ಪತ್ನಿಯ ಶೀಲ ಶಂಕಿಸಿ ಬೆಲ್ಟ್ ನಿಂದ ಕುತ್ತಿಗೆ ಬಿಗಿದು ಕೊಂದ ಪಾಪಿ ಗಂಡ..!

ಅಪರಾಧ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಬೆಲ್ಟ್ ನಿಂದ ಕುತ್ತಿಗೆ ಬಿಗಿದು ಪತಿಯೇ ಕೊಲೆ ಮಾಡಿರುವ ಘಟನೆ ಹೆಚ್ಎಎಲ್ ನ ಕಾಳಪ್ಪ ಲೇಔಟ್ ನಲ್ಲಿ ನಡೆದಿದೆ. ನಾಗಮ್ಮ ಕೊಲೆಯಾದ ದುರ್ಧೈವಿಯಾಗಿದ್ದು, ನೀಲಕಂಠ ಕೊಲೆ ಮಾಡಿದ ಪಾಪಿ ಪತಿಯಾಗಿದ್ದಾನೆ. ರಾಯಚೂರು ಮೂಲದವರಾದ ಈ ದಂಪತಿ, 17 ವರ್ಷದ ಹಿಂದೆ ಮದುವೆ ಆಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೃತ ಗಂಗಮ್ಮ ಮನೆಗೆಲಸ ಮಾಡಿಕೊಂಡಿದ್ದು, ನೀಲಕಂಠ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಪತ್ನಿ ನಾಗಮ್ಮಳ ಶೀಲ ಶಂಕಿಸಿ ಪದೇ – ಪದೇ ಕುಡಿದು ಜಗಳವಾಡುತ್ತಿದ್ದ. ಮೊನ್ನೆಯೂ ಕೂಡ ದಂಪತಿಗಳ ಮಧ್ಯೆ ಗಲಾಟೆಯಾಗಿದ್ದು, ಈ ವೇಳೆ ಡಿವೋರ್ಸ್ ಕೊಟ್ಟು ಹೋಗು ಎಂದು  ಪತಿ ನೀಲಕಂಠನಿಗೆ ನಾಗಮ್ಮ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪತಿ, ಆಕೆಯ ಕುತ್ತಿಗೆಗೆ ಬೆಲ್ಟ್ ಬಿಗಿದು ಕೊಲೆ ಮಾಡಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಆರೋಪಿ ವಿರುದ್ಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.