Home Latest ಬೆಂಗಳೂರಿನ ಲೋಕಲ್ ಹುಡುಗರು ಮಾಡಿದ ಟೈಟಾನ್ ಕಪ್ ಮೋಡಿ: ಇದು ಶ್ರೀನಾಥ್-ಕುಂಬ್ಳೆ  ಜುಗಲ್ ಬಂದಿ

ಬೆಂಗಳೂರಿನ ಲೋಕಲ್ ಹುಡುಗರು ಮಾಡಿದ ಟೈಟಾನ್ ಕಪ್ ಮೋಡಿ: ಇದು ಶ್ರೀನಾಥ್-ಕುಂಬ್ಳೆ  ಜುಗಲ್ ಬಂದಿ

163
0
SHARE

ಯುವಿಷ್ಕಾ ರವಿಕುಮಾರ್             

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪೆವಿಲಿಯನ್ನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರು, ಪಿಚ್ ನಲ್ಲಿ ರನ್ ಗಳ ಸುರಿಮಳೆ ಹರಿಯುತ್ತಿದ್ದರೆ ಇಲ್ಲಿ ರೋಮಾಂಚನದಿಂದ ಕುಪ್ಪಳಿಸುತ್ತಿದ್ದರು. ಪ್ರತಿ ರನ್ನಿಗೂ ಸ್ವರ್ಗ ಸುಖ, ಇಡೀ ಕ್ರೀಡಾಂಗಣ ಅವತ್ತು ಬೆಂಗಳೂರು ಲೋಕಲ್ ಹುಡುಗರ ಆಟಕ್ಕೆ  ಮನಸೋತು ಕುಣಿದು ಕುಪ್ಪಳಿಸಿತು. ಅದು ಟೈಟಾನ್ ಕಪ್ ನ ಸೆಮಿಫೈನಲ್ ಪಂದ್ಯ. ಅಂದು ಮುಖಾಮುಖಿಯಾದವರು ವಿಶ್ವಶ್ರೇಷ್ಠ ಆಸ್ಟ್ರೇಲಿಯಾ ಮತ್ತು ಭಾರತ ತಂಡ

1996 ಆಗ ತಾನೇ ಮುಗಿದಿದ್ದ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಮೂರು ತಿಂಗಳ ನಂತರ ಭಾರತದ ಪ್ರವಾಸ ಕೈಗೊಂಡಿತ್ತು. ಜೊತೆಗೆ ದಕ್ಷಿಣ ಆಫ್ರಿಕಾ. ಮೂರು ದೇಶಗಳ  ಟೈಟಾನ್ ತ್ರಿಕೋನ ಸ್ಪರ್ಧೆ.

ಸುಮಾರು ಎರಡು ವಾರಗಳ ಕಾಲ ನಡೆದ ಈ ಮೂರು ದೇಶಗಳ ಕಾದಾಟ ಒಂದು ಹಂತಕ್ಕೆ ಬಂದು ತಲುಪಿತ್ತು ಅದು ಸೆಮಿಫೈನಲ್ ಪಂದ್ಯ .ಇಲ್ಲಿ ಮುಖಾಮುಖೀಯಾದವರು ಆಸ್ಟ್ರೇಲಿಯಾ ಮತ್ತು ಭಾರತ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಏಳು ವಿಕೆಟ್ಗಳನ್ನು ಕಳೆದುಕೊಂಡು  215 ರನ್ಗಳನ್ನು ಗಳಿಸಿತು.

ಮೊಹಮ್ಮದ್ ಅಜರುದ್ದೀನ್  ನೇತೃತ್ವದ ಭಾರತ ತಂಡ ಶಕ್ತವಾಗಿಯೇ  ಈ ರನ್ನನ್ನು ಎದುರಿಸುವಷ್ಟು ಸಾಮರ್ಥ್ಯವನ್ನು ಹೊಂದಿತ್ತು. ಸಿಡಿಲಬ್ಬರದ ಬ್ಯಾಟ್ಸ್ಮನ್ ತೆಂಡೂಲ್ಕರ್,  ಗೋಡೆಯಂತೆ ರಾಹುಲ್ ಓಪನಿಂಗ್ ಬ್ಯಾಟ್ಸ್ಮನ್ ಸುಚಿತ್ ಸೋಮಸುಂದರ್. ಪಿಂಚ್ ಹಿಟ್ಟರ್ ನಂಥ ಅಜಯ್ ಜಡೇಜ  ಭಾರತ ತಂಡದಲ್ಲಿ ಇದ್ದರು. ಇಂತಹ ಘಟಾನುಘಟಿಗಳನ್ನೇ ಹೊಂದಿದ್ದ ಭಾರತ ತಂಡಕ್ಕೆ ಆಸ್ಟ್ರೇಲಿಯಾ ನೀಡಿದ್ದ 215ರನ್ ಗಳು ಯಾವ ಲೆಕ್ಕ. ಆದರೆ ಅವತ್ತು ಆಗಿದ್ದೇ ಬೇರೆ .

