ಮಲತಂದೆ ಮಾಡಿದ ನೀಚ ಕೆಲಸದ ಬಗ್ಗೆ ಬಾಯಿ ಬಿಟ್ಟ ಸಾನ್ಯ ಅಯ್ಯರ್

ಚಲನಚಿತ್ರ

ಕನ್ನಡ ಬಿಗ್ ಬಾಸ್ ಒಟಿಟಿ ಪ್ರಾರಂಭವಾಗಿದೆ. ಮೊದಲ ದಿನವೇ ಸ್ಪರ್ಧಿಗಳು ತಮ್ಮ ಜೀವನದ ಕರಾಳ ಅಧ್ಯಯನವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಪುಟ್ಟಗೌರಿ ಮದುವೆ ಖ್ಯಾತಿ ಸಾನ್ಯ ಅಯ್ಯರ್ ಅನುಭವಿಸಿದ ಕಷ್ಟ ಕೇಳಿ ಇತರ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳ ಜೀವನವನ್ನು ಪರಿಚಯಿಸಲು ನಾನು ಯಾರು? ಅನ್ನೋ ಹೆಸರಿನಲ್ಲಿ ಚಟುವಟಿಕೆಯೊಂದನ್ನು ನೀಡಿತ್ತು. ಇದರ ಅನುಸಾರ ಸ್ಪರ್ಧಿಗಳು ತಮ್ಮ ತಮ್ಮ ಜೀವನದ ಕುರಿತು ಮಾತನಾಡಬೇಕಿತ್ತು. ಇದೇ ಟಾಸ್ಕ್‌ನಲ್ಲಿ ಸಾನ್ಯ ಅಯ್ಯರ್ ತಮಗೆ ಎದುರಾದ ಸಂಕಷ್ಟದ ಬಗ್ಗೆ ಮನಬಿಚ್ಚಿ ಮಾತನಾಡಿದರು.

‘’ಅಮ್ಮ, ಚಿಕ್ಕಮ್ಮ.. ನನ್ನನ್ನ ಕ್ಷಮಿಸಿ.. ನಾನಿಲ್ಲಿ ನಿಮ್ಮ ಬಗ್ಗೆ ಒಂದು ಬ್ಯಾಕ್‌ ಸ್ಟೋರಿ ಹೇಳಲೇಬೇಕಾಗುತ್ತದೆ. ನನ್ನ ಚಿಕ್ಕಮ್ಮ ಅವರದ್ದು ಅಬ್ಯೂಸಿವ್ ಮ್ಯಾರೇಜ್. ನನ್ನ ಕಣ್ಣ ಮುಂದೆಯೇ ಚಿಕ್ಕಮ್ಮ ಏಟು ತಿನ್ನುತ್ತಿದ್ದರು. ಇದು ನನಗೆ ಮಾನಸಿಕವಾಗಿ ಪರಿಣಾಮ ಬೀರಿತ್ತು. ರಿಲೇಶನ್‌ಶಿಪ್ ಅಂದ್ರೆ ಹೀಗೇ ಅಂತ ನಾನು ಅಂದುಕೊಂಡಿದ್ದೆ. ನಾನೂ ಕೂಡ ಒಂದು ರಿಲೇಶನ್‌ಶಿಪ್‌ನಲ್ಲಿದ್ದೆ. ಅದೂ ಕೂಡ ಅಬ್ಯೂಸಿವ್ ಆಗಿತ್ತು. ನಾನು ಅವನಿಗಾಗಿ ವೃತ್ತಿ ಜೀವನ ಬಿಡಲು ರೆಡಿಯಾಗಿದ್ದೆ. ರಿಲೇಶನ್‌ಶಿಪ್ ಉಳಿಯಬೇಕು ಎಂಬ ಕಾರಣಕ್ಕೆ ಎಲ್ಲಾ ತ್ಯಾಗಕ್ಕೂ ರೆಡಿಯಾಗಿದ್ದೆ. ಆದರೂ ಅದು ವರ್ಕ್ ಆಗಲಿಲ್ಲ ಎಂದು ಕಣ್ಣೀರು ಹಾಕಿದರು.

