ಭೂಗತಲೋಕದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅತ್ತಿಬೆಲೆ ಪೊಲೀಸರ ಬಲೆಗೆ..!

ಅಪರಾಧ

ಬೆಂಗಳೂರು: ಭೂಗತಲೋಕದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅತ್ತಿಬೆಲೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮುಂಬೈ​ನ ಗ್ಯಾಂಗ್​ಸ್ಟರ್​ ಅಬ್ದುಲ್‌ ಅಜೀಜ್ ಖಾನ್ ಬಂಧಿತ ಆರೋಪಿಯಾಗಿದ್ದು, ಕೊಲೆ‌, ದರೋಡೆ, ಬೆದರಿಕೆ, ಡ್ರಗ್ಸ್ ಪ್ರಕರಣಗಳು ಸೇರಿ ಒಟ್ಟು 37‌ ಪ್ರಕರಣಗ ಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಸದ್ಯ ಇದೀಗ ಅಬ್ದುಲ್‌ ಅಜೀಜ್ ಖಾನ್ ಬಂಧನ ಮಾಡಲಾಗಿದ್ದು, ಅತ್ತಿಬೆಲೆ ರೆಸ್ಟೋರೆಂಟ್​ನಲ್ಲಿ ಅಡಗಿದ್ದ ವೇಳೆ ದಾಳಿ ಮಾಡಿ ಸೆರೆ ಹಿಡಿಯಲಾಗಿದೆ. ಗ್ಯಾಂಗ್​ಸ್ಟರ್​ ಬಳಿ ಪಿಸ್ತೂಲ್, ನಾಲ್ಕು ಜೀವಂತ ಗುಂಡು ವಶಕ್ಕೆ ಪಡೆಯಲಾಗಿದ್ದು, 15 ಸಿ‌ಮ್‌ ಕಾರ್ಡ್​ಗಳು, 6 ಮೊಬೈಲ್ ಫೋನ್​ಗಳು​ ಜಪ್ತಿ ಮಾಡಲಾಗಿದೆ.

Leave a Reply

Your email address will not be published.