ಜಿರಳೆ ಸಾಯಿಸಲು ಹೋಗಿ ಬಾಲಕಿಯ ಪ್ರಾಣ ತೆಗೆದ ಮನೆ ಮಾಲೀಕ..!

ಬೆಂಗಳೂರು

ಬೆಂಗಳೂರು: ಜಿರಳೆ ಔಷಧದಿಂದಾಗಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ವಸಂತನಗರದಲ್ಲಿ ನಡೆದಿದೆ. 6 ವರ್ಷದ ಅಹನಾ ಸಾವನ್ನಪ್ಪಿದ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ವಸಂತನಗರದ ಮಾರಮ್ಮ ದೇವಸ್ಥಾನನದ ಬಳಿ ಮನೆ ಯೊಂದರಲ್ಲಿ ಜಿರಳೆ ಕಾಟವೆಂದು ಮಾಲೀಕ ಶಿವಶಂಕರ್ ಔಷಧ ಸಿಂಪಡಿಸಿ, ಒಂದು ವಾರ ಮನೆಗಳನ್ನ ಖಾಲಿ ಬಿಡುವಂತೆ ನಿವಾಸಿಗಳಿಗೆ ಸೂಚಿಸಿದ್ದರು. ಅದರಂತೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದ ಬಾಲಕಿಯ ಪೋಷಕರು,

ಬಳಿಕ ಮಾಲೀಕನಿಗೆ ಹೇಳದೇ ನಾಲ್ಕೇ ದಿನದಲ್ಲಿ ಮನೆಗೆ ಮರಳಿದ್ದರು. ಅಷ್ಟೇ ಅಲ್ಲ ಸರಿಯಾಗಿ ಮನೆ ಸ್ವಚ್ಛ ಮಾಡದೇ ಮನೆಯಲ್ಲಿದ್ದ ವಸ್ತುಗಳನ್ನ ಬಳಸಿದ್ದಾರೆ. ಪರಿಣಾಮ ಮೂವರಿಗೂ ಉಸಿರಾಟದ ಸಮಸ್ಯೆ ಉಲ್ಬಣಿಸಿತ್ತು. ಆದರೆ ಬಾಲಕಿ ಪರಿಸ್ಥಿತಿ ಗಂಭೀರವಾಗಿ ದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಬಾಲಕಿ ಬದುಕುಳಿದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸದ್ಯ ಪೋಷಕರಿಂದ ಹೇಳಿಕೆ ಪಡೆದಿರುವ ಹೈಗ್ರೌಂಡ್ಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮನೆ ಮಾಲೀಕ ಶಿವಶಂಕರ್​​ನನ್ನ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published.