Home Latest ಟಿಕ್​ ಟಾಕ್, ಯುಸಿ ಬ್ರೌಸರ್​ ಸೇರಿ ಚೀನಾದ 59 ಆ್ಯಪ್ ಬ್ಯಾನ್: ಚೀನಾಗೆ ಶಾಕ್ ಕೊಟ್ಟ...

ಟಿಕ್​ ಟಾಕ್, ಯುಸಿ ಬ್ರೌಸರ್​ ಸೇರಿ ಚೀನಾದ 59 ಆ್ಯಪ್ ಬ್ಯಾನ್: ಚೀನಾಗೆ ಶಾಕ್ ಕೊಟ್ಟ ಭಾರತ

88
0
SHARE

ಭಾರತದಲ್ಲಿ ಅತ್ಯಂತ ಜನಪ್ರಿಯ ಆ್ಯಪ್​ ಟಿಕ್​ಟಾಕ್​ ಸೇರಿದಂತೆ ಚೀನಾ ನಿರ್ಮಿತ 59 ಆ್ಯಪ್​​ ನಿಷೇಧಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಇಲಾಖೆ ಈ ಆದೇಶ ಹೊರಡಿಸಿದೆ.

ಲಡಾಖ್​ನ ಗಲ್ವಾನ್​ ವ್ಯಾಲಿಯಲ್ಲಿ ಭಾರತ-ಚೀನಾ ಸಂಘರ್ಷದಿಂದಾಗ ಭಾರತದ 22 ಯೋಧರು ಹುತಾತ್ಮರಾಗಿದ್ದು, ಇದರ ಬೆನ್ನಲ್ಲೇ ಚೀನಾ ವಸ್ತು ಬಹಿಷ್ಕಾರ ಮಾಡುವಂತೆ ಎಲ್ಲೆಡೆಯಿಂದ ಮಹತ್ವದ ಕೂಗು ಕೇಳಿ ಬರುತ್ತಿದೆ.

ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟಿಕ್​ ಟಾಕ್, ಯುಸಿ ಬ್ರೌಸರ್​​​ ಸೇರಿದಂತೆ ಚೀನಾದ 59 ಆ್ಯಪ್​ ಬ್ಯಾನ್​ ಮಾಡಿ ಆದೇಶ ಹೊರಹಾಕಿದೆ. ಪ್ರಮುಖವಾಗಿ ಟಿಕ್​ಟಾಕ್​, ಯುಸಿ ಬ್ರೌಸರ್​, ಶೇರ್​ ಇಟ್​, ಹಲೋ, ಮೈ ಕಮ್ಯುನಿಟಿ, ವಿ ಚಾಟ್​, ಕ್ಲಿನ್​ ಮಾಸ್ಟರ್​ ಸೇರಿದಂತೆ ಅನೇಕ ಡ್ರ್ಯಾಗನ್​ ಆ್ಯಪ್​ ಇದೀಗ ಬ್ಯಾನ್​ ಆಗಿವೆ.

ದೇಶದಲ್ಲಿ ಬಾಯ್ಕಾಟ್​ ಅಸ್ತ್ರ ಪ್ರಯೋಗ ಮಾಡಲಾಗುತ್ತಿದ್ದು, ಚೀನಾದ ಉತ್ಪನ್ನ ಬಹಿಷ್ಕಾರ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಈಗಾಗಲೇ ಸುಮಾರು 471 ಕೋಟಿ ರೂ ಮೌಲ್ಯದ 412 ಕಿಮೀ ಉದ್ದದ ಯೋಜನೆ ಒಪ್ಪಂದ ರದ್ದು ಮಾಡಿಕೊಂಡಿದೆ. ಮಹಾರಾಷ್ಟ್ರ ಕೂಡ 5 ಸಾವಿರ ಕೋಟಿ ರೂ ಒಪ್ಪಂದಕ್ಕೆ ತಡೆ ನೀಡಿದೆ.

ಭಾರತದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಜತೆಗೆ ಚೀನಾ ಮತ್ತು ಯುಎಸ್​ನಲ್ಲೂ ಇದರ ಬಳಕೆ ಜಾಸ್ತಿ ಇದೆ. ಭಾರತದಲ್ಲಿ 611 ಮಿಲಿಯನ್​ಗಿಂತಲೂ ಹೆಚ್ಚು ಡೌನ್​ಲೋಡ್​ ಇದೆ. ಲಡಾಖ್​ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ಉತ್ಪನ್ನ ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದ್ದು, ಅದರ ಪರಿಣಾಮವಾಗಿ ಇದೀಗ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

LEAVE A REPLY

Please enter your comment!
Please enter your name here