ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್ ಕಿರಿಕಿರಿ: ಇಡೀ ರಸ್ತೆ ಖಾಲಿ ಇದ್ದರೂ ಟ್ರಾಫಿಕ್ ಸಿಗ್ನಲ್ ಗಳ ಕೆಲಸ

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿಯೂ ಸವಾರರಿಗೆ ಟ್ರಾಫಿಕ್ ಸಿಗ್ನಲ್ ಕಿರಿಕಿರಿ ಉಂಟಾಗಿದೆ. ಈ ಮೊದಲು ಸಾಮಾನ್ಯ ವಾಗಿ ರಾತ್ರಿ 11ರ ಬಳಿಕ ಪ್ರಮುಖ ಜಂಕ್ಷನ್‌ಗಳಲ್ಲಿನ ಸಿಗ್ನಲ್‌ಗಳು ಬಿಟ್ಟರೆ ಇತರೆ ಬಹುತೇಕ ಕಡೆಗಳಲ್ಲಿ ಬಂದ್‌ ಆಗಿರುತ್ತಿದ್ದವು. ಆದರೆ, ಕೆಲದಿನಗಳಿಂದ ಏಕಾಏಕಿ ಎಲ್ಲ ಸಿಗ್ನಲ್‌ಗಳು ಹನ್ನೊಂದು ಗಂಟೆ ಬಳಿಕವೂ ಸತತವಾಗಿ ಕೆಲಸ ಮಾಡುತ್ತಿವೆ.

ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಟ್ರಾಫಿಕ್‌ ಸಿಗ್ನಲ್‌ ಕೆಲಸ ಮಾಡುವುದು ಸಾಮಾನ್ಯ. ಆದರೆ, ತಡರಾತ್ರಿ ಇಡೀ ರಸ್ತೆ ಖಾಲಿ ಇದ್ದರೂ ಟ್ರಾಫಿಕ್‌ ಸಿಗ್ನಲ್‌ಗಳು ಕೆಲಸ ಮಾಡುತ್ತಿರುವುದರಿಂದ ವಾಹನ ಸವಾರರಲ್ಲಿ ಗೊಂದಲ ಉಂಟಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published.