ನಿಂಬೆಹಣ್ಣಿನ ಈ ಉಪಯೋಗಗಳನ್ನು ಕೇಳಿದ್ರೆ ನೀವು ಉಪಯೋಗಿಸದೆ ಸುಮ್ನೆ ಇರಲ್ಲ

ಲೈಫ್ ಸ್ಟೈಲ್

ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆದು ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗು ತಿಳಿದಿದೆ. ಅನೇಕ ಮನೆಮದ್ದುಗಳಲ್ಲಿ ನಿಂಬೆರಸ ಬಳಸಲಾಗುತ್ತದೆ. ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟಬಹುದೆಂದು ಅಧ್ಯಯನಗಳು ಹೇಳಿವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಇರುವ ಹಲವು ಔಷಧಿ ಗುಣದ ಹಣ್ಣುಗಳಲ್ಲಿ ನಿಂಬೆ ಹಣ್ಣು ಒಂದು. ನಿಂಬೆ ಹಣ್ಣನ್ನು ಕಡಿದು ತಿನ್ನಲು ಸಾಧ್ಯವಿಲ್ಲ. ಬದಲು ಅಡುಗೆ ತಯಾರಿಕೆಯಲ್ಲಿ ನಿಂಬೆ ಹಣ್ಣು ಬಳಿಸಿದ್ರೆ ಸ್ವಾಸ್ಥ್ಯ ಆರೋಗ ಕಾಪಾಡಲು ಅನುಕೂಲವಾಗುತ್ತದೆ.

  • ನಿಂಬೆ ಹಣ್ಣಿನ ಸೇವನೆ ಜೀರ್ಣಶಕ್ತಿ ವೃದ್ಧಿಸುತ್ತದೆ.
  • ದೇಹ ಬಳಲಿಕೆ, ದಾಹ, ನೀರಡಿಕೆಗಳನ್ನು ಶಮನ ಮಾಡುತ್ತದೆ.
  • ಪಿತ್ತ ವಿಕಾರಗಳನ್ನು ನಿವಾರಿಸುತ್ತದೆ.
  • ನಿಂಬೆ ಹಣ್ಣು ಸೇವನೆಯಿಂದ ರಕ್ತ ದೋಷದಿಂದ ಉಂಟಾಗುವ ರೋಗ ಲಕ್ಷಣಗಳು ದೂರವಾಗುತ್ತದೆ.
  • ಮಾದಕ ವಸ್ತುಗಳನ್ನು ಸೇವಿಸಿ ಬರಬಹುದಾದ ದೈಹಿಕ ತೊಂದರೆಗಳಿಗೆ ನಿಂಬೆ ಹಣ್ಣು ರಾಮಬಾಣ
  • ಬಿಸಿಲಿನಲ್ಲಿ ಬಳಲಿ ಬಂದುವರಿಗೆ ನಿಂಬೆ ಹಣ್ಣಿನ ಶಬಬತ್ ಕುಡಿಸಿದರೆ ನೀರಡಿಕೆ ದೂರವಾಗುತ್ತದೆ. ಜೊತೆಗೆ ಹೊಸ ಚೈತನ್ಯ ಕೂಡ ವೃದ್ಧಿಯಾಗುತ್ತದೆ.
  • ನಿಂಬೆ ಹಣ್ಣಿನಲ್ಲಿ ಖನಿಜಾಂಶ, ಕಾರ್ಬೋಡೈಡ್ರೇಟ್ಸ್, ಕ್ಯಾಲ್ಸಿಯಂ, ಫಾಪ್ಪರಸ್, ಕಬ್ಬಿಣದಂಶ, ಥಿಯಾಮಿನ್, ರಿಬೋಪ್ಲವಿನ್, ನಿಯಾಸಿನ್, ಕಿಯೋ ಕ್ಯಾಲೋರಿ ಸೇರಿದಂತೆ ಹಲವು ಅಂಶಗಳಿರುತ್ತದೆ.

Leave a Reply

Your email address will not be published.