ವಾವ್ ..!  ಮೂರೇ ನಿಮಿಷದಲ್ಲಿ ನಾವೂ ವಿಶ್ವದಾಖಲೆ ಮಾಡಬಹುದಂತೆ

ಬೆಂಗಳೂರು ಲೈಫ್ ಸ್ಟೈಲ್

ವಿಶ್ವ ದಾಖಲೆ ಅಂದರೆ ಅದು ಸುಮ್ಮನೆ ದಕ್ಕುವುದಿಲ್ಲ. ಇದಕ್ಕಾಗಿ ಬಹಳ ಪರಿಶ್ರಮ ಹಾಕಬೇಕು. ಅಲ್ಲದೇ ಏನೇ ಮಾಡಿದರೂ ಕಠಿಣ ಅಭ್ಯಾಸ ಮಾಡಬೇಕು. ವಿಶ್ವದಾಖಲೆಗಳನ್ನು ಹೆಚ್ಚಾಗಿ ನಾವು ಕ್ರೀಡಾಕೂಟಗಳಲ್ಲಿ ನೋಡುತ್ತೇವೆ. ಉಸ್ಸೇನ್ ಬೋಲ್ಟ್ ಕೇವಲ 10 ಸೆಕೆಂಡ್​​ಗಳಲ್ಲಿ 100 ಮೀಟರ್ ದೂರದ ಓಟವನ್ನು ಕ್ರಮಿಸಿದರು. ಯುವರಾಜ್ ಸಿಂಗ್ ಒಂದೇ ಓವರ್​​​ನಲ್ಲಿ ಸತತ 6 ಸಿಕ್ಸ್​ಗಳನ್ನು ಸಿಡಿಸಿದರು, ಅನಿಲ್ ಕುಂಬ್ಳೆ ಟೆಸ್ಟ್​ನ ಒಂದೇ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್​​ಗಳನ್ನು ಕಬಳಿಸಿದರು. ಇಂತಹ ದಾಖಲೆಗಳನ್ನು ನೋಡಲು ಬಹಳ ರೋಚಕವಾಗಿರುತ್ತದೆ.

ಆದರೆ ಕ್ರೀಡೆಯನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲೂ ವಿಶ್ವ ದಾಖಲೆಯನ್ನು ಮಾಡಬಹುದು ಎಂದು ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಇದಕ್ಕಾಗಿ ಗಿನ್ನಿಸ್ ವರ್ಲ್ಡ್​​ ರೆಕಾರ್ಡ್, ಲಂಡನ್​​ ವರ್ಲ್ಡ್​​ ರೆಕಾರ್ಡ್, ಲಿಮ್ಕಾ ವರ್ಲ್ಡ್​​ ರೆಕಾರ್ಡ್ ಹೀಗೆ ಹತ್ತು ಹಲವು ವರ್ಲ್ಡ್​​ ರೆಕಾರ್ಡ್ ಸಂಸ್ಥೆಗಳು ಇದೆ. ಇವುಗಳಲ್ಲಿ ದಾಖಲೆಯನ್ನು ದಾಖಲು ಮಾಡುವುದೇ ಒಂದು ಪ್ರತಿಷ್ಠೆ. ಅದು ಅಷ್ಟೇನೂ ಸುಲಭವಲ್ಲ ಕೂಡ. ಇಂತಹ ಸಂಸ್ಥೆಗಳಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಬೇಕು ಎಂದರೆ ಅದು ವಿಶೇಷವಾಗಿರಬೇಕು. ಬೇರೆ ಯಾರೂ ಮಾಡಿರದ ಒಂದು ದಾಖಲೆಯಾಗಿರಬೇಕು ಅಥವಾ ಯಾರೋ ಮಾಡಿದ ದಾಖಲೆಯನ್ನು ಮುರಿದು ಅದನ್ನು ಉತ್ತಮಪಡಿಸಬೇಕು.

