ಈಶ್ವರಪ್ಪ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ: ಶಾಸಕ ಸಿಟಿ ರವಿ

ಬೆಂಗಳೂರು

ತಪ್ಪೇ ಮಾಡದ ಸಚಿವ ಈಶ್ವರಪ್ಪ ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರು ರಾಷ್ಟ್ರಗೀತೆ ಕುರಿತು ಎಲ್ಲಿಯೂ ಅಪಮಾನ ಮಾಡಿಲ್ಲ. ಅವರು ಅಗೌರವನ್ನು ತೋರಿಸುವಂತಹ ಏನೂ ಮಾಡಿಲ್ಲ. ಅವರು ಏಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಇನ್ನೂ ರಾಷ್ಟ್ರಗೀತೆ ಬಗ್ಗೆ ನಮಗೆ ಎಷ್ಟು ಗೌರವವಿದೆಯೋ ಕೇಸರಿ ಧ್ವಜಕ್ಕೂ ಅಷ್ಟೇ ಗೌರವವಿದೆ.

ಕೇಸರಿ ಶಾಂತಿ ಮತ್ತು ಸ್ಪೂರ್ತಿಯ ಸಂಕೇತ. ಈಶ್ವರಪ್ಪ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್‍ನವರಿಗೆ ಗೊತ್ತಿರುವುದು ಕೇವಲ ಓಲೈಕೆ ರಾಜಕಾರಣ. ಒಂದು ಸಮುದಾಯವನ್ನು ಓಲೈಸಿಕೊಂಡು ಬಹುಸಂಖ್ಯಾತರನ್ನು ಕಡೆಗಣಿಸುವುದೇ ಆ ಪಕ್ಷದ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು. ಇನ್ನೂ ವಿಧಾನಪರಿಷತ್ ಪ್ರತಿಪ್ರಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ. ಅವರು ಹೆದರಿಸಿದರೆ ಇಲ್ಲಿ ಯಾರು ಹೆದರುವವರು ಇಲ್ಲ. ವೈಯಕ್ತಿಕವಾಗಿ ದಾಳಿ ಮಾಡಿದರೆ ನಮ್ಮದು ಕೂಡ ಅದೇ ಶೈಲಿಯಲ್ಲೇ ಮಾತನಾಡಬೇಕಾಗುತ್ತದೆ ಎಂದು ಸಿಟಿ ರವಿ ಎಚ್ಚರಿಕೆ ನೀಡಿದ್ದಾರೆ.

1 thought on “ಈಶ್ವರಪ್ಪ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ: ಶಾಸಕ ಸಿಟಿ ರವಿ

Leave a Reply

Your email address will not be published.