ನನ್ನ ಮಲತಂದೆಯಿಂದಲೇ ನನ್ನ ನಂಬಿಕೆಗೆ ಮೋಸ ಆಗಿತ್ತು.ನನ್ನಮ್ಮ ಡಬಲ್ ಡಿವೋರ್ಸಿ. ನನ್ನ ತಾಯಿ ಎರಡು ಬಾರಿ ಮದುವೆಯಾಗಿದ್ದರು. ಒಬ್ಬರು ನನ್ನ ಬಯೋಲಾಜಿಕಲ್ ಫಾದರ್. ಮತ್ತೊಬ್ಬರು ಮಲತಂದೆ`. ಬಯೋಲಾಜಿಕಲ್ ಫಾದರ್‌ ಜೊತೆ ಸಂಬಂಧ ಅಷ್ಟಕಷ್ಟೆ. ಮಲತಂದೆ ಜೊತೆ ನನ್ನ ರಿಲೇಶನ್‌ಶಿಪ್ ಚೆನ್ನಾಗಿತ್ತು. ನಾನು ಬೆಳೆದಿದ್ದೇ ಅವರ ಜೊತೆ. ನನ್ನಮ್ಮನಿಗೆ ಅವರು ಫ್ರೆಂಡ್ ಆಗಿದ್ದಾಗಿನಿಂದಲೂ ನನಗೆ ಅವರು ಗೊತ್ತಿತ್ತು. ಆದ್ರೆ, ಮದುವೆ ಆದ್ಮೇಲೆ ನನ್ನಮ್ಮನಿಗೆ ಗೊತ್ತಾಯಿತು ಅದು ತಪ್ಪಾದ ನಿರ್ಧಾರ ಅಂತ’’

‘’ಮಲತಂದೆ ನನ್ನ ತಾಯಿ ಜೊತೆ ರಿಲೇಶನ್‌ಶಿಪ್‌ನಲ್ಲಿ ಇರಬೇಕು ಎಂಬ ಕಾರಣಕ್ಕೆ ನನ್ನ ಹೆಸರನ್ನ ಹಾಳು ಮಾಡಲು ಮುಂದಾಗ್ತಾರೆ. ಹೇಗೆ ಅಂದ್ರೆ, ನನ್ನ ಬಾಯ್‌ಫ್ರೆಂಡ್ ಜೊತೆ ನಾನಿದ್ದ ವಿಡಿಯೋವನ್ನು ರೆಕಾರ್ಡ್ ಮಾಡ್ತಾರೆ. ನನ್ನಮ್ಮನನ್ನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನನ್ನ ವಿಡಿಯೋನ ಇಟ್ಟುಕೊಂಡು ಮೊದಲು ಅಜ್ಜಿಗೆ, ಚಿಕ್ಕಮ್ಮಗೆ ತೋರಿಸ್ತಾರೆ. ಆ ವಿಡಿಯೋದಲ್ಲಿ ಏನೂ ಇರಲಿಲ್ಲ. ಆದರೂ ಅವಮಾನ ಮಾಡ್ತಾರೆ’’

‘’ಸಿಂಗಲ್ ಪೇರೆಂಟ್ ಆಗಿ ದೀಪಾ ತನ್ನ ಮಗಳನ್ನ ಹ್ಯಾಂಡಲ್‌ ಮಾಡೋಕೆ ಆಗುತ್ತಿಲ್ಲ. ಅವರಿಗೆ ಒಬ್ಬ ಮೇಲ್ ಫಿಗರ್ ಬೇಕು ಅಂತ ಚೀಪ್ ಟ್ರಿಕ್ ಯೂಸ್ ಮಾಡ್ತಾರೆ. ನಾನು ಅವರನ್ನ ಅಪ್ಪ ಅಂತ ಬಾಯ್ತುಂಬ ಕರೆದಿದ್ದೀನಿ. ಅವರ ಕೈತುತ್ತು ತಿಂದಿದ್ದೀನಿ. ಆದರೆ, ಅವರು ನನ್ನಮ್ಮ ತಲೆತಗ್ಗಿಸುವ ಹಾಗೆ ಮಾಡಿಬಿಟ್ಟರು. ನನಗೆ ತಂದೆ ಪ್ರೀತಿ ಸಿಕ್ಕಿರಲಿಲ್ಲ. ಆ ಪ್ರೀತಿಯನ್ನ ಇನ್ನೊಬ್ಬರಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ. ಈಗ ಹಾಗೆ ಮಾಡಲ್ಲ. ನಾನು ಸ್ವಾವಲಂಬಿ ಆಗಿರುತ್ತೇನೆ. ಇದೆಲ್ಲಾ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ’’ ಎಂದು ಸಾನ್ಯ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟರು ಹಾಕಿದರು.

Leave a Reply

Your email address will not be published.