ಎಲ್ಲರಿಗೂ ಇಂತಹ ದಾಖಲೆಗಳನ್ನು ಮಾಡಲು ಆಗುವುದಿಲ್ಲ, ಇನ್ನು ಇಂತಹ ದಾಖಲೆಗಳಲ್ಲಿ ಪಾಲ್ಗೊಳ್ಳುವುದೂ ಕನಸಿನ ಮಾತೇ. ಆದರೆ ಈಗ ನಿಮಗೆ ಅಂದರೆ ಕನ್ನಡಿಗರಿಗೆ ಇಂತಹ ದಾಖಲೆಯಲ್ಲಿ ಭಾಗವಹಿಸಲು ಅವಕಾಶವೊಂದು ಸೃಷ್ಟಿಯಾಗಿದೆ. ಅದೂ ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡಿಗರಿಗೋಸ್ಕರ ಮಾಡುತ್ತಿರುವ ವಿಶ್ವದಾಖಲೆಯಲ್ಲಿ ಪಾಲ್ಗೊಳ್ಳಲು ಸಿಕ್ಕಿರುವ ಸದವಕಾಶವನ್ನು ಖಂಡಿತವಾಗಿ ಕಳೆದುಕೊಳ್ಳುಬೇಡಿ. ಅಷ್ಟಕ್ಕೂ ಇದು ಯಾವ ವಿಶ್ವದಾಖಲೆ, ಯಾರಿಗಾಗಿ ಮಾಡುತ್ತಿರುವ ವಿಶ್ವದಾಖಲೆ, ಇದರಲ್ಲಿ ಭಾಗವಹಿಸುವುದು ಹೇಗೆ? ಯಾರೆಲ್ಲಾ ಇದರಲ್ಲಿ ಪಾಲ್ಗೊಳ್ಳಬಹುದು ಎಂದು ನಿಮ್ಮಲ್ಲಿ ಪ್ರಶ್ನೆಗಳಿದ್ದರೇ ಅದಕ್ಕೂ ಉತ್ತರ ಇಲ್ಲಿದೆ.

ಇದೇ ಫೆಬ್ರವರಿ 20 ರಂದು ನಡೆಯುತ್ತಿರುವ ಈ ವಿಶ್ವದಾಖಲೆ ಪ್ರಯತ್ನದಲ್ಲಿ ವಯಸ್ಸಿನ ಮಿತಿ ಇಲ್ಲದೇ ಯಾರು ಬೇಕಾದರೂ ಭಾಗವಹಿಸಬಹುದು. ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ಈ ಪ್ರಯತ್ನದ ವಿಡಿಯೋವನ್ನು ನಾವು ಹೇಳುವ ಹ್ಯಾಷ್ ಟ್ಯಾಗ್​ಗಳನ್ನು ಬಳಸಿ ನಿಮ್ಮದೇ ಯೂ ಟ್ಯೂಬ್ ಚಾನಲ್​​​ನಲ್ಲಿ ಅಪ್​ಲೋಡ್ ಮಾಡಬೇಕು. ಅಷ್ಟಕ್ಕೂ ಯಾವ ತರಹದ ವಿಡಿಯೋಗಳನ್ನು ಅಪ್​​ಲೋಡ್ ಮಾಡಬೇಕು ಅನ್ನೋ ಗೊಂದಲ ನಿಮ್ಮಲ್ಲಿ ಇರಬಹುದು. ಅದಕ್ಕೂ ಉತ್ತರ ಇದೆ. ನೀವು ಯಾವುದೇ ಕಲಾ ಪ್ರಕಾರದ ಅಂದರೆ ಹಾಡು, ನೃತ್ಯ, ಚಿತ್ರಕಲೆ ಹೀಗೆ ಒಂದರಿಂದ ಮೂರು ನಿಮಿಷದಲ್ಲಿ ರೆಕಾರ್ಡ್​ಮಾಡಲು ಸರಿಹೋಗುವಂತಹ ಕಲಾ ಪ್ರಕಾರವನ್ನು ನಿಮ್ಮದೇ ಮೊಬೈಲ್​​​ನಲ್ಲಿ ರೆಕಾರ್ಡ್​ ಮಾಡಿ ಅದನ್ನು ನಿಮ್ಮದೇ ಯೂಟ್ಯೂಬ್ ಚಾನಲ್​ನಲ್ಲಿ ಮೇಲೆ ಹೇಳಿದ ದಿನಾಂಕ ಮತ್ತು ಸಮಯದಲ್ಲಿ ನಾವು ಕೊಡುವ ಹ್ಯಾಷ್ ಟ್ಯಾಗ್​​​ ಹಾಕಿ ಅಪ್​ಲೋಡ್​​ ಮಾಡಬೇಕು.

ಈ ವಿಶ್ವದಾಖಲೆ ಪ್ರಯತ್ನಕ್ಕೆ ಕೊಟ್ಟಿರುವ ಹೆಸರು “MOST PERFORMING VIDEOS UPLOADED IN ONE HOUR”. ಅಂದರೆ ಒಂದು ಗಂಟೆಯಲ್ಲಿ ಅತಿಹೆಚ್ಚು ಕಲಾಪ್ರಕಾರದ ಪ್ರದರ್ಶನಗಳನ್ನು ಅಪ್​​ಲೋಡ್ ಮಾಡುವುದು. ಇದಕ್ಕೆ ನೀವು #londonworldrecords #drguinnessgireeshkumar #sriveenavanimusicschool #fidelitusgallery ಹ್ಯಾಷ್​ಟ್ಯಾಗ್​​​ಗಳನ್ನು ಬಳಸಿ ಅಪ್​ಲೋಡ್​​​​ ಮಾಡಬೇಕು. ಯಾವುದೇ ವಯಸ್ಸಿನ ಮಿತಿಯಿಲ್ಲದೇ ಪುಟಾಣಿಗಳಿಂದ ಹಿರಿಜೀವಗಳವರೆಗೆ ಈ ವಿಶ್ವದಾಖಲೆ ಪ್ರಯತ್ನದಲ್ಲಿ ಭಾಗವಹಿಸಿ ನಿಮ್ಮ ಪ್ರತಿಭಾ ಪ್ರದರ್ಶನ ಮಾಡಬಹುದು.

