
‘ತಿಥಿ’ ಸಿನಿಮಾದ ನಟಿ ಪೂಜಾ ನಿಶ್ವಿತಾರ್ಥ: ಡಿಸೆಂಬರ್ನಲ್ಲಿ ಮದುವೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡದ ಹೆಮ್ಮೆಯ ಸಿನಿಮಾ ತಿಥಿ. ಕನ್ನಡದ ಸಿನಿಮಾವನ್ನು ಆಮಿರ್ ಖಾನ್ರಿಂದ ಹಿಡಿದು ಸೂಪರ್ಸ್ಟಾರ್ಗಳೆಲ್ಲಾ ಮೆಚ್ಚಿಕೊಂಡಿದ್ದರು. ಈ ಸಿನಿಮಾ ಮೂಲಕ ಅನೇಕ ಪ್ರತಿಭೆಗಳು ಪರಚಿತರಾಗಿದ್ದು, ಅವರಲ್ಲಿ ನಾಯಕಿ ಪೂಜಾ ಕೂಡ ಒಬ್ಬರು. ಹಳ್ಳಿ ಹುಡುಗಿಯ ಪಾತ್ರದಲ್ಲಿ ಪೂಜಾ ಪ್ರೇಕ್ಷಕರ ಮನಗೆದಿದ್ದರು. ಈ ಸಿನಿಮಾ ಬಳಿಕ ಪೂಜಾ ಕೆಲವು ಸಿನಿಮಾಗಳಲ್ಲಿ ನಟಸಿದರು ಆದರು ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿಲ್ಲ. ಇದೀಗ ಪೂಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಸಿನಿಮಾ ವಿಚಾರಕ್ಕಲ್ಲ, ಬದಲಾಗಿ ಮದುವೆಯ ವಿಚಾರವಾಗಿ.
ಹೌದು, ನಟಿ ಪೂಜಾಗೆ ಕಂಕಣಭಾಗ್ಯ ಕೂಡಿ ಬಂದಿದೆ. ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪೂಜಾ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲು ಸಿದ್ಧವಾರಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದಿದ್ದ ಪೂಜಾ ಓದಿನ ಕಡೆ ಹೆಚ್ಚು ಗಮನ ಹರಿಸಿದ್ದರು. ಬಳಿಕ ಸಿನಿಮಾ ಬಿಟ್ಟು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು,ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಅಂದಹಾಗೆ ಪೂಜಾ ಮದುವೆಯಾಗುತ್ತಿರುವ ಹುಡುಗ ಸಾಫ್ಟ್ ವೇರ್ ಇಂಜಿನಿಯರ್ ಪ್ರೇಮ್. ಈಗಾಗಲೇ ಪ್ರೇಮ್ ಜೊತೆ ಪೂಜಾ ನಿಶ್ಚಿತಾರ್ಥ ನಡೆದಿದ್ದು ಸದ್ಯ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಿಥಿ ಸಿನಿಮಾದ ಕಾವೇರಿಗೆ ಕಂಕಣ ಭಾಗ್ಯ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಶುಭಾಶಯ ಕೋರಿದ್ದಾರೆ.
ಡಿಸೆಂಬರ್ 3 ಮತ್ತು 4 ರಂದು ಪೂಜಾ ಮತ್ತು ಪ್ರೇಮ್ ಮದುವೆ ನೆರವೇರಲಿದೆ. ತಿಥಿ ಸಿನಿಮಾ ಬಂದಾಗ ದಿಢೀರ್ ಅಂತ ಪೂಜಾ ಫೇಮಸ್ ಆದರು. ಕುರಿ ಕಾಯುವ ಕಾವೇರಿಯ ಪಾತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದರು. ಈ ಸಿನಿಮಾ ಮೂಲಕ ರಾಜ್ಯ ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ನಂತರ ಹಲವು ಸಿನಿಮಾಗಳಲ್ಲೂ ನಟಿಸಿದರು. ತಿಥಿ ಸಿನಿಮಾಗೆ ಸಿಕ್ಕಷ್ಟು ಯಶಸ್ಸು ನಂತರದ ಸಿನಿಮಾಗಳಿಗೆ ಸಿಗಲಿಲ್ಲ. ಬಳಿಕ ಸಿನಿಮಾ ರಂಗದಿಂದನೇ ದೂರವಾದರು. ಇದೀಗ ಪ್ರೇಮ್ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.