರತಂಡ ಹಾಜರಾಗಿದೆ, ನಾವು ಏನು ಮಾಡಲು ಹೊರಟಿದ್ದೇವೆ ಎಂಬುದು ನಿಮಗೆಲ್ಲಾ ಗೊತ್ತಿದೆ, ಮಾನವ ಕುಲವೆಲ್ಲಾ ಒಂದೆ, ಜಾತಿ ಬೇಧ ಬಿಟ್ಟು ನಮಗೆ ಸಹಕಾರ ನೀಡಿ, ನಮಗೆ ಶ್ರೀಮಠ ಮತ್ತು ಮುರುಘಾ ಶರಣರ ಆಶೀರ್ವಾದ ಇದೆ ಎನ್ನುವ ಮೂಲಕ ಪರೋಕ್ಷವಾಗಿ ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ದರ್ಶನ್ ನಾಯಕತ್ವದಲ್ಲೇ ಮದಕರಿ ನಾಯಕ ಚಿತ್ರವನ್ನು ಮಾಡೇ ಮಾಡುತ್ತೇವೆ ಎಂಬುದನ್ನ ಪರೋಕ್ಷವಾಗಿ ಸ್ಪಷ್ಟಪಡಿಸಿದ್ರು.

ಇನ್ನೂ ಮಠದ ಆವರಣದಲ್ಲಿ ಆನೆಯ ಬಳಿ ಹೋಗಿ ಮಾವುತರ ಜೊತೆ ಮಾತನಾಡುತ್ತಿದ್ದ ದರ್ಶನ್‌ಗೆ ಅಭಿಮಾನಿಯೊಬ್ಬ ಡಿ-ಬಾಸ್ ಎಂದಿದ್ದಕ್ಕೆ ಅಲ್ಲೇ ಗರಂ ಆದ ಘಟನೆಯೂ ಕಂಡು ಬಂದಿತು. ಒಟ್ಟಾರೆ ಮದಕರಿ ನಾಯಕನ ಪಾತ್ರವನ್ನು ಯಾರು ಮಾಡಬೇಕು ಎಂಬ ವಿಷಯವಾಗಿ ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವಾಗಲೇ, ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ಕೋಟೆನಾಡಿನ ಪಾಳೇಗಾರ ವೀರಮದಕರಿ ನಾಯಕ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

LEAVE A REPLY

Please enter your comment!
Please enter your name here