ಹಾಗಿದ್ದರೆ ತಡ ಯಾಕೆ ಈಗಲೇ ನಿಮ್ಮದೇ ಮೊಬೈಲ್ ನಲ್ಲಿ ನಿಮ್ಮ ಪ್ರತಿಭೆಯನ್ನು ರೆಕಾರ್ಡ್​ಮಾಡಿ ನಿಮ್ಮದೇ ಯೂ ಟ್ಯೂಬ್ ಚಾನಲ್​ನಲ್ಲಿ ಅಪ್​ಲೋಡ್​ ಮಾಡಿ ಅಭ್ಯಾಸ ಮಾಡಿ ಮತ್ತು ಫೆಬ್ರವರಿ 20 ರಂದು ಮತ್ತೆ ಬೆಳಗ್ಗೆ 10 ರಿಂದ 11ರ ವರೆಗೆ ಮತ್ತೆ ಅದನ್ನು ಹ್ಯಾಷ್​ ಟ್ಯಾಗ್​ಗಳನ್ನು ಬಳಸಿ ಅಪ್​​​​​​ಲೋಡ್​ ಮಾಡಿ, ವಿಶ್ವದಾಖಲೆ ಪ್ರಯತ್ನದಲ್ಲಿ ಯಶಸ್ವಿಯಾಗಿ ಭಾಗಿಯಾಗಿ.

ಅಂದಹಾಗೆ ಈ ವಿಶ್ವದಾಖಲೆ ಪ್ರಯತ್ನ ಮಾಡುತ್ತಿರುವುದು ಬೆಂಗಳೂರಿನ ಬನಶಂಕರಿಯಲ್ಲಿರುವ ಶ್ರೀ ವೀಣಾವಾಣಿ ಮ್ಯೂಸಿಕ್ ಸ್ಕೂಲ್​​ನ ಸಂಸ್ಥಾಪಕರಾದ ಶ್ರೀ ಗಿರೀಶ್ ಕುಮಾರ್ ಅವರು. ಗಿರೀಶ್ ಕುಮಾರ್​ಅವರು ಗಿನ್ನಿಸ್ ಗಿರೀಶ್​ ಅಂತಲೇ ಹೆಸರು ಮಾಡಿದ್ದಾರೆ. ಈಗಾಗಲೇ ಇವರು 37 ವಿಶ್ವದಾಖಲೆಗಳನ್ನು ಮಾಡಿ ಹೆಸರು ಮಾಡಿದ್ದಾರೆ. ವಿಭಿನ್ನ ವಿಶ್ವದಾಖಲೆಗಳನ್ನು ಮಾಡುವುದರಲ್ಲಿ ಗಿರೀಶ್ ಅವರು ಸಿದ್ಧಹಸ್ತರು. ಈಗ 38ನೇ ವಿಶ್ವದಾಖಲೆ ಪ್ರಯತ್ನವು ಫಿಡಿಲಿಟಸ್ ಗ್ಯಾಲರಿ ಹಾಗೂ ಶ್ರೀ ವೀಣಾವಾಣಿ ಮ್ಯೂಸಿಕ್ ಸ್ಕೂಲ್ ಸಹಯೋಗದಲ್ಲಿ ಜರುಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ https://fidelitusgallery.com/world-record-attempt/ ಅಥವಾ https://sriveenavani.com/ ವೆಬ್​ಸೈಟ್​ಗೆ ಲಾಗಿನ್ ಆಗಿ ಮಾಹಿತಿ ಪಡೆಯಿರಿ. ವಿಶ್ವದಾಖಲೆ ಪ್ರಯತ್ನದಲ್ಲಿ ಭಾಗವಹಿಸುವುದನ್ನು ಮರೆಯಬೇಡಿ. ಇದಕ್ಕೆ ಬೇಕಿರೋದು ನಿಮ್ಮ ಮೂರು ನಿಮಿಷದ ಸಮಯ ಮಾತ್ರ.

Leave a Reply

Your email address will not be published.