ಇಂದು ಬಕ್ರೀದ್ ಹಬ್ಬ ಹಿನ್ನೆಲೆ: ಈದ್ಗಾ ಮೈದಾನದಲ್ಲಿ ಪೊಲೀಸರ ಬಂದೋಬಸ್ತ್

ಬೆಂಗಳೂರು

ಬೆಂಗಳೂರು: ಬಕ್ರೀದ್​ ಹಬ್ಬದ ಹಿನ್ನೆಲೆ  ಬೆಂಗಳೂರಿನ ಚಾಮರಾಜಪೇಟೆ ನಗರವನ್ನು ಫುಲ್ ಅಲರ್ಟ್ ಮಾಡಲಾಗಿದೆ. ಈದ್ಗಾ ಮೈದಾನ ವಿವಾದ ಹಿನ್ನೆಲೆ ಟೈಟ್​ ಸೆಕ್ಯೂರಿಟಿ ನೀಡಲಾಗಿದೆ. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು,

ಬೆಳಗ್ಗೆ 9 ಗಂಟೆಗೆ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಪ್ರಾರ್ಥನೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಲಿದ್ದಾರೆ . ಬೆಳಗ್ಗೆ 9.30ಕ್ಕೆ ಈದ್ಗಾ ಮೈದಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.  ಚಾಮರಾಜಪೇಟೆ ಈದ್ಗಾ ಮೈದಾನ ವಿವಾದದ ಸುಳಿಗೆ ಸಿಲುಕಿದ್ದು, ಈದ್ಗಾ ಮೈದಾನ ವಿಚಾರವಾಗಿ ಮಂಗಳವಾರ ಬಂದ್​ ನಡೆಯಲಿದೆ.  ಮೈದಾನ ಹಿಂದೂಗಳ ಬಳಕೆಗೂ ನೀಡುವಂತೆ ಕೆಲ ಸಂಘಟನೆಗಳ ಆಗ್ರಹ ಮಾಡಲಾಗಿದೆ.

Leave a Reply

Your email address will not be published.