ಜ್ವರದಿಂದ ಬಳಲುತ್ತಿದ್ದರೂ ಮೌನ ಪ್ರತಿಭಟನೆಯಲ್ಲಿ ಭಾಗಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು

ಬೆಂಗಳೂರು: ಜ್ವರದಿಂದ ಬಳಲುತ್ತಿದ್ದರೂ ಮೌನ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಿಎಂ ಅವರು ಕುಟುಂಬದ ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವೇಳೆ ವೈದ್ಯರು, ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಜ್ವರದಿಂದ ಬಳಲುತ್ತಿದ್ದರೂ ಮೌನ ಪ್ರತಿಭಟನೆಗೆ ಆಗಮಿಸಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ,

ಸೋನಿಯಾ ಗಾಂಧಿಯವರ ವಿಚಾರಣೆ ನಡೆಯುತ್ತಿದೆ. ಅವರನ್ನು ವಾಪಸ್ ಕಳಿಸೋವರೆಗೂ ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನೆಗೆ ಎಲ್ಲ ನಾಯಕರನ್ನೂ ಬರುವುದಕ್ಕೆ ಹೇಳಿದ್ದೇವೆ. ಮೌನವಾಗಿ ಪ್ರತಿಭಟನೆ ಮಾಡ್ತೀವಿ. ದೆಹಲಿಯಲ್ಲೂ ಪ್ರತಿಭಟನೆ ಮಾಡ್ತಿದ್ದಾರೆ ಎಂದು ತಿಳಿಸಿದರು. ಜಮೀರ್ ಅಹಮದ್ ಗೆ ರಣದೀಪ್ ಸುರ್ಜೇವಾಲಾ ಎಚ್ಚರಿಕೆ ನೊಟೀಸ್ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನೂ ಆ ವಿಚಾರವನ್ನು ಪೇಪರ್ ನಲ್ಲಿ ಓದಿದೆ. ನನಗೂ ಆ ಮಾಹಿತಿ ಬಂದಿದೆ. ಯಾರ್ಯಾರ ಮೇಲೆ ಏನೇನು ಕ್ರಮ ತಗೋಬೇಕೋ ಅವರು ತಗೋತಾರೆ ಅಂತ ಡಿಕೆಶಿ ಹೇಳಿದರು.

Leave a Reply

Your email address will not be published.