Home District ಅನಗತ್ಯ ಸಂಚಾರಿಗಳಿಗೆ ದಂಡ; ಕರ್ಫ್ಯೂ ನಿಯಮ ಉಲಂಘಿಸಿದ‌ ಅಂಗಡಿಗಳಿಗೆ ಮೇಲೆ ಪೊಲೀಸ್ ಪ್ರಕರಣ

ಅನಗತ್ಯ ಸಂಚಾರಿಗಳಿಗೆ ದಂಡ; ಕರ್ಫ್ಯೂ ನಿಯಮ ಉಲಂಘಿಸಿದ‌ ಅಂಗಡಿಗಳಿಗೆ ಮೇಲೆ ಪೊಲೀಸ್ ಪ್ರಕರಣ

372
0

ಚಾಮರಾಜನಗರ; ಅನಗತ್ಯ ಸಂಚಾರಿಗಳಿಗೆ ದಂಡ, ಕರ್ಫ್ಯೂ ನಿಯಮ ಉಲಂಘಿಸಿದ‌ ಅಂಗಡಿಗಳಿಗೆ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು.

ಅನಗತ್ಯ ಸಂಚಾರಿಗಳ ಅಟ್ಟಾಡಿಸಿದ ಪೊಲೀಸರು ಕರ್ಫ್ಯೂ ಸಮಯದ ನಿಯಮ ಉಲಂಘಿಸಿ ವ್ಯಾಪಾರ ಚಟುವಟಿಕೆಯಲ್ಲಿ‌ ತೊಡಗಿದ್ದ ಅಂಗಡಿಗಳನ್ನು ಬಂದ್ ಮಾಡಿಸಿ ಪ್ರಕರಣ ದಾಖಲಿಸಿದ್ದಾರೆ.ನೆನ್ನೆಯಷ್ಟೆ ಜಿಲ್ಲಾಧಿಕಾರಿ ಎಂ.ಆರ್.ರವಿ ಅನಗತ್ಯ ಸಂಚಾರಿಗಳ ನಿಯಂತ್ರಣ ಪೊಲೀಸರು ಹಾಕಬೇಕು. ನಿಯಮ ಪಾಲನೆಯಲ್ಲಿ ಅಸಡ್ಡೆ ತೋರಿದರೆ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿ ಎಂಬ ಸೂಚನೆಯ ಹಿನ್ನಲೆ ಇಂದು ಪೊಲೀಸರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಾಂದ್ಯತ ಮಿಂಚಿನ ಕಾರ್ಯಚರಣೆ ನಡೆಸಿದ್ದಾರೆ.

ಪಿಎಸ್ಐ ತಾಜುವುದ್ದೀನ್ ಹಾಗೂ ಪಿಎಸ್ ಐ ಮಾದೇಗೌಡರ ಜಂಟಿ ಕಾರ್ಯಚರಣೆ ನಡೆಸಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳು‌ ಹಾಗೂ ಬಡಾವಣೆಗೆ ತೆರಳಿ ಗುಂಪು ಗುಂಪಾಗಿ ನಿಂತು- ಕುಂತು ಕಾಲಹರಣ ಮಾಡುತ್ತಿದ್ದವರು ಹಾಗೂ ಬೈಕ್ ಗಳಲ್ಲಿ ಅನಗತ್ಯವಾಗಿ ಸಂಚರಿಸುವ ಗೆ ಎಚ್ಚರಿಕೆ ನೀಡಿ. ಕರ್ಫ್ಯೂ ಸಮಯದ ನಿಯಮ ಉಲಂಘಿಸಿ ವ್ಯಾಪಾರ ಚಟುವಟಿಕೆಯಲ್ಲಿ‌ ತೊಡಗಿದ್ದ ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಸುಖಾಸುಮ್ಮನೆ ಅಡ್ಡಾಡುತ್ತ ಮಾಸ್ಕ್ ಹಾಕದೇ ಸುತ್ತುತ್ತಿದ್ದವರಿಗೆ ದಂಡದ ಬಿಸಿ ಮುಟ್ಟಿಸಿದ್ದಲ್ಲದೆ. ಇನ್ನೊಮ್ಮೆ ಈ ರೀತಿ‌ ನಡೆದು ಕೊಂಡರೆ ಕಾನೂನು ಕ್ರಮ ಜರುಗಿಸುವುದುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನೆನ್ನೆಯಷ್ಟೆ ಜಿಲ್ಲಾಧಿಕಾರಿ ಎಂ.ಆರ್.ರವಿ ಅನಗತ್ಯ ಸಂಚಾರಿಗಳ ನಿಯಂತ್ರಣ ಪೊಲೀಸರು ಹಾಕಬೇಕು. ನಿಯಮ ಪಾಲನೆಯಲ್ಲಿ ಅಸಡ್ಡೆ ತೋರಿದರೆ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿ ಎಂಬ ಸೂಚನೆಯ ಹಿನ್ನಲೆ ಇಂದು ಪೊಲೀಸರು ಪಟ್ಟಣದಾಂದ್ಯತ ಮಿಂಚಿನ ಕಾರ್ಯಚರಣೆ ನಡೆಸಿ ಸುಖಾಸುಮ್ಮನೆ ಓಡಾಡುವರಿಗೆ ಬ್ರೇಕ್ ಹಾಕಿದ್ದಾರೆ.

Previous articleವಿಧಾನಸಭಾ ಕ್ಷೇತ್ರದ ಚುನಾವಣಾ ಮತ ಎಣಿಕೆಗೆ ಮಾಡಲಾದ ಸಕಲ ಸಿದ್ಧತೆಗಳನ್ನು ಗೊತ್ತೇ?
Next articleಕೋವಿಡ್ ವಾರ್ಡ್‌ಗೆ ಸ್ವತಃ ಭೇಟಿ ಕೊಟ್ಟು ಪರಿಶೀಲಿಸಿದ ಸಿಟಿ ರವಿ

LEAVE A REPLY

Please enter your comment!
Please enter your name here