
ಫಲಾನುಭವಿಗಳಿಗೆ “ಸಂಧ್ಯಾ ಸುರಕ್ಷಾ ಯೋಜನೆ’’ ಅಡಿ ಪಿಂಚಣಿ ಬಾಂಡ್ ವಿತರಣೆ
ಬೆಂಗಳೂರು: ಪೀಣ್ಯ ದಾಸರಹಳ್ಳಿ ಕ್ಷೇತ್ರದ 65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಬಾಂಡ್ ಅನ್ನು ಚಿಕ್ಕಬಾಣವಾರದ ನಿವಾಸಿಗಳಿಗೆ ಬಿಜೆಪಿ ಹಿರಿಯ ಮಹಿಳಾ ಮುಖಂಡರಾದ ಭಾಗ್ಯಮ್ಮ ರವರ ನೇತೃತ್ವದಲ್ಲಿ ಫಲಾನುಭವಿಗಳಿಗೆ “ಸಂಧ್ಯಾ ಸುರಕ್ಷಾ ಯೋಜನೆ ಅಡಿ ಪಿಂಚಣಿ ಬಾಂಡ್ ದಾಸರಹಳ್ಳಿ ಮಾಜಿ ಶಾಸಕ ಎಸ್.ಮುನಿರಾಜು ವಿತರಿಸಿದರು.
ನಂತರ ಮಾತನಾಡಿ ಕರ್ನಾಟಕದ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ರೂಪದಲ್ಲಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆ ಪ್ರಾರಂಭಿಸಿದೆ. ಇಳಿವಯಸ್ಸಿನಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಜೀವಿಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ 2007-08ರಿಂದ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಅರ್ಹ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 1,200 ರೂಪಾಯಿ ಮಾಸಾಶನ ಪಡೆಯಬಹುದಾಗಿದ್ದು, ಕ್ಷೇತ್ರದ ಹಿರಿಯ ನಾಗರೀಕರಿಗೆ ಈ ಯೋಜನೆಯನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಎಂದು ತಿಳಿಸಿದರು.