Home District ಅನುಮಾನಾಸ್ಪದವಾಗಿ ಹುಲಿ ಸಾವು; ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು

ಅನುಮಾನಾಸ್ಪದವಾಗಿ ಹುಲಿ ಸಾವು; ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು

398
0

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ನೀಲಗಿರಿ ಜಿಲ್ಲೆಯ ಗುಡಲೂರು ಸಮೀಪದ ಸಿಂಗಾರ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿ ಘಟನೆಗೆ ಸಂಬಂದಿಸಿದಂತೆ ಹುಲಿಗೆ ವಿಷ ಹಾಕಿ ಹತ್ಯೆ ಮಾಡಿದ ಆರೋಪಿಗಳಿಬ್ಬರನ್ನು ತಮಿಳುನಾಡು ಪೊಲೀಸರು ಬಂಧಿಸಿ ಮತ್ತಿಬ್ಬರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಮಿಳುನಾಡಿನ ಗೂಡ್ಲೂರು ಸಮೀಪದ ಸಿಂಗಾರ ಅರಣ್ಯದಲ್ಲಿ ಕಳೆದ ವರ್ಷ ಹುಲಿಯೊಂದು ಅನುಮಾನಸ್ಪದವಾಗಿ ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆ ಬಳಿಕ ವಿಷ ಸೇವನೆಯಿಂದ ಅದು ಮರಣ ಹೊಂದಿದ್ದು ತಿಳಿದು ಬಂದಿತ್ತು . ಈ ಪ್ರಕರಣದ ತನಿಖೆ ಕೈಗೊಂಡಿದ್ದ ತಮಿಳುನಾಡು ಪೊಲೀಸರು ಇದೀಗ ಇಬ್ಬರು ಆರೋಪಿಗಳಾದ ಅಹಮದ್ ಕಬೀರ್ ಹಾಗೂ ಕರಿಯನ್ ಬಂದಿಸಿದ್ದು, ಮತ್ತಿಬ್ಬರ ಬಂಧನಕ್ಕೆ ಬಲೆಬಿಸಿದ್ದಾರೆ.

ಬಂಧಿತ ಆರೋಪಿಗಳು ಹುಲಿಯ ಚರ್ಮ ಹಾಗೂ ಉಗುರುಗಳನ್ನು ಪಡೆಯುವ ದುರುದ್ದೇಶದಿಂದ ಹುಲಿಗಳಿಗೆ ವಿಷ ಹಾಕಿ ಹತ್ಯೆ ಮಾಡುತ್ತಿದ್ದರು. ಈ ಮೊದಲು ಇವರು ಸಾಕಷ್ಟು ಪ್ರಾಣಿಗಳನ್ನು ಇದೇ ರೀತಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ತನಿಖೆಯಿಂದ ಎಲ್ಲವೂ ಹೊರ ಬರಲಿದೆ.

ಬಂಧಿತ ಆರೋಪಿಗಳನ್ನು ಗೂಡ್ಲೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ

Previous articleಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಭಾರೀ ಮಳೆ; ನೆಲಕಚ್ಚಿದ ಬಾಳೆ ಮರಗಳು!
Next articleಪರೋಕ್ಷವಾಗಿ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡರಾ ಸಿ.ಟಿ.ರವಿ?

LEAVE A REPLY

Please enter your comment!
Please enter your name here