41 ಓವರ್ ಗಳು ಮುಗಿಯುವಷ್ಟರಲ್ಲಿ ಭಾರತದ ಘಟಾನುಘಟಿ ಬ್ಯಾಟ್ಸ್ ಮನ್ ಗಳು ಆಸ್ಟ್ರೇಲಿಯಾದ ಕರಾರುವಕ್ಕಾದ ಬೌಲಿಂಗ್ ದಾಳಿಗೆ  ನೆಲಗಡಲೆ ಗಳಂತೆ ನೆಲಕ್ಕುರುಳಿದವು. ಆಗ ಭಾರತದ ರನ್ 160 ಕ್ಕೆ 7 ವಿಕೆಟ್.  ಒಂದು ಕಡೆ ಸಚಿನ್ ಸ್ಥಿರವಾಗಿ ನೆಲೆ ನಿಂತಿದ್ದರು ಆಗ ಕ್ರೀಸ್ ಗೆ ಬಂದವರು ಜಾವಗಲ್ ಶ್ರೀನಾಥ್ .

ಶ್ರೀನಾಥ್ ಬಂದು ಎದುರಿಸಿದ ಮೊದಲ ಬಾಲ್ ಗೆ ಬೌಂಡರಿ ಬಾರಿಸಿ ವಿಶ್ವಾಸವನ್ನು ಹುಟ್ಟಿಸಿದರು . ಸ್ಟೀವ್ ವಾ ಬೌಲಿಂಗ್ ಕರಾರುವಕ್ಕಾಗಿ ವಿಕೆಟ್ಗಳ ಲೈನ್ ಲ್ಲೆ  ಮಾಡ್ತಿದ್ರು.  ಈ ಸಂದರ್ಭದಲ್ಲಿ ಭಾರತಕ್ಕೆ ಇನ್ನೊಂದು ಆಘಾತ ಕಾದಿತ್ತು ಸ್ಟೀವ್ ವಾ ಓವರ್ ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್  LBW ಗೆ ಔಟ್ ಆದರು. 88 ರನ್ ಗಳಿಸಿದ್ದ ತೆಂಡೂಲ್ಕರ್ ಔಟ್ ಆಗಿದ್ದು ಭಾರತಕ್ಕೆ ಆ ಸಂದರ್ಭದಲ್ಲಿ ಭಾರಿ ದೊಡ್ಡ ಹೊಡೆತವನ್ನೇ ನೀಡಿತ್ತು. ಆಗ ಭಾರತದ ಮೊತ್ತ 166 ರನ್ಗಳಿಗೆ ಎಂಟು ವಿಕೆಟ್. ಅದು ಹೇಳಿ ಕೇಳಿ ಸೆಮಿ ಫೈನಲ್ ಪಂದ್ಯ.  ಟೈಟಾನ್ ಕಂಪನಿಯವರು ಆ ಪಂದ್ಯಕ್ಕೆ ಪ್ರಾಯೋಜಕತ್ವವನ್ನು ನೀಡಿದ್ದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಲವತ್ತು ಸಾವಿರ ಪ್ರೇಕ್ಷಕರಿಂದ ತುಂಬಿ ತುಳುಕಿತ್ತು . ಆಗ ಕ್ರೀಸ್ ಗೆ ಬಂದವರು ಜಂಬೋ ಅನಿಲ್ ಕುಂಬ್ಳೆ

ಉಳಿದಿರುವುದು ಎಂಟು ಓವರ್.  ನಲವತ್ತೆರಡು ಬಾಲ್ ಗೆ  51 ರನ್ ಬೇಕಿತ್ತು.  ಅದು ಬಹಳ ಕಠಿಣ ಸಂದರ್ಭ. ಕ್ರಿಸ್ ನಲ್ಲಿ ಇರುವುದು ಬೆಂಗಳೂರಿನ ಲೋಕಲ್ ಹುಡುಗರಾದ ಶ್ರೀನಾಥ್ ಮತ್ತು ಕುಂಬ್ಳೆ. ಸಚಿನ್ ಔಟ್ ಆದರೂ ಧೃತಿಗೆಡದೆ ಶ್ರೀನಾಥ್ ಮುಂದಿನ ಬಾಲ್ ನಲ್ಲಿ ಚೆಂಡನ್ನ ಸ್ಟ್ರೈಟ್ ಕ್ರೀಡಾಂಗಣದ ಆಚೆಗೆ ಕಳುಹಿಸಿದರು. ಇಡೀ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿದ್ಯುತ್ ಸಂಚಾರವಾದ ಭಾವ.  ಒಂದು ಕ್ಷಣ ರೋಮಾಂಚನಗೊಂಡ ಪ್ರೇಕ್ಷಕರು,  ಭರವಸೆಯೊಂದಿಗೆ ಬಿಟ್ಟ ಕಣ್ಣಿನಿಂದ ಕ್ರೀಡಾಂಗಣದತ್ತ ಎಲ್ಲರ ನೋಟ,  ಟಿವಿ ಮುಂದೆ ಕುಳಿತಿದ್ದ  ಅಂದಿನ ನೂರು ಕೋಟಿ ಪ್ರೇಕ್ಷಕರಿಗೆ ಇದು ಹೊಸ ಭರವಸೆಯ ಜೊತೆಯಾಟವಾಗಿತ್ತು.

