ದೌರ್ಜನ್ಯ, ಹಲ್ಲೆ ಬಗ್ಗೆ ಮೌನ ಮುರಿದ ಭಾವನಾ ಮೆನನ್: ಟಗರು ಬೆಡಗಿಯ ಕಣ್ಣೀರ ಕತೆ ಇದು

ಚಲನಚಿತ್ರ

ತಿರುವನಂತಪುರಂ: ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ ಎಂದು ನಟಿ ಭಾವನಾ ಮೆನನ್ ಬೇಸರ ವ್ಯಕ್ತಪಡಿಸಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್‍ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಲೈಂಗಿಕ ಕಿರುಕುಳಕ್ಕೆ ಒಳಗಾದ ನಂತರ ನಾನು ಆಘಾತಕ್ಕೊಳಗಾಗಿದ್ದೆ. ನಂತರ ಸಮಾಜದ ಮುಂದೆ ಹೋದ ನನ್ನ ಘನತೆಯನ್ನು ಮರಳಿ ಪಡೆಯಲು ಬಯಸಿದ್ದೇನೆ. ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ನಟಿ, ತಮ್ಮ ಆಘಾತಕಾರಿ ಅವಧಿಯಲ್ಲಿ ಪತಿ, ನಿಕಟ ಸಂಬಂಧಿಗಳು, ಸ್ನೇಹಿತರು ಮತ್ತು ಸಾರ್ವಜನಿಕರು ಸೇರಿದಂತೆ ನನ್ನ ಕುಟುಂಬವು ನನ್ನನ್ನು ಬೆಂಬಲಿಸಿತ್ತು ಎಂದು ಹೇಳಿದರು.

ಸಮಾಜದಲ್ಲಿ ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ. ನನ್ನ ಸಂಪೂರ್ಣ ಇಚ್ಛಾಶಕ್ತಿಯೇ ನನ್ನನ್ನು ಮುಂದುವರಿಸಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ನನಗೆ ಬಲವಾದ ಬೆಂಬಲವನ್ನು ನೀಡಿದ ಹೊರತಾಗಿಯೂ ನಾನು ಒಂಟಿತನ ಅನುಭವಿಸುತ್ತಿದ್ದೇನೆ ಎಂದರು. 2020ರಂದು ಬೆಳಗ್ಗೆಯಿಂದ ಸಂಜೆಯವರೆಗೆ 15 ದಿನಗಳ ಕಾಲ ನ್ಯಾಯಾಲಯದಲ್ಲಿ ಹೇಗೆ ಇದ್ದೆ ಎಂದು ಅವರು ನೆನಪಿಸಿಕೊಂಡರು. ಪ್ರತಿ ಬಾರಿಯೂ ಒಬ್ಬ ವಕೀಲರು ನನಗೆ ಪ್ರಶ್ನೆ ಮಾಡುತ್ತಿದ್ದಾಗ ನಾನು ನಿರಪರಾಧಿಯೆಂದು ಸಾಬೀತುಪಡಿ ಸಿಕೊಳ್ಳಲು ಸಾಕಷ್ಟು ಹೋರಾಡಿದ್ದೇನೆ ಎಂದು ತಿಳಿಸಿದರು.

 

ಆಘಾತಕಾರಿ ಘಟನೆಯ ನಂತರ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಸಿಕ್ಕಾಪಟ್ಟೆ ಅವಮಾನಿಸುತ್ತಿದ್ದಾರೆ. ಘಟನೆಯ ನಂತರ ಆಶಿಕ್ ಅಬು ಮತ್ತು ಶಾಜಿ ಕೈಲಾಸ್, ನಟ-ನಿರ್ದೇಶಕ ಪೃಥ್ವಿರಾಜ್ ಮತ್ತು ನಟ ಜಯಸೂರ್ಯ ಅವರಂತಹ ನಿರ್ದೇಶಕರು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ನನಗೆ ನಟಿಸಲು ಅವಕಾಶವನ್ನು ನಿರಾಕರಿಸಿದರು ಎಂದರು. 2017ರಲ್ಲಿ ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್‍ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಭಾವನಾ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಐದು ವರ್ಷ ಕಳೆದಿದೆ. ಈಗ ಭಾವನಾ ಆ ಘಟನೆ ಬಗ್ಗೆ ಮಾತನಾಡಿದ್ದಾರೆ.

Leave a Reply

Your email address will not be published.