ಈ ಜೋಡಿ ಭರವಸೆಯನ್ನು ಹುಸಿಗೊಳಿಸಲಿಲ್ಲ. ಕುಂಬ್ಳೆ ಎದುರಿಸಿದ ಮೊದಲ ಬಾಲನ್ನೇ ಹುಕ್ ಮಾಡಿ  ಮಾಡಿ ಬೌಂಡರಿ ಗೆರೆಯನ್ನು ದಾಟಿಸಿದರು. ನಲವತ್ತು ಸಾವಿರ ಪ್ರೇಕ್ಷಕರ ಸಂತೋಷವನ್ನು ಹಿಡಿದಿರುವವರು ಯಾರು.  ಒಂದು ಕಡೆ ಶ್ರೀನಾಥ್ ಸಿಕ್ಸರ್  ಮತ್ತೊಂದು ಕಡೆ ಕುಂಬ್ಳೆ ಬೌಂಡರಿ ವಾಹ್ವಾ ಅದ್ಭುತ ಆಟ. ಪೆವಿಲಿಯನ್ನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಹೆಂಗಸರಂತೂ ಹುಚ್ಚೆದ್ದು ಕುಣಿದು ಕುಣಿದು ಕುಪ್ಪಳಿಸುತ್ತಿದ್ದರು ಅಂದ ಹಾಗೆ ಅವರು ಬೇರೆ ಯಾರೂ ಅಲ್ಲ ಅನಿಲ್ ಕುಂಬ್ಳೆ ಅಜ್ಜಿ ಮತ್ತು ತಾಯಿ .

ಆಸ್ಟ್ರೇಲಿಯಾದ ಮಾರಕ ಬೌಲರ್ ಗ್ಲೆನ್  ಮೆಗ್ರಾತ್, ಶೇನ್ ವಾರ್ನ್, ಸ್ಟೀವ್ ವಾ.  ರನ್ನ ಭರವಸೆಯೊಂದಿಗೆ ಚಚ್ಚಿ  ಬಿಸಾಡಿದ ಅನಿಲ್ ಕುಂಬ್ಳೆ ಮತ್ತು ಶ್ರೀನಾಥ್ ಜೋಡಿ ಕೊನೆಗೂ ಒಂದು ಓವರ್ ಬಾಕಿ ಇರುವಂತೆಯೇ ಭಾರತಕ್ಕೆ ಫೈನಲ್ ಹಾದಿಯನ್ನು ಸುಗಮ ವಾಗಿ ಮಾಡಿಕೊಟ್ಟಿತು ಬೆಂಗಳೂರಿನ ಲೋಕಲ್ ಬಾಯ್ಸ್ ಜೋಡಿ .

 

23 ಬಾಲ್ ಗಳನ್ನು ಎದುರಿಸಿದ ಶ್ರೀನಾಥ್ 30 ರನ್ ಗಳಿಸಿದ್ದರು. ಅನಿಲ್ ಕುಂಬ್ಳೆ 19 ಬಾಲ್ಗಳನ್ನು ಎದುರಿಸಿ 16 ರನ್ ಗಳನ್ನು ಗಳಿಸಿ ಭಾರತಕ್ಕೆ ಅದ್ಭುತವಾದ ಜಯವನ್ನು ತಂದುಕೊಟ್ಟರು. 88 ರನ್ ಗಳನ್ನು ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅಂದಿನ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರೆ, ಜನಗಳ ಪಂದ್ಯ ಪುರುಷೋತ್ತಮರಾಗಿದ್ದು ಮಾತ್ರ ನಮ್ಮ ಲೋಕಲ್ ಬಾಯ್ಸ್ ..!!!

LEAVE A REPLY

Please enter your comment!
Please enter your name here